ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕುಲದೀಪ್ ಯಾದವ್
ಲಖನೌ: ಸತತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ (Kuldeep yadav) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅವರು ಮಾರ್ಚ್ 14ರಂದು ಉತ್ತರಾಖಂಡದ ಮಸ್ಸೂರಿಯ ರೆಸಾರ್ಟ್ನಲ್ಲಿ ಗೆಳತಿ ವಂಶಿಕಾ ಅವರನ್ನು ವರಿಸಲಿದ್ದಾರೆ.
ಮಾರ್ಚ್ 13ರಂದು ಹಳದಿ ಮತ್ತು ಮೆಹಂದಿ ಸಮಾರಂಭ ನಡೆಯಲಿದೆ. ಮಾರ್ಚ್ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ಜೂನ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.
ಕಳೆದ ವರ್ಷ ನವೆಂಬರ್ನಲ್ಲೇ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು. ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಏಕಮಾತ್ರ ಪಂದ್ಯದಲ್ಲಿ ಆಡಿದ್ದ ಕುಲದೀಪ್ 14 ರನ್ಗಳಿಗೆ 1 ವಿಕೆಟ್ ಕಬಳಿಸಿದ್ದರು.