ಕ್ರಿಕೆಟ್

ಹೋಪ್​, ರುದರ್‌ಫೋರ್ಡ್ ಅರ್ಧಶತಕ! 171 ರನ್​ಗೆ ವಿಂಡೀಸ್ ಪಡೆ ಆಲ್​ಔಟ್​ | IND vs WI T20

ಕಣಕ್ಕಿಳಿದ ಆರಂಭಿಕರಾದ ಕಮಿಲ್​ ಪೂರನ್ ಕೇವಲ 12 ರನ್​ಗೆ ಪೆವಿಲಿಯನ್​ ಸೇರಿದರೆ, ಶಾಯ್​ ಹೋಪ್​ (52, 37 ಎಸೆತ​) ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್​ ಇನ್ನಿಂಗ್ಸ್​ ತೋರಿದರು.

IND vs WI T20: ಇಂದು ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶ್ರೇಯಸ್​ ಅಯ್ಯರ್​, ವಿಂಡೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಕಣಕ್ಕಿಳಿದ ಆರಂಭಿಕರಾದ ಕಮಿಲ್​ ಪೂರನ್ ಕೇವಲ 12 ರನ್​ಗೆ ಪೆವಿಲಿಯನ್​ ಸೇರಿದರೆ, ಶಾಯ್​ ಹೋಪ್​ (52, 37 ಎಸೆತ​) ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್​ ಇನ್ನಿಂಗ್ಸ್​ ತೋರಿದರು.

ನಂತರದಲ್ಲಿ ಕ್ರೀಸ್​ಗಿಳಿದ ಶಿಮ್ರಾನ್​ ​ಹೆಟ್ಮಾಯರ್ (5), ಪೋವಲ್​ (0), ಚೇಸ್​ (5), ರೋಮಾರಿಯೋ ಶೆಫಾರ್ಡ್​ (7), ಮ್ಯಾಥ್ಯೂವ್​ ಫೋರ್ಡೆ (2), ಶಾಮರ್​ ಸ್ಪ್ರಿಂಗರ್​ (9) ಕೇವಲ ಒಂದಂಕಿ ರನ್​ ಗಳಿಸಿ ಔಟಾದರು. ಇದು ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣವಾಯಿತು. ಇನ್ನು, ಏಕಾಂಗಿ ಹೋರಾಟ ನಡೆಸಿದ ಶರ್ಫೇನ್ ರುದರ್‌ಫೋರ್ಡ್ ಅವರ ಇನ್ನಿಂಗ್ಸ್ ತಂಡದ ಒಟ್ಟು ಮೊತ್ತವನ್ನು 150ರ ಗಡಿದಾಟಿಸಲು ಸಹಾಯ ಮಾಡಿತು. 20 ಓವರ್​ ಮುಗಿಯುವುದರೊಳಗೆ ಆಲ್​ಔಟ್​ ಆದ ವಿಂಡೀಸ್​ ಪಡೆ 171 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.

ಇನ್ನು ಬೌಲಿಂಗ್​ನಲ್ಲಿ ತಂಡದ ಪರ ನಮನ್​ ಧಿರ್​ 3 ವಿಕೆಟ್​ ಕಬಳಿಸಿದರೆ, ಕುಲದೀಪ್​ ಯಾದವ್​ ಮತ್ತು ಅಕ್ಸರ್​ ಪಟೇಲ್ 2 ವಿಕೆಟ್​ ಪಡೆದರೆ, ಅರ್ಷದೀಪ್​ ಸಿಂಗ್ ಮತ್ತು ಮಯಾಂಕ್​ ಯಾದವ್​​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು. ವೆಸ್ಟ್ ಇಂಡೀಸ್​ ದೈತ್ಯರು ನೀಡಿರುವ 171 ರನ್​ಗಳ ಗುರಿಯನ್ನು ಟೀಮ್ ಇಂಡಿಯಾ ಕಡಿಮೆ ಓವರ್​ನಲ್ಲಿ ಬೆನ್ನಟ್ಟಲಿದೆಯಾ ಅಥವಾ ಕೊನೆಯ ಓವರ್​ವರೆಗೂ ತಲುಪಿ ರೋಚಕ ಹಂತಕ್ಕೆ ಕೊಂಡೊಯ್ಯಲಿದೆಯಾ ಎಂಬುದನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.