ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯ
- ಇಂದೋರ್ನಲ್ಲಿ 3ನೇ ಏಕದಿನ ಪಂದ್ಯ, ಮೊದಲ ಇನ್ನಿಂಗ್ಸ್ ಮುಕ್ತಾಯ
- ಟೀಮ್ ಇಂಡಿಯಾಗೆ 338 ರನ್ಗಳ ಬೃಹತ್ ಗುರಿ
- ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಸ್ಫೋಟಕ ಇನ್ನಿಂಗ್ಸ್
ಇಂದೋರ್: ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೂರು ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆಗೆ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಶತಕದಾಟ ತಂಡದ ಮೊತ್ತವನ್ನು 300ರ ಗಡಿದಾಟಿಸಿತು. 50 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 337 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶುಭಮನ್ ಗಿಲ್ ಪಡೆ, ಕಿವೀಸ್ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕ್ರೀಸ್ಗಿಳಿದ ನ್ಯೂಜಿಲೆಂಡ್ನ ಸ್ಟಾರ್ ಓಪನರ್ಸ್ಗಳಾದ ಡೆವಾನ್ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್ ಟೀಮ್ ಇಂಡಿಯಾ ವೇಗಿಗಳ ಆರ್ಭಟಕ್ಕೆ ತತ್ತರಿಸಿದರು. ಇದು ತಂಡಕ್ಕೆ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ, ಎಂದಿನಂತೆ ಕಿವೀಸ್ಗೆ ಆಪತ್ಬಾಂಧವನಾಗಿ ನಿಲ್ಲುವ ಡ್ಯಾರಿಲ್ ಮಿಚೆಲ್ ಸರಣಿಯಲ್ಲಿ ಎರಡನೇ ಬಾರಿಗೆ ಶತಕ ಬಾರಿಸಿ, ತಮ್ಮ ಮೇಲಿರುವ ವಿಶ್ವಾಸವನ್ನು ದ್ವಿಗುಣಗೊಳಿಸಿದ್ದಾರೆ.
ಇನ್ನು ಟೀಮ್ ಇಂಡಿಯಾ ಪರ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು, ಕಿವೀಸ್ ಪಡೆ ನೀಡಿರುವ 338 ರನ್ಗಳ ಬೃಹತ್ ಗುರಿಯನ್ನು ಭಾರತ ತಲುಪಲಿದೆಯೇ? ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲಿದೆಯೇ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ ಕಾದು ನೋಡಬೇಕಿದೆ.
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವಿವರ
ವಿಲ್ ಯಂಗ್ (30 ರನ್, 41 ಎಸೆತ)
ಡ್ಯಾರಿಲ್ ಮಿಚೆಲ್ (137 ರನ್, 131 ಎಸೆತ)
ಗ್ಲೆನ್ ಫಿಲಿಪ್ಸ್ (106 ರನ್, 88 ರನ್)
ಬೌಲಿಂಗ್ ವಿವರ
ಅರ್ಷದೀಪ್ ಸಿಂಗ್ - 2 ವಿಕೆಟ್
ಮೊಹಮ್ಮದ್ ಸಿರಾಜ್ - 1 ವಿಕೆಟ್
ಕುಲದೀಪ್ ಯಾದವ್ - 1 ವಿಕೆಟ್