ಟೀಮ್ ಇಂಡಿಯಾ ಸೆಮಿಫೈನಲ್ ಕುರಿತು ಪಾಕ್ ಆಟಗಾರರ ಹೇಳಿಕೆ
- ಇಂದು (ಮಾ.01) ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ
- ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಿದೆ
- ಟಿವಿ ಚರ್ಚೆಯಲ್ಲಿ ಪಾಕ್ ಮಾಜಿ ಆಟಗಾರರ ಸಂಭಾಷಣೆ ವೈರಲ್
ಕರಾಚಿ: ಇಂದು (ಮಾ.01) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಇಡೀ ಕ್ರಿಕೆಟ್ ಲೋಕವೇ ಕಾತರದಿಂದ ಕಾಯತೊಡಗಿದ್ದು, ವಿಂಡೀಸ್ ವಿರುದ್ಧ ಟೀಮ್ ಇಂಡಿಯಾ ಗೆದ್ದು, ತನ್ನ ಸೆಮಿಫೈನಲ್ ಕನಸನ್ನು ಈಡೇರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ, ಲೆಕ್ಕಾಚಾರಗಳು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಟಿವಿ ಡಿಬೆಟ್ನಲ್ಲಿ ಪಾಕ್ ಆಟಗಾರರು
ವೆಸ್ಟ್ ಇಂಡೀಸ್ ಮತ್ತು ಟೀಮ್ ಇಂಡಿಯಾ ನಡುವಿನ ಸೂಪರ್-8 ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ವಿಜೇತ ತಂಡ ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆಯಲಿದೆ. ಮತ್ತು ಸೆಮೀಸ್ಗೇರಿದ ನಾಲ್ಕನೇ ತಂಡವಾಗಲಿದೆ. ಹಲವು ಟಿವಿ ಮಾಧ್ಯಮಗಳು ಈ ಪಂದ್ಯಕ್ಕೆ ಸಂಬಂಧಿಸಿದಂತೆ ಲೈವ್ ಚರ್ಚೆಯನ್ನು ಏರ್ಪಡಿಸಿದ್ದು, ಹೆಸರಾಂತ ಕ್ರಿಕೆಟಿಗರು ಮತ್ತು ವಿಶ್ಲೇಷಕರನ್ನು ಕೂರಿಸಿ ಮಾತನಾಡಿಸಿದ್ದಾರೆ. ಅಂತೆಯೇ, ಪಾಕಿಸ್ತಾನಿ ಟಿವಿ ಡಿಬೆಟ್ನಲ್ಲಿಯೂ ಭಾರತ-ವಿಂಡೀಸ್ ನಡುವಿನ ಕಾದಾಟದ ಬಗ್ಗೆ ಮಾತುಕತೆ ನಡೆದಿದೆ.
ಪಾಕ್ ಮಾಜಿ ಆಟಗಾರರಾದ ಅಹ್ಮದ್ ಶೆಹಜಾದ್ ಮತ್ತು ಮೊಹಮ್ಮದ್ ಅಮೀರ್, ನೋಡುಗರ ಹುಬ್ಬೇರಿಸುವಂತೆ ಚರ್ಚೆಯಲ್ಲಿ ತೊಡೆಗಿದರು. ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಹೀನಾಯವಾಗಿ ಸೋತು ಮನೆಗೆ ಹೋಗುತ್ತದೆ ಎಂದ ಅಮೀರ್, ಟೀಮ್ ಇಂಡಿಯಾ ಬೌಲಿಂಗ್ ಯೂನಿಟ್ ಸಂಪೂರ್ಣ ಬಲ ನಿಂತಿರುವುದು ಜಸ್ಪ್ರಿತ್ ಬುಮ್ರಾ ಮೇಲೆ. ಹೀಗಿರುವಾಗ, ಅವರಿಂದ ಗೆಲುವು ಕಷ್ಟಸಾಧ್ಯ ಎಂದರು. ಇದಕ್ಕೆ ಚಾಲೆಂಜ್ ಹಾಕಿದ ಅಹ್ಮದ್, ಖಂಡಿತವಾಗಿಯೂ ಭಾರತ ಸೆಮಿಫೈನಲ್‌ಗೆ ಹೋಗಲಿದೆ ಎಂದರು.
ಬೆತ್ತಲೆ ಓಡಾಡ್ತೀನಿ...
ಅಕಸ್ಮಾತ್, ನೀನು ಹೇಳಿದಂತೆ ಟೀಮ್ ಇಂಡಿಯಾ ಏನಾದರೂ ಸೆಮಿಫೈನಲ್‌ಗೆ ಹೋಗದಿದ್ದರೆ, ನಾನು ಇನ್ಯಾವತ್ತು ಟಿವಿ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ. ಅಗತ್ಯವಿದ್ದರೆ ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ಬೆತ್ತಲೆಯಾಗಿ ತಿರುಗಾಡುತ್ತೇನೆ ಎಂದು ಅಹ್ಮದ್ ಶೆಹಜಾದ್ ಬಹಿರಂಗವಾಗಿ ಹೇಳಿದರು. ಇವರಿಬ್ಬರ ಚರ್ಚೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡಿವೆ.
ಭಾರತಕ್ಕೆ ರನ್ರೇಟ್ ಅಗತ್ಯವೇ?
ಇಂದಿನ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಯಾವುದೇ ರನ್ರೇಟ್ ಅಗತ್ಯವಿಲ್ಲ. ಬದಲಿಗೆ ಕೇವಲ ಗೆಲುವು ಮಾತ್ರ ಬೇಕಿದೆ. ಈ ಪಂದ್ಯವನ್ನು ಸೂರ್ಯಕುಮಾರ್ ಯಾದವ್ ಪಡೆ ಗೆದ್ದರೆ, ಖಂಡಿತ ಸೆಮಿಫೈನಲ್‌ಗೆ ಟೀಮ್ ಇಂಡಿಯಾ ಎಂಟ್ರಿಕೊಡಲಿದೆ,(ಏಜೆನ್ಸೀಸ್).