IND vs ENG 2ನೇ ಏಕದಿನ ಪಂದ್ಯ
IND vs ENG 2nd ODI: ಇಂದು (ಜು.16) ಕಾರ್ಡಿಫ್ ವೇಲ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್, ಟೀಮ್ ಇಂಡಿಯಾಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಕಣಕ್ಕಿಳಿದ ಭಾರತ ತಂಡಕ್ಕೆ ನಾಯಕ ಶುಭಮನ್ ಗಿಲ್ (31) ಮತ್ತು ರೋಹಿತ್ ಶರ್ಮರಿಂದ (26) ಅಂತಹ ಉತ್ತಮ ಓಪನಿಂಗ್ ಸಿಗಲಿಲ್ಲ. ಅವರ ನಂತರದಲ್ಲಿ ಬಂದ ವಿರಾಟ್ ಕೊಹ್ಲಿ 65 ಮತ್ತು ಶ್ರೇಯಸ್ ಅಯ್ಯರ್ 66 ರನ್ ಬಾರಿಸಿ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿದರು.
ತಂಡದ ಪರ ಕೊನೆಯಲ್ಲಿ ಆಡಿದ ಜಸ್ಪ್ರೀತ್ ಬುಮ್ರಾ ಅಜೇಯ 20 ರನ್ ಬಾರಿಸಿದರು. ಉಳಿದ ಬ್ಯಾಟ್ಸ್ಮನ್ಗಳಾದ ಇಶಾನ್ ಕಿಶಾನ್ (1), ವಾಷಿಂಗ್ಟನ್ ಸುಂದರ್ (2), ಅಕ್ಷರ್ ಪಟೇಲ್ (1), ಶಿವಂ ದುವೆ (0) ಮತ್ತು ಗುರ್ನೂರ್ ಬ್ರಾರ್ (7) ಕೇವಲ ಒಂದಂಕಿಗೆ ಔಟ್ ಆಗುವ ಮೂಲಕ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾದರು.ಇನ್ನು, ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಗಸ್ ಅಟ್ಕಿನ್ಸನ್ ತಲಾ 3, ಸಾಕೀಬ್ ಮೊಹಮ್ಮದ್ 2, ಸ್ಯಾಮ್ ಕರನ್ ಮತ್ತು ವಿಲ್ ಜ್ಯಾಕ್ಸ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.