IND vs ENG ಮೊದಲ ಏಕದಿನ ಪಂದ್ಯ
- ಎಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ
- ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್
- 47.5 ಓವರ್ ಅಂತ್ಯಕ್ಕೆ 258 ರನ್ಗೆ ಆಂಗ್ಲರು ಆಲ್ಔಟ್
IND vs ENG: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹ್ಯಾರಿ ಬ್ರೂಕ್ ಪಡೆ 47.5 ಓವರ್ ಅಂತ್ಯಕ್ಕೆ 258 ರನ್ಗೆ ಆಲ್ಔಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ಗೆ ಆರಂಭಿಕ ಬ್ಯಾಟರ್ ಬೆನ್ ಡಕೆಟ್ (43 ರನ್) ಉತ್ತಮ ಆರಂಭವನ್ನೇ ನೀಡಿದರು. ಆದರೆ, ಡಕೆಟ್ಗೆ ಸರಿಯಾದ ಸಾಥ್ ನೀಡದ ಜಾಕೆಬ್ ಬೆಥಲ್ ಕೇವಲ 14 ರನ್ಗೆ ಔಟ್ ಆದರು. ಅವರ ಬೆನ್ನಲ್ಲೇ ಕ್ರೀಸ್ಗಿಳಿದ ಕ್ಯಾಪ್ಟನ್ ಹ್ಯಾರಿ ಬ್ರೂಕ್ (1), ಜಾಸ್ ಬಟ್ಲರ್ (5), ಸ್ಯಾಮ್ ಕರನ್ (0) ತಂಡಕ್ಕೆ ರನ್ ಕೊಡುಗೆ ನೀಡುವಲ್ಲಿ ವಿಫಲರಾದರು.
ತಂಡದ ಟಾಪ್ ಆರ್ಡರ್ ಬ್ಯಾಟರ್ಗಳೇ ಬ್ಯಾಕ್ ಟು ಬ್ಯಾಕ್ ಕೈಕೊಟ್ಟರು ಅಲುಗಾಡದೆ ಕ್ರೀಸ್ಗೆ ಅಂಟಿ ನಿಂತ ಜೋ ರೂಟ್ (76) ಮತ್ತು ಲಿಯಾಮ್ ಡಾಸನ್ (68) ಬ್ಯಾಟಿಂಗ್ ಮೋಡಿ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಲು ಸಹಾಯ ಮಾಡಿತು. ಆಲ್ಔಟ್ ಆದ ಬ್ರೂಕ್ ಪಡೆ, 50 ಓವರ್ನಲ್ಲಿ 258 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಅಕ್ಷರ್ ಪಟೇಲ್ ಬೌಲಿಂಗ್ ಕಮಾಲ್
ಇನ್ನು, ತಂಡದ ಪರ ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಸ್ಪಿನ್ನರ್ ಅಕ್ಷರ್ ಪಟೇಲ್, 4 ಓವರ್ಗೆ 62 ರನ್ ಕೊಟ್ಟು 4 ವಿಕೆಟ್ಗಳನ್ನು ಪಡೆದು ಮಿಂಚಿದರು. ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರಿತ್ ಬುಮ್ರಾ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಕಬಳಿಸಿದರು.