ಭಾರತ ಮತ್ತು ಜಿಂಬಾಬ್ವೆ ಸೂಪರ್-8 ಪಂದ್ಯ
- ಚೆನ್ನೈ ಕ್ರೀಡಾಂಗಣದಲ್ಲಿ ಜಿಂಬಾಬ್ವೆ-ಭಾರತ ನಡುವೆ ಸೂಪರ್-8 ಪಂದ್ಯ
- ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಜಿಂಬಾಬ್ವೆ
- ಮೊದಲ ಇನ್ನಿಂಗ್ಸ್ ಅಂತ್ಯ, ಜಿಂಬಾಬ್ವೆಗೆ 257 ರನ್ಗಳ ಬೃಹತ್ ಗುರಿ
ದಾಖಲೆಯ ಸ್ಕೋರ್
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, ಬ್ಯಾಟ್ ಮಾಡುವಂತೆ ಟೀಮ್ ಇಂಡಿಯಾಗೆ ತಿಳಿಸಿತು. ಅದರಂತೆಯೇ, ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ಗಳ ಬೃಹತ್ ಸ್ಕೋರ್ ಕಲೆಹಾಕಿತು. ವಿಶೇಷ ಎಂದರೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್ ಆಗಿದೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 2007ರ ವಿಶ್ವಕಪ್ನಲ್ಲಿ ಕೀನ್ಯ ವಿರುದ್ಧ 260 ರನ್ ದಾಖಲಿಸಿದೆ. ಅವರ ನಂತರದ ಸ್ಥಾನದಲ್ಲಿ ಇದೀಗ ಭಾರತವಿದೆ.
ತಂಡದ ಪರ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಅರ್ಧಶತಕ (55 ರನ್) ಸಿಡಿಸಿದರೆ, ಸಂಜು ಸ್ಯಾಮ್ಸನ್ (24), ಇಶಾನ್ ಕಿಶನ್ (38), ಸೂರ್ಯಕುಮಾರ್ ಯಾದವ್ (33), ಹಾರ್ದಿಕ್ ಪಾಂಡ್ಯ (50) ಮತ್ತು ತಿಲಕ್ ವರ್ಮಾ (44) ಸ್ಫೋಟಕ ಇನ್ನಿಂಗ್ಸ್ ನೀಡಿದ್ದು ವಿಶೇಷ ಹಾಗೂ ಗಮನಾರ್ಹ. ಬ್ಯಾಟರ್ಗಳ ಪೈಕಿ ತಿಲಕ್ ಮತ್ತು ಪಾಂಡ್ಯ ಅಜೇಯರಾಗಿ ಉಳಿದರು.