IND vs ENG ಐದನೇ ಟಿ20 ಪಂದ್ಯ 
ಕ್ರಿಕೆಟ್

5ನೇ ಟಿ20 ಪಂದ್ಯದ ಟಾಸ್​ ಲೇಟ್​ಗೆ ಟೀಮ್ ಇಂಡಿಯಾ ಆಟಗಾರರೇ ಕಾರಣ! | IND vs ENG

IND vs ENG:
ಇಂದು ಸಂಜೆ 7 ಗಂಟೆಗೆ ಸರಿಯಾಗಿ ಪಂದ್ಯ ಆರಂಭ ಆಗಬೇಕಿತ್ತು. ಆದ್ರೆ, ಟೀಮ್ ಇಂಡಿಯಾ ಆಟಗಾರರನ್ನು ಕರೆದುಕೊಂಡು ಬರುತ್ತಿದ್ದ ಬಸ್​ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ ಕಾರಣವೇ ಪಂದ್ಯ ಅರ್ಧ ಗಂಟೆ ವಿಳಂಬಗೊಂಡಿದೆ. ಹೊಸ ಅಪ್ಡೇಟ್​ ಪ್ರಕಾರ, ಭಾರತ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಹ್ಯಾರಿ ಬ್ರೂಕ್​ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದೆ.     

ಬ್ರಿಸ್ಟಲ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ 3-0 ಅಂತರದಿಂದ ಗೆದ್ದಿರುವ ಇಂಗ್ಲೆಂಡ್​, ಇಂದು ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಬಹುದಿನಗಳ ಬಳಿಕ ಕ್ಲೀನ್​ ಸ್ವೀಪ್​ ರುಚಿ ತೋರಿಸಲು ಸಜ್ಜಾಗಿದೆ. ಈ ಮೂಲಕ ಭಾರತವನ್ನು ಕೆಳಕ್ಕೆ ತಳ್ಳಿ ಅಂತಾರಾಷ್ಟ್ರೀಯ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ವಶಪಡಿಸಿಕೊಳ್ಳುವುದು ಇಂಗ್ಲೆಂಡ್​ನ ಗುರಿಯಾಗಿದೆ.