IND vs ZIM ಟಿ20 ಪಂದ್ಯ  
ಕ್ರಿಕೆಟ್

ಜಿಂಬಾಬ್ವೆ ವಿರುದ್ಧ ಸರಣಿ ಗೆಲ್ಲುವ ವಿಶ್ವಾಸ: 2ನೇ ಟಿ20 ಪಂದ್ಯದಿಂದ ಸ್ಟಾರ್​ ಬ್ಯಾಟರ್​ ಕೈಬಿಟ್ಟ ಶ್ರೇಯಸ್​ ಪಡೆ? | IND vs ZIM T20

ಪ್ರಮುಖ ಮುಖ್ಯಾಂಶಗಳು

  • ಮೊದಲ ಟಿ20 ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ
  • ಇಂದಿನ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ಗೆಲ್ಲಲು ಲೆಕ್ಕಾಚಾರ
  • ತಂಡದಿಂದ ಅಭಿಷೇಕ್​ ಶರ್ಮ ಕೈಬಿಡಲು ಅಯ್ಯರ್ ಪಡೆ ನಿರ್ಧಾರ
IND vs ZIM T20: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 7 ವಿಕೆಟ್​ಗಳಿಂದ ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ, ಇಂದು ನಡೆಯಲಿರುವ ಎರಡನೇ ಮ್ಯಾಚ್​ನಲ್ಲಿಯೂ ಗೆಲುವು ಸಾಧಿಸಿ, ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಐರ್ಲೆಂಡ್​ ಮತ್ತು ಇಂಗ್ಲೆಂಡ್​ ಟಿ20 ಸರಣಿಯಲ್ಲಿ ಕ್ಲೀನ್​ ಸ್ವೀಪ್ ಆಗಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ, ಇಂದು ಹರಾರೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿಯೂ ಹೆಚ್ಚಿನ ಅಂತರದಿಂದ ಜಯ ಗಳಿಸಿ, ಈ ಸರಣಿಯನ್ನಾದರೂ ಗೆದ್ದು ಬೀಗಲು ಲೆಕ್ಕಾಚಾರ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ, ತಂಡದ ಆರಂಭಿಕ ಬ್ಯಾಟರ್​ ಅಭಿಷೇಕ್​ ಶರ್ಮರನ್ನು ಕೂರಿಸಲು ಮ್ಯಾನೇಜ್​ಮೆಂಟ್​ ಯೋಚಿಸಿದೆ ಎನ್ನಲಾಗಿದೆ.

ಪ್ರಭ್​ಸಿಮ್ರಾನ್​ ಸಿಂಗ್​ಗೆ ಅವಕಾಶ

ಕಳೆದ ಪಂದ್ಯದಲ್ಲಿ ಒಂದೇ ಒಂದು ರನ್​ಗೆ ಪೆವಿಲಿಯನ್​ ಹಾದಿ ಹಿಡಿದು, ಫ್ಲಾಪ್​ ಶೋ ತೋರಿದ ಅಭಿಷೇಕ್​ರನ್ನು ಕೈಬಿಡುವ ಮೂಲಕ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಅದ್ಭುತ ಇನ್ನಿಂಗ್ಸ್ ನೀಡಿದ ಸ್ಟಾರ್ ಓಪನರ್​ ಪ್ರಭ್​ಸಿಮ್ರಾನ್​ ಸಿಂಗ್​ಗೆ ಅವಕಾಶ ನೀಡಲು ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ. ಇದು ಬಲಗೈ ಮತ್ತು ಎಡಗೈ ಬ್ಯಾಟರ್​ಗಳ ಕಾಂಬಿನೇಷನ್​ ಅನ್ನು ಸರಿದೂಗಿಸುತ್ತದೆ ಎಂಬುದು ತಂಡದ ಅನಿಸಿಕೆ.
ಇನ್ನು ಉಳಿದಂತೆ, ಇಶಾನ್ ಕಿಶನ್ ಮೂರನೇ, ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ್ದೇ ಆದರೂ ಬಿಗ್ ಸ್ಕೋರ್ ಮಾಡಿಲ್ಲ. ಆದರೆ, ಇಂದಿನ ಪಂದ್ಯದಲ್ಲಿ ಹೆಚ್ಚುವರಿ ರನ್ ಗಳಿಸುವುದರ ಜತೆಗೆ ತಂಡದ ಮೊತ್ತವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್ ಮತ್ತು ಶಿವಂ ದುಬೆ ತಂಡದ ಪರ ಆಡುವ ನಿರೀಕ್ಷೆಯಿದೆ,(ಏಜೆನ್ಸೀಸ್).

ಟೀಮ್ ಇಂಡಿಯಾ (ಪ್ಲೇಯಿಂಗ್ 11*)

ವೈಭವ್ ಸೂರ್ಯವಂಶಿ, ಪ್ರಭ್​ಸಿಮ್ರಾನ್ ಸಿಂಗ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯಿ, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್ ಎನ್ನಲಾಗಿದೆ.