ಇಂಗ್ಲೆಂಡ್​ ಮತ್ತು ಭಾರತ ನಡುವಿನ ಸೆಮೀಸ್ ಪಂದ್ಯ 
ಕ್ರಿಕೆಟ್

ಸ್ಯಾಮ್ಸನ್​ ಅಬ್ಬರ, ಹಾರ್ದಿಕ್​ ಪವರ್​ ಹಿಟ್ಟಿಂಗ್​! ಆಂಗ್ಲರಿಗೆ 254 ರನ್​ಗಳ ಬೃಹತ್​ ಗುರಿ | IND vs ENG

IND vs ENG: ಇಂದು (ಮಾ.05) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 254 ರನ್​ಗಳ ಬೃಹತ್​ ಗುರಿಯನ್ನೇ ನೀಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​, ಭಾರತಕ್ಕೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿದೆ. ಅಂತೆಯೇ ಬ್ಯಾಟಿಂಗ್ ಶುರು ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್​ರಿಂದ (89 ರನ್​) ಉತ್ತಮ ಇನ್ನಿಂಗ್ಸ್​ ದೊರಕಿತು. ಅವರ ನಂತರದಲ್ಲಿ ಇಶಾನ್ ಕಿಶನ್ (39), ​ಶಿವಂ ದುಬೆ (43) ಮತ್ತು ಹಾರ್ದಿಕ್​ ಪಾಂಡ್ಯ ಅವರ ಸ್ಪೋಟಕ ಇನ್ನಿಂಗ್ಸ್​ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಿತು.
ಈ ಬೃಹತ್​ ಗುರಿಯನ್ನು ಇಂಗ್ಲೆಂಡ್​ ಬೆನ್ನಟ್ಟಿ ಫೈನಲ್​ ತಲುಪಲಿದೆಯೇ ಅಥವಾ ಟೀಮ್ ಇಂಡಿಯಾ ಮುಂದೆ ಮಂಡಿಯೂರಲಿದೆಯೇ ಎಂಬುದನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.