2002ರ ಗಂಗೂಲಿ ಕ್ಷಣ ರಿಪೀಟ್ 
ಕ್ರಿಕೆಟ್

2002ರ ಗಂಗೂಲಿ ಕ್ಷಣ ರಿಪೀಟ್​! 24 ವರ್ಷಗಳ ಬಳಿಕ ಲಾರ್ಡ್ಸ್​ನಲ್ಲಿ ಮರುಕಳಿಸಿತು ಅದೇ ರೀತಿಯ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • 2002ರಲ್ಲಿ ಲಾರ್ಡ್ಸ್​​ ಅಂಗಳದಲ್ಲಿ ಶರ್ಟ್​ ಬಿಚ್ಚಿ ಕುಣಿದಿದ್ದ ಸೌರವ್ ಗಂಗೂಲಿ
  • 24 ವರ್ಷಗಳ ಬಳಿಕ ಅದೇ ರೀತಿಯ ಸಂಭ್ರಮ ಮತ್ತೇ ಲಾರ್ಡ್ಸ್​​ನಲ್ಲಿ ರಿಪೀಟ್​
ಲಂಡನ್: 2002ರಲ್ಲಿ ಲಾರ್ಡ್ಸ್​​ ಅಂಗಳದಲ್ಲಿ ಟೀಮ್ ಇಂಡಿಯಾ ಗೆದ್ದಾಗ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ, ತಮ್ಮ ಜೆರ್ಸಿ ಕಳಚಿ, ಶರ್ಟ್​ ಅನ್ನು ಬೀಸುತ್ತಾ ಸಂಭ್ರಮಿಸಿದರು. ಆದರೀಗ, 24 ವರ್ಷಗಳ ಬಳಿಕ ಅದೇ ರೀತಿಯ ಸಂಭ್ರಮ ಮತ್ತೇ ಲಾರ್ಡ್ಸ್​​ನಲ್ಲಿ ಮರುಕಳಿಸಿರುವುದು ಸದ್ಯ ಕ್ರೀಡಾ ಅಭಿಮಾನಿಗಳಲ್ಲಿ ಖುಷಿ ತಂದಿದೆ.
2002ರ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಗೆಲುವಿನ ಬಳಿಕ ಸೌರವ್ ಗಂಗೂಲಿ ಶರ್ಟ್ ತೆಗೆದು ಹಾರಿಸುತ್ತಾ ಸಂಭ್ರಮಿಸಿದ ಐತಿಹಾಸಿಕ ಕ್ಷಣವನ್ನು 24 ವರ್ಷಗಳ ಬಳಿಕ ಭಾರತೀಯ ಕ್ರಿಕೆಟಿಗರು ಮತ್ತೆ ಮರುಸೃಷ್ಟಿಸಿದ್ದಾರೆ. ಈ ಬಾರಿ ಭಾರತದ ಮಿಕ್ಸ್‌ಡ್ ಡಿಸೆಬಿಲಿಟಿ (ವಿಶೇಷ ಚೇತನ) ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಪಂದ್ಯದಲ್ಲಿ 118 ರನ್‌ಗಳ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ತಂಡವು ಲಾರ್ಡ್ಸ್ ಅಂಗಳದಲ್ಲಿ ಶರ್ಟ್ ಗಂಗೂಲಿ ಅವರ ಸಂಭ್ರಮದ ಕ್ಷಣವನ್ನು ರಿಪೀಟ್ ಮಾಡಿದೆ.
'ಫೆಸ್ಟಿವಲ್ ಆಫ್ ಡಿಸೆಬಿಲಿಟಿ ಕ್ರಿಕೆಟ್' ಸರಣಿಯ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಅರ್ಜುನ್ ಗವಾರೆ, ಮೇಜರ್ ಮಗ್ರೆ ಹಾಗೂ ಸಾಯಿ ಆಕಾಶ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 206 ರನ್‌ಗಳ ಮೊತ್ತ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬ್ಯಾಟರ್​ಗಳು ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದರು. ಕೇವಲ 88 ರನ್‌ಗೆ ಆಲ್ಔಟ್ ಆದರು. ಈ ಮೂಲಕ 118 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಒಟ್ಟು ಏಳು ಪಂದ್ಯಗಳ ಸರಣಿಯಲ್ಲಿ 4-3 ಅಂತರದಲ್ಲಿ ಗೆಲುವು ಕಂಡಿತು,(ಏಜೆನ್ಸೀಸ್).