ಸೂಪರ್​ ಸಂಡೇ ಭಾರತ-ಪಾಕ್​ ಪುರುಷರಿಗೆ ಮುನ್ನ ಮಹಿಳೆಯರ ಕಾದಾಟ! 
ಕ್ರಿಕೆಟ್

ಸೂಪರ್​ ಸಂಡೇ ಭಾರತ-ಪಾಕ್​ ಪುರುಷರಿಗೆ ಮುನ್ನ ಮಹಿಳೆಯರ ಕಾದಾಟ!

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕಾಕ್​ನಲ್ಲಿ ನಡೆಯಲಿದೆ ಭಾರತ-ಪಾಕ್​ ಎ ಮಹಿಳೆಯರ ಫೈಟ್​
  • ಮಧ್ಯಾಹ್ನ 12.30ಕ್ಕೆ ಪಂದ್ಯ ಆರಂಭ
  • ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ನೇರಪ್ರಸಾರ
ಬ್ಯಾಂಕಾಕ್​: ಕೊಲಂಬೊದಲ್ಲಿ ಭಾರತ-ಪಾಕ್​ ಪುರುಷರ ಕಾದಾಟ ಶುರುವಾಗುವುದಕ್ಕೆ ಮುನ್ನ ಥಾಯ್ಲೆಂಡ್​ನ ಬ್ಯಾಂಕಾಕ್​ನಲ್ಲಿ ಭಾರತ-ಪಾಕ್​ ಮಹಿಳೆಯರ ನಡುವೆ ಮುಖಾಮುಖಿ ನಡೆಯಲಿದೆ. ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ (Women's Asia Cup Rising Stars) ಭಾರತ-ಪಾಕಿಸ್ತಾನ ಎ ತಂಡಗಳು ಭಾನುವಾರ ಸೆಣಸಲಿವೆ.

ರಾಧಾ ಯಾದವ್​ ಸಾರಥ್ಯದ ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಹಿನ್ನಡೆ ಹೊಂದಿದ್ದರೆ, ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲುವು ಸಾಧಿಸಿದ ವಿಶ್ವಾಸದಲ್ಲಿದೆ. ಭಾರತ ತಂಡಕ್ಕೆ ಸೆಮಿಫೈನಲ್​ ಹಂತಕ್ಕೇರುವ ಆಸೆ ಜೀವಂತವಿಡುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಅನಿವಾರ್ಯತೆಯೂ ಇದೆ.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ವಿಭಾಗದಲ್ಲಿ ವೈಫಲ್ಯ ಕಂಡಿದ್ದ ಭಾರತೀಯ ಮಹಿಳೆಯರು ಈ ಬಾರಿ ಪುಟಿದೇಳುವ ನಿರೀಕ್ಷೆ ಇದೆ.
*ಆರಂಭ: ಮಧ್ಯಾಹ್ನ 12.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ಟೆನ್​1, 3.