ಸಂಜು ಸ್ಯಾಮ್ಸನ್​ ಮತ್ತು ಗೌತಮ್​ ಗಂಭೀರ್​  
ಕ್ರಿಕೆಟ್

ಸ್ಫೋಟಕ ಓಪನಿಂಗ್​ ಕೊಟ್ಟರು ಸಂಜುಗೆ ಗೌತಿ ಕ್ಲಾಸ್​? ಮೊದಲ ಇನ್ನಿಂಗ್ಸ್ ಬೆನ್ನಲ್ಲೇ ವಿಡಿಯೋ ವೈರಲ್​! IND vs ZIM

ಪ್ರಮುಖ ಮುಖ್ಯಾಂಶಗಳು

  • ಚೆನ್ನೈ ಕ್ರೀಡಾಂಗಣದಲ್ಲಿ ಜಿಂಬಾಬ್ವೆ-ಭಾರತ ನಡುವೆ ಸೂಪರ್​-8 ಪಂದ್ಯ
  • ಮೊದಲ ಇನ್ನಿಂಗ್ಸ್ ಅಂತ್ಯ, ಜಿಂಬಾಬ್ವೆಗೆ 257 ರನ್​ಗಳ ಬೃಹತ್ ಗುರಿ
  • ಬೇಗನೇ ಔಟ್ ಆಗಿದ್ದಕ್ಕೆ ಸಂಜುಗೆ ಗೌತಿ ಕ್ಲಾಸ್​
ಚೆನ್ನೈ: ಇಂದು (ಫೆ.26) ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ಮತ್ತು ಭಾರತ ನಡುವಿನ ಸೂಪರ್ 8 ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿತು. 256 ರನ್​ಗಳ ಬೃಹತ್​ ಸ್ಕೋರ್ ಗಳಿಸಿದ ಟೀಮ್ ಇಂಡಿಯಾ, ಟಿ20 ವಿಶ್ವಕಪ್​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ ದಾಖಲಿಸಿತು.
ಈ ಪಂದ್ಯದಲ್ಲಿ ರಿಂಕು ಸಿಂಗ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮ ಜೊತೆಗೆ ಓಪನಿಂಗ್​ ಬಂದರು. ಸಿಕ್ಸರ್​ನಿಂದಲೇ ಸ್ಫೋಟಕ ಇನ್ನಿಂಗ್ಸ್​ ಆರಂಭಿಸಿದ ಸಂಜು, ಆಡಿದ 15 ಎಸೆತಗಳಲ್ಲಿ 24 ರನ್ ಬಾರಿಸಿದರು (ಇದರಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ). ಉತ್ತಮ ಆರಂಭ ನೀಡಿದ್ದೇ ಆದರೂ ಸ್ಯಾಮ್ಸನ್​ ಹೆಚ್ಚು ಕಾಲ ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಔಟ್​ ಆದ ಬಳಿಕ ಡ್ರೆಸ್ಸಿಂಗ್ ರೂಮ್​ನತ್ತ ಸಾಗಿದ ಸಂಜು ಸ್ಯಾಮ್ಸನ್​ಗೆ ಹೆಡ್​ಕೋಚ್​ ಗಂಭೀರ್​ ಹೇಳಿದ ಕೆಲವು ಮಾತಿನ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ.
ಗಂಭೀರ್ ಮತ್ತು ಸ್ಯಾಮ್ಸನ್​ ನಡುವೆ ಯಾವುದೋ ವಿಚಾರಕ್ಕೆ ಮಾತುಕತೆ ನಡೆಯಿತು. ಇದನ್ನು ನೋಡಿದ ಕೂಡಲೇ ಕ್ರಿಕೆಟ್​ ಅಭಿಮಾನಿಗಳು ಗೌತಿ, ಬೇಗನೆ ಔಟಾಗಿದ್ದಕ್ಕಾಗಿ ಸಂಜು ವಿರುದ್ಧ ಗರಂ ಆಗಿದ್ದಾರೆ ಎಂದು ತಮಗೆ ಅನಿಸಿದಂತೆ ಟ್ವೀಟ್​ ಮಾಡಿದ್ದಾರೆ. ಇನ್ನೂ ಕೆಲವರು, ಗಂಭೀರ್​ ಹೆಚ್ಚು ಕಾಲ ನಿಲ್ಲದ ಕಾರಣ ಬೈದಿದ್ದಾರೆ ಎಂದಿದ್ದಾರೆ. ಇದರಲ್ಲಿ ಕೆಲವೇ ಕೆಲವರು ಮಾತ್ರ ಕೋಚ್​ ಸಂಜುಗೆ ಸಲಹೆ ನೀಡುತ್ತಿರುವಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.

ದಾಖಲೆಯ ಸ್ಕೋರ್​

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, ಬ್ಯಾಟ್​ ಮಾಡುವಂತೆ ಟೀಮ್ ಇಂಡಿಯಾಗೆ ತಿಳಿಸಿತು. ಅದರಂತೆಯೇ, ಬ್ಯಾಟಿಂಗ್ ಮಾಡಿದ ಭಾರತ, 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 256 ರನ್​ಗಳ ಬೃಹತ್​ ಸ್ಕೋರ್​ ಕಲೆಹಾಕಿತು. ವಿಶೇಷ ಎಂದರೆ, ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದು ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್​ ಆಗಿದೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 2007ರ ವಿಶ್ವಕಪ್​ನಲ್ಲಿ ಕೀನ್ಯ ವಿರುದ್ಧ 260 ರನ್​ ದಾಖಲಿಸಿದೆ. ಅವರ ನಂತರದ ಸ್ಥಾನದಲ್ಲಿ ಇದೀಗ ಭಾರತವಿದೆ,(ಏಜೆನ್ಸೀಸ್).