IND vs SA ಮೊದಲ ಟಿ20 ಪಂದ್ಯ
- ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ
- ಕಟಕ್ನಲ್ಲಿ ನಡೆಯಲಿದೆ ಮೊದಲ ಟಿ20
- ಹರಿಣರ ಪಡೆಯ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಹೇಳಿಕೆ ವೈರಲ್
ನವದೆಹಲಿ: ಇಂದು ಕಟಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಶುಭಾರಂಭಕ್ಕೆ ಎದುರುನೋಡುತ್ತಿದೆ. ಇತ್ತೀಚೆಗಷ್ಟೇ, ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಭಾರತ ಸರಣಿ ಗೆದ್ದು ಬೀಗಿದ್ದು, ತಂಡದ ಉತ್ಸಾಹವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಇದರಲ್ಲಿ, ಎರಡನೇ ಮಾತಿಲ್ಲ. ಈಗ ಮೊದಲ ಪಂದ್ಯಕ್ಕೆ ಎರಡು ತಂಡಗಳು ಭರ್ಜರಿ ತಯಾರಿಗಳನ್ನು ಮಾಡಿಕೊಂಡಿದ್ದು, ಹರಿಣರ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ನೀಡಿದ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಪಂದ್ಯ ಆರಂಭಕ್ಕೂ ಒಂದು ದಿನದ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ, "ಟಿ20 ಸರಣಿಗೆ ನಾವು ಸಿದ್ಧವಾಗಿದ್ದೇವೆ. 20 ಓವರ್ ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾ ಒಂದು ಬಲಿಷ್ಠ ತಂಡವಾಗಿದೆ. ಖುಷಿ ವಿಷಯ ಏನೆಂದರೆ, ಟಿ20 ತಂಡದಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇಲ್ಲದಿರುವುದು. ಆದರೂ ಭಾರತ ತಂಡ ಬಲಿಷ್ಠವಾಗಿದೆ" ಎಂದರು.
"ನಮಗೆ ಇಂತದ್ದೇ, ಅಂತದ್ದೇ ಅಂತ ಯಾವುದೇ ನಿರ್ದಿಷ್ಟ ಪ್ಲ್ಯಾನ್ಗಳು ಇಲ್ಲ. ಇದು ಟಿ20 ಕ್ರಿಕೆಟ್ ಆಗಿರುವುದರಿಂದ ಖಂಡಿತ ಆಟದಲ್ಲಿ ಮಜಾವಿರಲಿದೆ. ಇಲ್ಲಿ ಆಟಗಾರರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಮತ್ತು ಆಟವನ್ನು ಆನಂದಿಸಿ, ತಮ್ಮ ಅತ್ಯುತ್ತಮ ಕೌಶಲ್ಯಗಳನ್ನು ಪ್ರದರ್ಶಿಸಬೇಕು. ಪಿಚ್ ನಮ್ಮ ಪರವಿದ್ದರೆ ಸೂಕ್ತ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಕಾರಣ, ಹೆಚ್ಚುವರಿ ರನ್ಗಳನ್ನು ಕಲೆಹಾಕಬಹದು ಎಂದು. ಅಕಸ್ಮಾತ್ ಇಲ್ಲವಾದರೆ, ಆಟದ ನಡುವೆಯೇ ಪಿಚ್ಗೆ ಹೊಂದಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶ್ದೀಪ್, ವಾಷಿಂಗ್ಟನ್ ಸುಂದರ್.
ದಕ್ಷಿಣ ಆಫ್ರಿಕಾ ತಂಡ
ಐಡೆನ್ ಮಾರ್ಕ್ರಮ್ (ನಾಯಕ), ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜಾರ್ಜಿ, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್, ಡೊನೊವನ್ ಫೆರೇರಾ, ಟ್ರಿಸ್ಟಾನ್ ಸ್ಟಬ್ಸ್, ಒಟ್ನೀಲ್ ಬಾರ್ಟ್‌ಮ್ಯಾನ್, ಕೇಶವ್ ಮಹಾರಾಜ್, ಕ್ವೆನಾ ಮಫಾಗಿ.