ಭಾರತ ಮತ್ತು ಜಿಂಬಾಬ್ವೆ ಸೂಪರ್-8 ಪಂದ್ಯ
- ಚೆನ್ನೈ ಕ್ರೀಡಾಂಗಣದಲ್ಲಿ ಜಿಂಬಾಬ್ವೆ-ಭಾರತ ನಡುವೆ ಸೂಪರ್-8 ಪಂದ್ಯ
- 257 ರನ್ಗಳ ಗುರಿ ತಲುಪಲು ಜಿಂಬಾಬ್ವೆ ವಿಫಲ
- ರನ್ಗಳಿಂದ ಪಂದ್ಯ ಗೆದ್ದು ಬೀಗಿದ ಟೀಮ್ ಇಂಡಿಯಾ
ಚೆನ್ನೈ: ಇಂದು (ಫೆ.26) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ ನಿರ್ಣಾಯಕ ಟಿ20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ರನ್ಗಳಿಂದ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು.
ದಾಖಲೆಯ ಸ್ಕೋರ್
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, ಬ್ಯಾಟ್ ಮಾಡುವಂತೆ ಟೀಮ್ ಇಂಡಿಯಾಗೆ ತಿಳಿಸಿತು. ಅದರಂತೆಯೇ, ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ಗಳ ಬೃಹತ್ ಸ್ಕೋರ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ಪಡೆಗೆ ಬೆನೆಟ್ರಿಂದ (97* ರನ್) ಸ್ಫೋಟಕ ಇನ್ನಿಂಗ್ಸ್ ಸಿಕ್ಕಿದ್ದೇ ಆದರೂ ತಂಡದ ಇತರೆ ಬ್ಯಾಟರ್ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಇದೇ ಸೋಲಿಗೆ ಮುಖ್ಯ ಕಾರಣವಾಯಿತು.
ಇನ್ನು ತಂಡದ ಪರ ಉತ್ತಮ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್, ಮೂರು ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್, ಶಿವಂ ದುಬೆ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ವಿಶೇಷ ಎಂದರೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್ ಆಗಿದೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 2007ರ ವಿಶ್ವಕಪ್ನಲ್ಲಿ ಕೀನ್ಯ ವಿರುದ್ಧ 260 ರನ್ ದಾಖಲಿಸಿದೆ. ಅವರ ನಂತರದ ಸ್ಥಾನದಲ್ಲಿ ಈಗ ಭಾರತವಿದೆ.