India beat Afghanistan by 7 wickets: Rohit equals Rahul Dravid's record:
ಧರ್ಮಶಾಲಾ: ನಾಯಕ ಶುಭಮಾನ್ ಗಿಲ್ (84* ರನ್, 66 ಎಸೆತ, 11 ಬೌಂಡರಿ, 2 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ಭಾರತ ತಂಡ ಮಳೆಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ 2027ರ ವಿಶ್ವಕಪ್ ಪೂರ್ವ ಸಿದ್ಧತೆ ಆರಂಭಿಸಿರುವ ಶುಭಮಾನ್ ಗಿಲ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ 4 ಗಂಟೆ 15 ನಿಮಷ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 25 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆಫ್ಘನ್, ರಹಮಾನುಲ್ಲಾ ಗುರ್ಬಜ್ (102 ರನ್, 51 ಎಸೆತ, 8 ಬೌಂಡರಿ, 8 ಸಿಕ್ಸರ್) ಶತಕದ ಆಸರೆಯಲ್ಲಿ 15 ಓವರ್‌ಗಳಲ್ಲಿ 140 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ನಂತರ ಪದಾರ್ಪಣೆ ಪಂದ್ಯವಾಡಿದ ಗುರ್‌ನೂರ್ (27ಕ್ಕೆ 3), ಹರ್ಷ್ ದುಬೆ (47ಕ್ಕೆ 3) ದಾಳಿಗೆ ದಿಢೀರ್ ಕುಸಿತ ಕಂಡ ಆಫ್ಘನ್ 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆಯಿತು.
ಪ್ರತಿಯಾಗಿ ಮಾಜಿ ನಾಯಕ ರೋಹಿತ್ ಶಮ್ (16) ರನೌಟ್ ಆಗಿ ನಿರಾಸೆ ಮೂಡಿಸಿದರೂ, ಶುಭಮಾನ್ ಗಿಲ್ ಚೇಸಿಂಗ್‌ನಲ್ಲಿ ಯಶಸ್ವಿಯಾಗಿ ದಡ ಸೇರಿಸಿದರು. ಭಾರತ ತಂಡ 22.5 ಓವರ್‌ಗಳಲ್ಲಿ 3 ವಿಕೆಟ್ 195 ರನ್‌ಗಳಿಸಿತು. ಶ್ರೇಯಸ್ ಅಯ್ಯರ್ (12) ನಿರ್ಗಮನ ನಂತರ ಗಿಲ್ ಜತೆಗೂಡಿದ ಕೆಎಲ್ ರಾಹುಲ್ (39* ರನ್, 19 ಎಸೆತ, 4 ಬೌಂಡರಿ, 3 ಸಿಕ್ಸರ್) ಮುರಿಯದ 4ನೇ ವಿಕೆಟ್‌ಗೆ 32 ಎಸೆತಗಳಲ್ಲಿ 52 ರನ್‌ಗಳಿಸಿ 13 ಎಸೆತ ಬಾಕಿಯಿರುವಂತೆಯೇ ಗೆಲುವು ತಂದುಕೊಟ್ಟರು.
ಗುರ್‌ನೂರ್, ಹರ್ಷ್ ಪದಾರ್ಪಣೆ
ಪಂಜಾಬ್ ವೇಗಿ ಗುರ್‌ನೂರ್ ಬ್ರಾರ್ ಹಾಗೂ ವಿದರ್ಭ ಎಡಗೈ ಸ್ಪಿನ್ನರ್ ಹರ್ಷ್ ದುಬೆ ಭಾರತ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 261, 262ನೇ ಆಟಗಾರರೆನಿಸಿದರು. 26 ವರ್ಷದ ಗುರ್‌ನೂರ್‌ಗೆ ನಾಯಕ ಶುಭಮಾನ್ ಕ್ಯಾಪ್ ನೀಡಿ ಅಭಿನಂದಿಸಿದರೆ, ಹರ್ಷ್ ದುಬೆಗೆ ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಕ್ಯಾಪ್ ಹಸ್ತಾಂತರಿಸಿದರು.
7. ರೋಹಿತ್ ಶರ್ಮ (16,009) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ಸಾವಿರ ರನ್‌ಗಳಿಸಿದ 7ನೇ ಆರಂಭಿಕ ಬ್ಯಾಟರ್ ಎನಿಸಿದರು. ಸನತ್ ಜಯಸೂರ‌್ಯ(19,298), ಕ್ರಿಸ್‌ಗೇಲ್ (18, 867), ಡೇವಿಡ್ ವಾರ್ನರ್ (18,744), ಗ್ರೇಮ್ ಸ್ಮಿತ್ (16,950), ಡೆಸ್ಮಂಡ್ ಹೇಯನ್ಸ್ (16, 120), ಸೆಹ್ವಾಗ್ (16, 119) ಈ ಹಿಂದಿನ ಆರು ಸಾಧಕರು.
39. ರೋಹಿತ್ ಶರ್ಮ (39 ವರ್ಷ, 44 ದಿನ) ಭಾರತ ಪರ ಏಕದಿನ ಪಂದ್ಯವನ್ನಾಡಿದ ಅತಿ ಹಿರಿಯ ಕ್ರಿಕೆಟಿಗ ಎನಿಸಿದರು. ಮೊಹಿಂದರ್ ಅಮರ್‌ನಾಥ್ (39 ವರ್ಷ, 36 ದಿನ) ಹಿಂದಿನ ಹಿರಿಯ ಆಟಗಾರ. ವಿನೂ ಮಂಕಡ್ (41 ವರ್ಷ, 300 ದಿನ, ಟೆಸ್ಟ್) ಭಾರತವನ್ನು ಪ್ರತಿನಿಧಿಸಿರುವ ಹಿರಿಯ ಆಟಗಾರ ಎನಿಸಿದ್ದಾರೆ.
4. ರೋಹಿತ್ ಶರ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ಪಂದ್ಯಗಳನ್ನಾಡಿದ ರಾಹುಲ್ ದ್ರಾವಿಡ್ (509) ದಾಖಲೆ ಸರಿಗಟ್ಟಿದರು. ತೆಂಡುಲ್ಕರ್ (664), ಕೊಹ್ಲಿ (559), ಧೋನಿ (538) ಅಗ್ರ ಮೂವರು.