ಸ್ಪಿನ್ನರ್ ರವೀಂದ್ರ ಜಡೇಜಾ ವಿಕೆಟ್ ಪಡೆದ ನಂತರ ಸಂಭ್ರಮಿಸುತ್ತಿರುವ ಕ್ಷಣ Ravindra Jadeja celebrates
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ 2 ನೇ ದಿನದಾಟದಲ್ಲಿ ಭಾರತ ಮೆಲುಗೈ ಸಾಧಿಸಿದೆ. ಅಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿ ಹರಿಣಗಳು 93 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದೆ.
ಎರೆಡನೇಯ ದಿನದಲ್ಲಿ ಬ್ಯಾಟಿಂಗ್ ಬಂದ ಕೆ.ಎಲ್ ರಾಹುಲ್(39 ರನ್) ಮತ್ತು ವಾಷಿಂಗ್ಟನ್ ಸುಂದರ್ 29ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಶುಭ್ಮನ್ ಗಿಲ್ 4 ರನ್ ರಿಟೈರ್ ಹಾರ್ಟ್ ಆಗಿ ಹೊರನಡೆದರು. ಮಧ್ಯಮಾ ಕ್ರಮಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಪಂತ್ 27 ರನ್, ರವೀಂದ್ರ ಜಡೇಜಾ 27, ಧ್ರುವ್ ಜುರೆಲ್ 14 ರನ್ಗಳಿಸಿ ತಂಡದ ದಿಢೀರ್ ಕುಸಿತಕ್ಕೆ ಕಾರಣರಾದರು.
ಬೌಲಿಂಗ್ನಲ್ಲಿ ಹರಿಣಗಳ ಪರವಾಗಿ ಮಾರ್ಕೊ ಜಾನ್ಸೆನ್ 3 ವಿಕೆಟ್ ಪಡೆದುಕೊಂಡರು. ಸ್ಪಿನ್ನರ್ಗಳಾದ ಹಾರ್ಮರ್ 4 ವಿಕೆಟ್ ಕಬಳಿಸಿದರೆ, ಕೇಶವ್ ಮಹಾರಾಜ್ 3 ವಿಕೆಟ್ ಕಿತ್ತು ಭಾರತ 189 ರನ್ಗಳಿಗೆ ಅಲೌಟ್ ಆಗುವಂತೆ ಮಾಡಿದರು.
ಭಾರತ ಇನ್ನಿಂಗ್ಸ್ ಮುಗಿದ ನಂತರ 2 ನೇಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾವು ಆರಂಭಿಕ ಆಟಗಾರ ರಿಕಲ್ಟನ್ 11 ರನ್ಗಳಿಸಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ಯಾಟರ್ ಜಡೇಜಾ ಸ್ಪಿನ್ ದಾಳಿಗೆ ಐಡೆನ್ ಮಾರ್ಕ್ರಾಮ್ 4 ರನ್, ವಿಯಾನ್ ಮುಲ್ಡರ್ 11 ರನ್, ಟೋನಿ ಡಿ ಜೋರ್ಜಿ 2 ರನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 5 ರನ್ಗಳಿಸಿ ಪೇವಿಯನ್ ಸೇರಿಕೊಂಡರು.
ಎರೆಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 93 ರನ್ 7 ಕಳೆದುಕೊಂಡಿದೆ. ಭಾರತದ ಪರವಾಗಿ, ರವೀಂದ್ರ ಜಡೇಜಾ 4 ವಿಕೆಟ್, ಕುಲದೀಪ್ ಯಾದವ್ 2 ವಿಕೆಟ್ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ. ಹರಿಣಗಳ ನಾಯಕ ಟೆಂಬಾ ಬವುಮಾ 29 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ,(ಏಜೆನ್ಸೀಸ್).