ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ (ಚಿತ್ರ Instagram)
- ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ
- ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ಪಾಳಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಆಟಗಾರರು ಆತಂಕಗೊಂಡಿದ್ದಾರೆ
- ಪಂದ್ಯದಲ್ಲಿ ಆಡುತ್ತಿರುವ ಎರಡೂ ತಂಡಗಳು ಕ್ರಿಕೆಟ್ನ ಸಾಂಪ್ರದಾಯಿಕ ಮೌಲ್ಯವನ್ನು ಎತ್ತಿ ಹಿಡಿಯಬೇಕು
ಶ್ರೀಲಂಕಾ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ (India v/s Pakistan) ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ಪಾಳಯದಲ್ಲಿ ಭೀತಿ ಆವರಿಸಿಕೊಂಡಿದೆ. ಇಂದು ನಡೆಯಲಿರುವ ಟಿ 20 ವಿಶ್ವಕಪ್ 2026 ಪಂದ್ಯಕ್ಕೆ ಸಜ್ಜಾಗುತ್ತಿರುವ ವೇಳೆ ಪಾಕಿಸ್ತಾನದ ಡಗೌಟ್‌ನಲ್ಲಿ ಹಾವು ಕಾಣಿಸಿಕೊಂಡಿದ್ದು, ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ.
ಪಂದ್ಯದ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ, ಪಂದ್ಯದಲ್ಲಿ ಆಡುತ್ತಿರುವ ಎರಡೂ ತಂಡಗಳು ಕ್ರಿಕೆಟ್ನ ಸಾಂಪ್ರದಾಯಿಕ ಮೌಲ್ಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದರು.
ಕಳೆದ ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆದ ಏಷ್ಯಾಕಪ್ ಪಂದ್ಯದ ಸಮಯದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಪ್ರತೀಕಾರದ ಆಪರೇಷನ್ ಸಿಂಧೂರ್ನ್ನು ನೆನಪಿಸಿಕೊಂಡು ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ ಎಂದು ಹೇಳಿದರು.
ಈ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 3 ಬಾರಿ ಭಾರತವು ಪಾಕಿಸ್ತಾನವನ್ನು ಮಣಿಸಿದೆ. ಇದಾದ ಬಳಿಕ ಪುರುಷರ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ಆಸಕ್ತಿ ತೋರಲಿಲ್ಲ. ಬದಲಾಗಿ ಅವರು ಮೈದಾನದಲ್ಲಿ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದರು ಎಂದರು.
ಕ್ರಿಕೆಟ್‌ನ್ನು ಉತ್ಸಾಹದಲ್ಲಿ ಆಟ ಆಡಬೇಕು. ನಾವು ಏನನ್ನು ನಿರೀಕ್ಷಿಸುತ್ತೇನೆ ಎಂಬುದು ಮೈದಾನದಲ್ಲಿ ಮುಖ್ಯವಾಗಿರುವುದಿಲ್ಲ. ಬದಲಾಗಿ, ಕ್ರಿಕೆಟ್‌ನ್ನು ಮೊದಲಿನಿಂದ ಯಾವ ರೀತಿ ಆಟ ಆಡುತ್ತೇವೆಯೋ ಅದೇ ರೀತಿ ಆಡಬೇಕು ಎಂದು ನಾನು ಭಾವಿಸುತ್ತೇನೆ. ಭಾರತೀಯ ಆಟಗಾರರು ಏನು ಮಾಡಬೇಕೆಂಬುದು ಅವರಿಗೆ ಬಿಟ್ಟಿರುವ ವಿಚಾರ ಎಂದರು.
ಐಸಿಸಿ ಟಿ20 ವಿಶ್ವಕಪ್‌ಗಳಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ 7-1 ಅಂತರದ ಪ್ರಬಲ ದಾಖಲೆಯನ್ನು ಹೊಂದಿದೆ. ಒಟ್ಟಾರೆಯಾಗಿ, ಪುರುಷರ ತಂಡವು ಎರಡೂ ತಂಡಗಳ ನಡುವಿನ 16 ಟಿ20 ಪಂದ್ಯಗಳಲ್ಲಿ 13 ಪಂದ್ಯಗಳಲ್ಲಿ ಜಯಸಾಧಿಸಿದೆ.
ವಿಶ್ವಕಪ್‌ಗಳಲ್ಲಿ ಭಾರತದ ವಿರುದ್ಧ ನಮಗೆ ಉತ್ತಮ ದಾಖಲೆ ಇಲ್ಲ. ಆದರೆ, ಪ್ರತಿ ಬಾರಿಯೂ ಹೊಸ ಪಂದ್ಯವನ್ನು ಆಡಿದಾಗ, ನೀವು ಗೆಲ್ಲಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಆಡಬೇಕು. ಇಲ್ಲದಿದ್ದರೆ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ (ಏಜೆನ್ಸೀಸ್).