- ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ
- ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ಗೆ ಲಗ್ಗೆ
- ತಂಡದಲ್ಲಿ ಒಂದೇ ಒಂದು ಬದಲಾವಣೆಗೆ ಮ್ಯಾನೇಜ್ಮೆಂಟ್ ನಿರ್ಧಾರ
IND vs NZ Final: ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಇದೇ ಭಾನುವಾರ (ಮಾ.08) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ಸ್ ಪಟ್ಟಕ್ಕಾಗಿ ಸೆಣಸಲಿವೆ. ಈ ನಿಟ್ಟಿನಲ್ಲಿ, ಕ್ರಿಕೆಟ್ ಪ್ರಿಯರಿಂದ ಹಲವು ಮಹತ್ವದ ಸಲಹೆಗಳು ಟೀಮ್ ಇಂಡಿಯಾಗೆ ಬಂದಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳು ಬೇಕೇ ಬೇಕು ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ನ್ಯೂಜಿಲೆಂಡ್ ವಿರುದ್ಧ ಆಡಲು ಸಜ್ಜಾಗಿರುವ ಟೀಮ್ ಇಂಡಿಯಾದ ಅಂತಿಮ ತಂಡವನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ವರದಿಗಳು ಸೂಚಿಸಿವೆ. ಟೀಮ್ ಇಂಡಿಯಾ ಕೇವಲ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಬಹುತೇಕರು, ಕಳಪೆ ಪ್ರದರ್ಶನ ತೋರಿರುವ ಓಪನರ್ ಅಭಿಷೇಕ್ ಶರ್ಮರನ್ನು ಕೈಬಿಡಲಾಗಿದೆ ಎಂದು ಭಾವಿಸಿದ್ದಾರೆ. ಆದ್ರೆ, ಅದು ಸುಳ್ಳು. ಇಲ್ಲಿ ಆಗಿರುವುದು ಬ್ಯಾಟರ್ ಬದಲು ಅಲ್ಲ! ಬೌಲರ್ ಎಂಬುದು ಗಮನಾರ್ಹ.
ತಮ್ಮ ಸ್ಪಿನ್ ದಾಳಿಯಿಂದ ತಂಡದ ಪರ ಉತ್ತಮ ಬೌಲಿಂಗ್ ಮಾಡುತ್ತಿದ್ದ ವರುಣ್ ಚಕ್ರವರ್ತಿ, ಮಿಡಲ್ ಓವರ್ಗಳಲ್ಲಿ ಫುಲ್ ಕಂಟ್ರೋಲ್ ಮಾಡುತ್ತಿದ್ದ ಮಿಸ್ಟರಿ ಸ್ಪಿನ್ನರ್. ಆದರೆ, ಅದ್ಯಾಕೋ ಸೂಪರ್-8 ಹಂತಕ್ಕೆ ಹೋಗುತ್ತಿದ್ದಂತೆ ತಮ್ಮ ಲಯ ಕಳೆದುಕೊಂಡಿರುವ ಚಕ್ರವರ್ತಿ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರನ್ಗಳ ಹೊಳೆಯನ್ನೇ ಹರಿಯಲು ಬಿಟ್ಟರು. ಇದರಿಂದ ಕುಪಿತಗೊಂಡಿರುವ ಅಭಿಮಾನಿಗಳು, ವರುಣ್ ಬದಲಿಗೆ ಕುಲದೀಪ್ಗೆ ಅವಕಾಶ ಕೊಡಿ ಎಂದು ಟೀಮ್ ಮ್ಯಾನೇಜ್ಮೆಂಟ್ಗೆ ಸೋಷಿಯಲ್ ಮೀಡಿಯಾ ಮೂಲಕ ಸಲಹೆ ನೀಡಿದ್ದಾರೆ.
ವರುಣ್ಗೆ ವಿಶ್ರಾಂತಿ ಕೊಟ್ಟು ಫೈನಲ್ ಪಂದ್ಯದಲ್ಲಿ ಕುಲದೀಪ್ ಯಾದವ್ಗೆ ಸ್ಥಾನ ಕೊಡಲು ಬಿಸಿಸಿಐ ನಿರ್ಧರಿಸಿದೆ ಎಂದು ಒಂದಷ್ಟು ಕ್ರಿಕೆಟ್ ವರದಿಗಳು ತಿಳಿಸಿವೆ. ಅಹಮದಾಬಾದ್ ಪಿಚ್ನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಬೌಲರ್ ಕುಲದೀಪ್. ಹೀಗಾಗಿ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ವರುಣ್ಗೆ ರೆಸ್ಟ್ ನೀಡಲು ನಿರ್ಧರಿಸಲಾಗಿದೆ. ಇದರೊಂದು ಬದಲಾವಣೆ ಬಿಟ್ಟರೆ ಉಳಿದೆಲ್ಲ ಆಟಗಾರರು ಎಂದಿನಂತೆ ಅಖಾಡಕ್ಕಿಳಿಯಲಿದ್ದಾರೆ.
ಟೀಮ್ ಇಂಡಿಯಾ ಅಂತಿಮ ತಂಡದ (ಅಧಿಕೃತವಲ್ಲ)
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಶಿವಂ ದುಬೆ, ಅಭಿಷೇಕ್ ಶರ್ಮಾ, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ.