ನ್ಯೂಜಿಲೆಂಡ್​ ವಿರುದ್ಧದ ಟೀಮ್ ಇಂಡಿಯಾ ಏಕದಿನ ಸರಣಿ 
ಕ್ರಿಕೆಟ್

ಶಮಿಗೆ ಅವಕಾಶ ಡೌಟ್​! ಇಬ್ಬರಿಗೆ ರೆಸ್ಟ್​? ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆ

ಪ್ರಮುಖ ಮುಖ್ಯಾಂಶಗಳು

  • ಜ.03ರಂದು ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ
  • ಇಂಜುರಿಯಿಂದ ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​?
  • ಮೊಹಮ್ಮದ್​ ಶಮಿಗೂ ಈ ಸರಣಿಯಲ್ಲೂ ಇಲ್ಲ ಸ್ಥಾನ?
ನವದೆಹಲಿ: ಇದೇ ಜ.11ರಿಂದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಬಿಸಿಸಿಐ ನಾಳೆ (ಜ.03) ತಂಡವನ್ನು ಅಧಿಕೃತವಾಗಿ ಘೋಷಿಸಲಿದೆ. ಒಂದು ತಿಂಗಳ ಬ್ರೇಕ್​ ಬಳಿಕ ಭಾರತ ತಂಡ 50 ಓವರ್‌ಗಳ ಪಂದ್ಯವನ್ನಾಡಲಿದೆ. ಒಂದೆಡೆ 'ರೋಕೊ' ಜೋಡಿ ಮತ್ತೆ ಅಖಾಡಕ್ಕಿಳಿಯುತ್ತಿರುವುದು ಅಭಿಮಾನಿಗಳಲ್ಲಿ ಅತೀವ ಖುಷಿ ತಂದರೆ, ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆಗಳು ಕಂಡುಬಂದಿವೆ.

ಇಂಜುರಿಯಿಂದ ಗಿಲ್​ ಕಮ್​ಬ್ಯಾಕ್​

ಕುತ್ತಿಗೆ ನೋವಿನಿಂದ ಕೆಲವು ಸಮಯ ತಂಡದಿಂದ ಹೊರಗಿದ್ದ ಏಕದಿನ ತಂಡದ ನಾಯಕ ಶುಭಮನ್ ಗಿಲ್, ಇದೀಗ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ

ಈ ಸರಣಿಯಲ್ಲಿ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮತ್ತು ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಕೊಡುವ ಎಲ್ಲ ಸಾಧ್ಯತೆಗಳಿವೆ. ವರದಿಗಳ ಪ್ರಕಾರ, ಇವರಿಬ್ಬರಿಗೂ ರೆಸ್ಟ್​ ನೀಡುವ ಮೂಲಕ ಐದು ಪಂದ್ಯಗಳ ಟಿ20 ಸರಣಿಗೆ ಉಪಯೋಗಿಸಿಕೊಳ್ಳಲು ಟೀಮ್ ಮ್ಯಾನೇಜ್​ಮೆಂಟ್​ ಮುಂದಾಗಿದೆ. ಮತ್ತೊಂದೆಡೆ, ಉಪನಾಯಕ ಶ್ರೇಯಸ್ ಅಯ್ಯರ್ ಕೂಡ ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡು, ತಂಡ ಸೇರುವ ನಿರೀಕ್ಷೆಯಿದೆ.

ಶಮಿಗೆ ಈಗಲೂ ಇಲ್ಲ ಸ್ಥಾನ?

ವೇಗಿ ಮೊಹಮ್ಮದ್​ ಶಮಿ ಅವರಿಗೆ ಏಕದಿನ, ಟಿ20 ಮತ್ತು ಟೆಸ್ಟ್ ತಂಡಗಳಲ್ಲಿ ಇಲ್ಲಿಯವರೆಗೆ ಸ್ಥಾನ ಕೊಡದ ಬಿಸಿಸಿಐ, ಪದೇ ಪದೇ ಅವರನ್ನು ಸ್ಕ್ಯಾಡ್​ನಿಂದ ಕೈಬಿಡುತ್ತಿರುವುದು ಹಲವರ ಪ್ರಶ್ನೆಗೆ ಕಾರಣವಾಗಿದೆ. ಇದು ಬಿಸಿಸಿಐಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಾಗಿ, ಶಮಿಗೆ ಅವಕಾಶ ಕೊಡುತ್ತಿಲ್ಲ ಎಂಬುದು ಕ್ರಿಕೆಟ್​ ಪ್ರಿಯರ ಬೆಂಬಿಡದೆ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರಿಸುವುದು ಕಷ್ಟಕರವಾಗಿದೆ.