ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಟ್ನರ್
- ಇದೇ ಮಾ.08ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ
- ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಂತಿಮ ಹಣಾಹಣಿ
- ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಚೆಲ್ ಸ್ಯಾಟ್ನರ್ ಹೇಳಿಕೆ ವೈರಲ್
IND vs NZ Final: ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ ತಲುಪಿದ್ದು, ಇದೇ ಭಾನುವಾರ (ಮಾ.06) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಕಾಳಗ ನಡೆಯಲಿದೆ. ನಾಳಿನ ಪಂದ್ಯಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಕಿವೀಸ್ ಪಡೆಯ ನಾಯಕ ಮಿಚೆಲ್ ಸ್ಯಾಟ್ನರ್, ಎದುರಾಳಿ ತಂಡದ ಬಗ್ಗೆ ಕುತೂಹಲಕಾರಿ ಹೇಳಿಕೆಗಳನ್ನೇ ನೀಡಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಕುರಿತಾಗಿ ಮಾತನಾಡಿದ ಸ್ಯಾಟ್ನರ್, ಫೈನಲ್ಗೆ ನಾವು ಸಿದ್ಧವಿದ್ದೇವೆ ಮತ್ತು ಬಹಳ ಉತ್ಸಾಹದಿಂದ ಕೂಡಿದ್ದೇವೆ. ನಮಗಿಂತ ಭಾರತಕ್ಕೆ ಹೆಚ್ಚು ಒತ್ತಡವಿದೆ. ಕಾರಣ, ತವರಿನ ಅಂಗಳದಲ್ಲಿ ವಿಶ್ವಕಪ್ ಗೆಲ್ಲುವ ತವಕ ಎಂದರು. ಇದರ ನಡುವೆಯೇ, 2023ರಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿಕೆಯನ್ನು ರಿಪೀಟ್ ಮಾಡಿದ ಮಿಚೆಲ್, ನಾನು ಮತ್ತು ನನ್ನ ತಂಡ ಕ್ರೀಡಾಂಗಣದಲ್ಲಿರುವ ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡ್ತೇವೆ ಎಂದರು.
ಇಲ್ಲಿ ಹಲವು ಸವಾಲುಗಳಿವೆ. ಪಿಚ್ ಬ್ಯಾಟಿಂಗ್ ಮಾಡಲು ಹೆಚ್ಚು ಅನುಕೂಲಕರವಿರುವಂತೆ ಕಾಣಿಸುತ್ತದೆ. ಬ್ಯಾಟರ್ಗಳಿಗೆ ಹೆಚ್ಚಿನ ಸ್ಕೋರ್ ಗಳಿಸಲು ಉತ್ತಮವಾಗಿದೆ ಅನಿಸುತ್ತದೆ ಎಂದರು. ಇನ್ನು ಬುಮ್ರಾ ಬಗ್ಗೆ ಪ್ರಶ್ನೆ ಕೇಳಿಬರುತ್ತಿದ್ದಂತೆ ಅಲರ್ಟ್ ಆದ ಮಿಚೆಲ್, ಆತ ನಮಗೆ ಮಾತ್ರ ಬೆದರಿಕೆಯಲ್ಲ. ಎಲ್ಲ ಕ್ರಿಕೆಟ್ ತಂಡಗಳಿಗೂ ಸವಾಲಿನ ಬೌಲರ್ ಎಂದು ಹೇಳಿದರು.
ನನ್ನ ಪ್ರಕಾರ, ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿತ್ತು. ಉತ್ತಮವಾಗಿ ಆಡುತ್ತಿದ್ದರು. ಆದರೆ, ಬುಮ್ರಾ ನಿಜಕ್ಕೂ ಪಂದ್ಯದ ಲೆಕ್ಕಾಚಾರವನ್ನೇ ಬದಲಿಸಿದರು. ಆ ರಾತ್ರಿ ಅವರು ಗೇಮ್ ಚೇಂಜರ್ ಆದರು. ಜಸ್ಪ್ರಿತ್ ಒಬ್ಬ ವರ್ಲ್ಡ್ ಕ್ಲಾಸ್ ಬೌಲರ್. ಅವರೊಬ್ಬರೇ ಅಲ್ಲ, ತಂಡದಲ್ಲಿ ಹಲವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆ ಸಮಯಕ್ಕೆ ತಕ್ಕಂತೆ ಒಬ್ಬೊಬ್ಬರು ಒಂದೊಂದು ರೀತಿ ಕೊಡುಗೆ ನೀಡುತ್ತಿದ್ದಾರೆ ಎಂದರು,(ಏಜೆನ್ಸೀಸ್).