ಅಂಧ ಮಹಿಳೆಯರ ಟಿ20 ವಿಶ್ವಕಪ್​: ಭಾರತಕ್ಕೆ ಸತತ 2ನೇ ಜಯ 
ಕ್ರಿಕೆಟ್

ಅಂಧ ಮಹಿಳೆಯರ ಟಿ20 ವಿಶ್ವಕಪ್​: ಭಾರತಕ್ಕೆ ಸತತ 2ನೇ ಜಯ

ನವದೆಹಲಿ: ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​ (blind womens t20 cricket worldcup) ಟೂರ್ನಿಯಲ್ಲಿ ಆಸ್ಟ್ರೆಲಿಯಾವನ್ನು 209 ರನ್​ಗಳಿಂದ ಮಣಿಸಿದೆ. ಭಾರತಕ್ಕೆ ಇದು ಸತತ 2ನೇ ಗೆಲುವಾಗಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ 4 ವಿಕೆಟ್​ಗೆ 292 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ನಾಯಕಿ ಹಾಗೂ ಕನ್ನಡತಿ ದೀಪಿಕಾ ಟಿ.ಸಿ. 58 ಎಸೆತಗಳಲ್ಲಿ 91 ರನ್​ ಬಾರಿಸಿದರೆ, ುಲಾ ಸರೆನ್​ 22 ಎಸೆತಗಳಲ್ಲೇ ಅಜೇಯ 54 ರನ್​ ಸಿಡಿಸಿದರು. ಆಸೀಸ್​ 52 ಇತರ ಮತ್ತು 26 ಪೆನಾಲ್ಟಿ ರನ್​ ಬಿಟ್ಟುಕೊಟ್ಟಿತು. ಪ್ರತಿಯಾಗಿ ಆಸ್ಟ್ರೆಲಿಯಾ 19.3 ಓವರ್​ಗಳಲ್ಲಿ ಕೇವಲ 57 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು.

ಆಲ್ರೌಂಡ್​ ನಿರ್ವಹಣೆ ತೋರಿದ ದೀಪಿಕಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.