ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು
ರಾಯ್ಪುರ: ಇಲ್ಲಿನ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದದಲ್ಲಿ ಭಾರತ ಸೋಲು ಕಂಡಿದೆ.
ಇನ್ನು ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ (102) ಮತ್ತು ರುತುರಾಜ್ ಗಾಯಕ್ವಾಡ್ (105) ಅವರ ಶತಕಗಳ ಜೊತೆಗೆ ಕ್ಯಾಪ್ಟನ್ ಕೆಎಲ್ ರಾಹುಲ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ 358 ರನ್‌ಗಳ ಬೃಹತ್ ಗುರಿಯನ್ನು ನೀಡಿತು. 359 ರನ್‌ಗಳ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಐಡೆನ್ ಮಾರ್ಕ್ರಾಮ್ (110) ಅವರ ಶತಕ ಮತ್ತು ಮ್ಯಾಥ್ಯೂ ಬ್ರೀಟ್ಜ್ಕೆ (68) ಮತ್ತು ಡೆವಾಲ್ಡ್ ಬ್ರೆವಿಸ್ (54) ಅವರ ಅರ್ಧಶತಕಗಳ ಸಹಾಯದಿಂದ 49.2 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 362 ರನ್ ಗಳಿಸಿ ಗುರಿಯನ್ನು ತಲುಪು ಮೂಲಕ ಪಂದ್ಯವನ್ನು ತನ್ನ ಕೈವಶ ಮಾಡಕೊಂಡಿತು.
ದ.ಆಫ್ರಿಕಾದ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ-ಸೌತ್ ಆಫ್ರಿಕಾ ಸಮಬಲ ಸಾಧಿಸಿದ್ದು, ಮೂರನೇ ಪಂದ್ಯ ಯಾರ ಕೈವಶವಾಗಲಿದೆ ಎಂಬ ಕೂತುಹಲ ಕೆರಳಿಸಿದೆ,(ಏಜೆನ್ಸೀಸ್).