IND vs SL 2ನೇ ಟೆಸ್ಟ್, ದೇವದತ್ತ ಪಡಿಕಲ್
- ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ 2ನೇ ಟೆಸ್ಟ್
- 2ನೇ ಟೆಸ್ಟ್ ಪಂದ್ಯದಲ್ಲೂ ಎರಡನೇ ಶತಕ ಬಾರಿಸಿದ ಕನ್ನಡಿಗ ದೇವದತ್ತ ಪಡಿಕ್ಕಲ್
- ಪಡಿಕ್ಕಲ್ಗೆ ಅರ್ಧಶತಕ ಬಾರಿಸುವ ಮೂಲಕ ಸಾಥ್ ನೀಡಿದ ನಾಯಕ ಶುಭಮನ್ ಗಿಲ್
IND vs SL 2nd Test: ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ (SSC) ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಮೊದಲ ದಿನದಾಟ ಇದೀಗ ಮುಕ್ತಾಯಗೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ತಂಡದ ಪರ ತಂಡದ ನಾಯಕ ಶುಭ್‌ಮನ್ ಗಿಲ್ ಭರ್ಜರಿ ಪ್ರದರ್ಶನ ತೋರಿದ್ದಾರೆ. 108 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ ಅರ್ಧಶತಕ (50) ಗಳಿಸಿದ ಗಿಲ್, ಟೀ ಬ್ರೇಕ್ಗೆ ಹೊರಡುವ ಸಮಯದಲ್ಲೇ ಅಸಿತ ಫೆರ್ನಾಂಡೊ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.
ಇನ್ನು, ಮತ್ತೊಂದೆಡೆ ಕ್ಯಾಪ್ಟನ್ಗೆ ಸಖತ್ ಸಾಥ್ ನೀಡಿದ ಕನ್ನಡಿಗ ದೇವದತ್ ಪಡಿಕಲ್, 3ನೇ ವಿಕೆಟ್‌ಗೆ 120 ರನ್‌ಗಳ ಉತ್ತಮ ಪಾರ್ಟ್ನರ್ಶಿಪ್ ನೀಡುವುದರ ಜತೆಗೆ ಎರಡನೇ ಬಾರಿ ಭರ್ಜರಿ ಶತಕ ದಾಖಲಿಸಿದರು. 193 ಎಸೆತಗಳಲ್ಲಿ 12 ಬೌಂಡರಿ ಬಾರಿಸುವ ಮೂಲಕ 117 ರನ್ ಸಿಡಿಸಿದರು. ಉಳಿದಂತೆ ಯಶಸ್ವಿ ಜೈಸ್ವಾಲ್ (45), ಕೆ.ಎಲ್. ರಾಹುಲ್ (18), ರವೀಂದ್ರ ಜಡೇಜಾ (ಅಜೇಯ 43), ಧ್ರುವ್ ಜ್ಯುರೆಲ್ (ಅಜೇಯ 7) ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ರಿಟೈಡ್ ಹರ್ಟ್ ಅಡಿ ಹೊರಹೋಗಿರುವ ರಿಷಬ್ ಪಂತ್, ಖಾತೆ ತೆರೆಯಬೇಕಿದೆ.
ಭಾರತ ಪ್ಲೇಯಿಂಗ್ 11 ತಂಡ
ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ ಜುರೆಲ್, ಸರನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.