- ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ಗೆ ರೋಚಕ ಜಯ
- 17ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಮಾಡಿದ ಬಿಗ್ ಮಿಸ್ಟೇಕ್
- ಸಿಕ್ಸರ್, ಬೌಂಡರಿಗಿಂತ ಆ ಎರಡು ತಪ್ಪೇ ಆಂಗ್ಲರ ಗೆಲುವಿಗೆ ಕಾರಣ
IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಜಾಕಬ್ ಬೆಥಲ್ ಪಡೆ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 190 ರನ್‌ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪಡೆಗೆ ಆರಂಭಿಕ ಬ್ಯಾಟರ್ ಜಾಕಬ್ ಬೆಥೆಲ್ ಅವರ ಸ್ಫೋಟಕ ಇನ್ನಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಎಡವಿದ ಟೀಮ್ ಇಂಡಿಯಾ ವೇಗಿಗಳ ಪೈಕಿ 17ನೇ ಓವರ್ ಮಾಡಿದ ಸ್ಪಿನ್ನರ್ ರವಿ ಬಿಷ್ಣೋಯಿ ಕೇವಲ ಒಂದೇ ಓವರ್‌ನಲ್ಲಿ 29 ರನ್ ಹೊಡೆಯಲು ಬಿಟ್ಟಿದ್ದೇ ತಂಡವನ್ನು ಸೋಲಿಗೆ ದೂಡಿತು.
17ನೇ ಓವರ್ ವರೆಗೂ ಗೆಲುವು ಯಾರಿಗೆ ಒಲಿಯಲಿದೆ ಎಂಬ ಕೌತುಕ, ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆದರೆ, ರವಿ ಬಿಷ್ಣೋಯಿ ಅವರ ಬೌಲಿಂಗ್ನಲ್ಲಿ ಇಂಗ್ಲೆಂಡ್ 2ನೇ ಟಿ20 ಪಂದ್ಯ ಎಂಬುದು ಖಚಿತವಾಯಿತು. ಇದಕ್ಕೆ ಬಲವಾದ ಕಾರಣವೇ, ಎರಡು ನೋ ಬಾಲ್‌ಗಳು ಮತ್ತು ಫ್ರೀ ಹಿಟ್‌ಗಳು. ಮೊದಲೇ ಮೂರು ಸಿಕ್ಸರ್ ಮತ್ತು ಬೌಂಡರಿ ಹೊಡೆಸಿಕೊಂಡ ರವಿ, ಎರಡು ನೋಬಾಲ್ ಮಾಡಿದ್ದು ಇಡೀ ಪಂದ್ಯದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು.
ಕೇವಲ ಅದೊಂದು ಓವರ್‌ನಲ್ಲಿ 3 ಸಿಕ್ಸರ್, 1 ಬೌಂಡರಿ ಮತ್ತು ಅದೃಷ್ಟದಂತೆ ಸಿಕ್ಕ ಎರಡು ನೋ-ಬಾಲ್‌ಗಳನ್ನು ಬೆಥಲ್ ಉತ್ತಮವಾಗಿ ಬಳಸಿಕೊಂಡರು. ಕೇವಲ 46 ಎಸೆತಗಳಲ್ಲಿ 76 ರನ್‌ಗಳನ್ನು ಸಿಡಿಸುವ ಮೂಲಕ ಬೆಥಲ್ ಅಜೇಯರಾಗಿ ಇಂಗ್ಲೆಂಡ್ಗೆ ರೋಚಕ ಜಯ ತಂದುಕೊಟ್ಟರು. ಇನ್ನು, ಕೊನೆಯಲ್ಲಿ, ಸ್ಯಾಮ್ ಕರನ್ (7) ವೈಭವ್ ಸೂರ್ಯವಂಶಿಗೆ ಕ್ಯಾಚ್ ಕೊಟ್ಟು ಔಟ್ ಆದರು. ಈ ಪಂದ್ಯದಲ್ಲಿ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಆಂಗ್ಲರು 4 ವಿಕೆಟ್‌ಗಳಿಂದ ಎರಡನೇ ಟಿ20 ಪಂದ್ಯವನ್ನು ಗೆದ್ದು, ಭಾರತಕ್ಕೆ ಸೋಲುಣಿಸಿತು,(ಏಜೆನ್ಸೀಸ್).