IND vs ENG 3ನೇ ಏಕದಿನ ಪಂದ್ಯ
- ಜುಲೈ 19ರಂದು ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ
- ಲಾರ್ಡ್ಸ್ ಏಕದಿನ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ ಮಹತ್ವದ ನಿರ್ಧಾರ ಕೈಗೊಂಡಿದೆ
- ಭಾರತಕ್ಕೆ ಒಬ್ಬರು, ಇಂಗ್ಲೆಂಡ್ನ ಇಬ್ಬರು ಆಟಗಾರರು ಅಲಭ್ಯ
IND vs ENG 3rd ODI: ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಸ್ಟಾರ್ ಆಟಗಾರರ ಅಲಭ್ಯತೆ ಎದುರಾಗಿದೆ.
ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಏಕದಿನ ಪಂದ್ಯಕ್ಕೂ ಮುನ್ನವೇ ಇಂಗ್ಲೆಂಡ್ನ ಆಲ್‌ರೌಂಡರ್ ಲಿಯಾಮ್ ಡಾಸನ್ ಮತ್ತು ಬ್ಯಾಟ್ಸ್ಮನ್ ಟಾಮ್ ಬ್ಯಾಂಟನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಮ್ಯಾನೇಜ್‌ಮೆಂಟ್, ಇವರಿಬ್ಬರು ದೇಶೀಯ ಟಿ20 ಬ್ಲಾಸ್ಟ್ ಫೈನಲ್‌ನಲ್ಲಿ ತಮ್ಮ ತಂಡಗಳ ಪರ ಆಡಲಿರುವ ಅನಿವಾರ್ಯ ಕಾರಣದಿಂದ ನಿರ್ಣಾಯಕ ಪಂದ್ಯದಿಂದ ಡ್ರಾಪ್ ಮಾಡಲಾಗಿದೆ. ಸದ್ಯದ ಮಟ್ಟಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಡಾಸನ್ ಮತ್ತು ಬ್ಯಾಂಟನ್ ಸ್ಥಾನಕ್ಕೆ ಯಾರನ್ನು ಆಡಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.
ಲಿಯಾಮ್ ಡಾಸನ್ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಅರ್ಧಶತಕ (68) ಗಳಿಸಿದರು. ಜೋ ರೂಟ್ ಜತೆ 121 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. ಸೂಪರ್ ನಾಕ್ ಆಡಿದರೂ ಎರಡನೇ ಏಕದಿನದಲ್ಲಿ ಅಂತಿಮ ತಂಡದಲ್ಲಿ ಅವಕಾಶ ಸಿಗಲಿಲ್ಲ. ಇದರ ಪರಿಣಾಮವಾಗಿ, ಅವರು ತಮ್ಮ ಕೌಂಟಿ ತಂಡ ಹ್ಯಾಂಪ್‌ಶೈರ್‌ಗಾಗಿ ಎಸೆಕ್ಸ್ ವಿರುದ್ಧ ಟಿ20 ಬ್ಲಾಸ್ಟ್ ಕ್ವಾರ್ಟರ್-ಫೈನಲ್ ಆಡಲೂ ಸಾಧ್ಯವಾಗಲಿಲ್ಲ. ಇನ್ನು, ಟಾಮ್ ಬ್ಯಾಂಟನ್ ಇದುವರೆಗೆ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಅಂತಿಮ ತಂಡದಲ್ಲಿ ಇರಲಿಲ್ಲ. ಈಗ ಇಬ್ಬರನ್ನೂ ತಂಡದಿಂದ ಕೈಬಿಟ್ಟಿರುವ ಇಂಗ್ಲೆಂಡ್ ಮ್ಯಾನೇಜ್‌ಮೆಂಟ್, ಟಿ20 ಬ್ಲಾಸ್ಟ್ ಫೈನಲ್‌ನಲ್ಲಿ ತಮ್ಮ ತಂಡಗಳ ಪರ ಭಾಗವಹಿಸಲು ಅವಕಾಶ ಕೊಟ್ಟಿದೆ.
ಇನ್ನು, ಶುಭಮನ್ ಗಿಲ್ ತಂಡದಲ್ಲಿ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹ್ಯಾಮ್ಸ್ಟ್ರಿಂಗ್ ಇಂಜುರಿಯಿಂದ ಬಳಲುತ್ತಿರುವ ಕಾರಣ ತಂಡದಿಂದ ಹೊರಗುಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಂದರ್ ಅಲಭ್ಯತೆಯ ಹಿನ್ನೆಲೆ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ? ಯಾರಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಅವಕಾಶ ಕೊಡಬಹುದು ಎಂಬ ಲೆಕ್ಕಾಚಾರಗಳು ಸದ್ಯ ಕ್ರಿಕೆಟ್ ವಲಯದಲ್ಲಿ ಜೋರಾಗಿವೆ,(ಏಜೆನ್ಸೀಸ್).