ಭಾರತ ಮತ್ತು ನ್ಯೂಜಿಲೆಂಡ್​ ಮೊದಲ ಏಕದಿನ ಪಂದ್ಯ 
ಕ್ರಿಕೆಟ್

ಮಿಚೆಲ್, ಹೆನ್ರಿ ಸ್ಫೋಟಕ ಬ್ಯಾಟಿಂಗ್​! ಟೀಮ್ ಇಂಡಿಯಾಗೆ 300 ರನ್​ಗಳ ಬೃಹತ್​ ಗುರಿ

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯ
  • ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ
  • 50 ಓವರ್ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 300 ರನ್​ ಕಲೆಹಾಕಿದ ಕಿವೀಸ್
ಗುಜರಾತ್​: ಇಂದು (ಜ.11) ವಡೋದರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಕಿವೀಸ್​ ಪಡೆಗೆ ಮೊದಲು ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್ ಮಾಡಿದ ನ್ಯೂಜಿಲೆಂಡ್​, 50 ಓವರ್​ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು ರನ್​ ಕಲೆಹಾಕಿತು. ಈ ಬೃಹತ್​ ಗುರಿಯನ್ನು ಭಾರತ ಸುಲಭವಾಗಿ ಬೆನ್ನತ್ತಲಿದೆಯೇ ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.

ನ್ಯೂಜಿಲೆಂಡ್​ ಬ್ಯಾಟಿಂಗ್ ವಿವರ (ಹೆಚ್ಚು ರನ್​ ಬಾರಿಸಿದ ಆಟಗಾರರು)

1. ಡೆವಾನ್​ ಕಾನ್ವೆ- 56 ರನ್​ (67 ಎಸೆತ, 6 ಬೌಂಡರಿ, 1 ಸಿಕ್ಸರ್​)
2. ಹೆನ್ರಿ ನಿಕೋಲ್ಸ್- 62 ರನ್​ (69 ಎಸೆತ, 8 ಬೌಂಡರಿ)
3. ಡ್ಯಾರಿಯಲ್​ ಮಿಚೆಲ್​- 84 ರನ್​ (71 ಎಸೆತ, 5 ಬೌಂಡರಿ, 3 ಸಿಕ್ಸರ್​)

ಟೀಮ್ ಇಂಡಿಯಾ ಬೌಲಿಂಗ್​ ವಿವರ

  • ಮೊಹಮ್ಮದ್​ ಸಿರಾಜ್​- 2 ವಿಕೆಟ್​
  • ಹರ್ಷಿತ್ ರಾಣಾ- 2 ವಿಕೆಟ್​
  • ಪ್ರಸಿದ್ಧ್​ ಕೃಷ್ಣ- 2 ವಿಕೆಟ್​
  • ಕುಲದೀಪ್​ ಯಾದವ್​- 1 ವಿಕೆಟ್