ಅಹಮದಾಬಾದ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಫೈನಲ್ ಪಂದ್ಯ 
ಕ್ರಿಕೆಟ್

ಭಾರತ-ನ್ಯೂಜಿಲೆಂಡ್ ಫೈನಲ್ ಕದನ: ಹೋಟೆಲ್​ಗಳ ಒಂದು ದಿನದ ಬಾಡಿಗೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ! IndVsNZ

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಫೈನಲ್ ಪಂದ್ಯ
  • ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಚಾಂಕಿಯನ್​ಶಿಫ್​ಗಾಗಿ ಫೈಟ್​
  • ಮುಗಿಲು ಮುಟ್ಟಿದ ಹೋಟ್​ಲ್​ ಬಾಡಿಗೆ ದರ
ಅಹಮದಾಬಾದ್​: ಟಿ-20 ವಿಶ್ವಕಪ್​ ಟೂರ್ನಾಮೆಂಟ್​ ಅಂತಿಮ ಘಟ್ಟವನ್ನು ತಲುಪಿದ್ದು, ಭಾನುವಾರ (ಮಾ.8) ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ (IndVsNZ) ತಂಡಗಳು ಘೈನಲ್​ ಪಂದ್ಯದಲ್ಲಿ ಕಾದಾಡಲಿವೆ. ಈ ಐತಿಹಾಸಿಕ ಪಂದ್ಯವು ಗುಜರಾತಿನ ಅಹಮದಾಬಾದಿನಲ್ಲಿ ನಡೆಯಲಿದ್ದು, ಪಂದ್ಯದ ಎಂಟ್ರಿ ಟಿಕೆಟ್​ಗಳಷ್ಟೇ ಅಲ್ಲದೇ ಸುತ್ತ-ಮುತ್ತಲಿರುವ ಹೋಟೆಲ್​ಗಳ ದರ ಮುಗಿಲು ಮುಟ್ಟಿದೆ.

ದಿನಕ್ಕೆ 1 ಲಕ್ಷ ಬಾಡಿಗೆ!

ನರೇಂದ್ರ ಮೋದಿ ಕ್ರೀಡಾಂಗಣದ ಬಳಿ ಇರುವ ಹೋಟೆಲ್​ಗಳ ವಾಸ್ತವ್ಯದ ದರವು ಸಾಮಾನ್ಯವಾಗಿ 15,000 ದಿಂದ 80,000 ದ ವರೆಗೆ ಇದೆ. ಆದರೆ ನಾಳೆ (ಮಾ.8) ನಡೆಯಲಿರುವ ಫೈನಲ್​ ಪಂದ್ಯವನ್ನು ನೋಡಲು ಜನ ಸಾಗರವೇ ಹರಿದು ಬರುವ ಕಾರಣ ಈ ದರವು ದಿನಕ್ಕೆ 1 ಲಕ್ಷವನ್ನು ದಾಟಲಿದೆ ಎಂದು ಹೇಳಲಾಗುತ್ತಿದೆ.

ಗುಜರಾತ್​ ಪ್ರವಾಸೋದ್ಯಮ ವೃದ್ಧಿ

ಈ ದರ ಏರಿಕೆ ಕುರಿತು ಮಾತನಾಡಿರುವ ಪ್ರಯಾಣ ಮತ್ತು ಪ್ರವಾಸೋದ್ಯಮ ಕಾರ್ಯಪಡೆಯ ಅಧ್ಯಕ್ಷ ಸಂಜೀವ್ ಛಾಜರ್, ಈ ಒಂದು ಪಂದ್ಯವನ್ನು ನೋಡಲು ಸಾವಿರಾರು ಜನರು ಗುಜರಾತ್​ಗೆ ಆಗಮಿಸಲಿದ್ದಾರೆ. ಅವರು ಕ್ರಿಕೆಟ್​ ಮ್ಯಾಚ್​ ನೋಡಿದ ನಂತರ ಒಂದೆರಡು ದಿನ ಗುರಾಜತಿನಲ್ಲಿ ತಂಗಿದರೆ ನಮ್ಮ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಕಾಣಲಿದೆ ಎಂದು ಅವರು ಹೇಳಿದ್ದಾರೆ.

ನಾಳೆ ಭಾರತದ ಪರ ಯಾರ್ಯಾರು ಕಣಕ್ಕಿಳಿಯಲಿದ್ದಾರೆ?

ಸೂರ್ಯಕುಮಾರ್ ಯಾದವ್ (ನಾಯಕ)
ಇಶಾನ್ ಕಿಶನ್
ಸಂಜು ಸ್ಯಾಮ್ಸನ್
ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ
ಅಭಿಷೇಕ್ ಶರ್ಮಾ/ರಿಂಕು ಸಿಂಗ್
ಶಿವಂ ದುಬೆ
ಅಕ್ಷರ್ ಪಟೇಲ್
ವರುಣ್ ಚಕ್ರವರ್ತಿ/ಕುಲದೀಪ್ ಯಾದವ್
ಅರ್ಶ್ದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ಗೆ ಭಾರತ ಸಣ್ಣ ಬದಲಾವಣೆ ಮಾಡುವ ಸಾದ್ಯತೆಯಿದ್ದು, ವರುಣ್ ಚಕ್ರವರ್ತಿ ಬದಲಿಗೆ ಕುಲದೀಪ್ ಯಾದವ್ ಅವರನ್ನು ಹಾಗೂ ಅಭಿಷೇಕ್ ಶರ್ಮಾ ಬದಲಿಗೆ ರಿಂಕು ಸಿಂಗ್ ಮೈದಾನಕ್ಕಿಳಿಯುವ ಸಂಭವವಿದೆ.

ನ್ಯೂಜಿಲೆಂಡ್​ ತಂಡದಲ್ಲಿ ಯಾರ್ಯಾರಿದ್ದಾರೆ?

ಮಿಚೆಲ್ ಸ್ಯಾಂಟ್ನರ್ (ನಾಯಕ)
ಫಿನ್ ಅಲೆನ್
ಡೆವೊನ್ ಕಾನ್ವೇ
ಮಾರ್ಕ್ ಚಾಪ್ಮನ್
ಗ್ಲೆನ್ ಫಿಲಿಪ್ಸ್
ಡ್ಯಾರಿಲ್ ಮಿಚೆಲ್
ರಾಚಿನ್ ರವೀಂದ್ರ
ಟಿಮ್ ಸೀಫರ್ಟ್
ಇಶ್ ಸೋಧಿ
ಕೈಲ್ ಜೇಮಿಸನ್
ಲಾಕಿ ಫರ್ಗುಸನ್

ಯಾರು ಗೆಲ್ಲಬಹುದು?

ಭಾರತ ತಂಡವು ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಮತ್ತು ಬಲಿಷ್ಠ ಬೌಲಿಂಗ್ ದಾಳಿಯೊಂದಿಗೆ ಫೈನಲ್ ಪ್ರವೇಶಿಸಿದ್ದು, ನ್ಯೂಜಿಲೆಂಡ್ ವಿರುದ್ಧ ಸಂಘಟಿತ ದಾಳಿ ನಡೆಸಿದರೆ ಖಂಡಿತವಾಗಿ ಭಾರತ ಗೆಲ್ಲಲಿದೆ. ಆದರೆ ನ್ಯೂಜಿಲೆಂಡ್​ನ ಬ್ಯಾಟರ್​ಗಳಾದ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ಉತ್ತಮ ಫಾರ್ಮನಲ್ಲಿದ್ದು ಇವರು ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಗೆಲುವು ಕಷ್ಟಕರವಾಗಬಹುದು. ಹಾಗೆಯೇ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತದ ಬೌಲಿಂಗ್​ ಕಳಪೆ ಮಟ್ಟದಲ್ಲಿದ್ದು, ಅದೇ ರೀತಿ ಫೈನಲ್​ ಪಂದ್ಯದಲ್ಲಿ ಮಾಡಿದರೆ ಚಾಂಪಿಯನ್​ ಪಟ್ಟ ಕಳೆದುಕೊಳ್ಳಬಹುದು,(ಏಜನ್ಸೀಸ್​).