IND vs ZIM ಮೊದಲ ಟಿ20 ಪಂದ್ಯ 
ಕ್ರಿಕೆಟ್

ಮಯಾಂಕ್​ ವೇಗಕ್ಕೆ ತತ್ತರಿಸಿದ ಜಿಂಬಾಬ್ವೆ ಬ್ಯಾಟರ್ಸ್​​! ಮೊದಲ ಇನ್ನಿಂಗ್ಸ್ ಮುಕ್ತಾಯ; ​ಶ್ರೇಯಸ್​ ಪಡೆಗೆ 126 ರನ್​ ಗುರಿ

ಪ್ರಮುಖ ಮುಖ್ಯಾಂಶಗಳು

  • ಹರಾರೆ ಕ್ರೀಡಾಂಗಣದಲ್ಲಿ ಭಾರತ-ಜಿಂಬಾಬ್ವೆ ಮೊದಲ ಟಿ20
  • ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ
  • ಮೊದಲ ಇನ್ನಿಂಗ್ಸ್ ಮುಕ್ತಾಯ, ಭಾರತಕ್ಕೆ 126 ರನ್​ ಗುರಿ
IND vs ZIM: ಹರಾರೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಜಿಂಬಾಬ್ವೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬೃಹತ್ ಸ್ಕೋರ್​ ಮಾಡಲು ಕ್ರೀಸ್​ಗಿಳಿದ ಆರಂಭಿಕ​ ಬ್ಯಾಟರ್​ಗಳ ಪೈಕಿ ಬ್ರಿಯನ್​ ಬೆನೆಟ್ ಶೂನ್ಯಕ್ಕೆ ಔಟ್​ ಆಗುವ ಮೂಲಕ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಅವರ ಬೆನ್ನಲ್ಲೇ ಬೆನ್​ ಕರನ್ (10 ರನ್​)​, ​ಡಿಯಾನ್​ ಮೈರ್ಸ್ (6)​, ಕ್ಯಾಪ್ಟನ್​ ಸಿಕಂದರ್ (4)​, ರಿಯಾನ್​ ಬರ್ಲ್ (26)​ ಕೂಡ ಪೆವಿಲಿಯನ್​ ಸೇರಿದರು.
ಇನ್ನು ತಂಡದ ಪರ ವೀಸ್ಲಿ ( ಅಜೇಯ, 39) ಮತ್ತು ಮರುಮನಿ (ಅಜೇಯ, 27 ರನ್​) ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಒಟ್ಟು ಮೊತ್ತವನ್ನು 100ರ ಗಡಿದಾಟಲು ಸಹಾಯ ಮಾಡಿದರು. 7 ವಿಕೆಟ್​ ನಷ್ಟಕ್ಕೆ 125 ರನ್​ ಕಲೆಹಾಕಲಷ್ಟೇ ರಾಜಾ ತಂಡಕ್ಕೆ ಸಾಧ್ಯವಾಯಿತು. ಜಿಂಬಾಬ್ವೆ ಬ್ಯಾಟರ್​ಗಳನ್ನು ಚೆಂಡಾಡಿದ ಟೀಮ್ ಇಂಡಿಯಾ ಬೌಲರ್​ಗಳಲ್ಲಿ ಮಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್ ತಲಾ ಎರಡು ವಿಕೆಟ್​ ಕಬಳಿಸಿದರೆ​, ಶಿವಂ ದುಬೆ ಹಾಗೂ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.