ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ಕಿರಿಯರ ಶುಭಾರಂಭ
ಬೆನೋನಿ: ಹರ್ವಂಶ್ ಪಂಗಾಲಿಯಾ (93 ರನ್, 95 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಆರ್.ಎಸ್. ಅಂಬರೀಷ್ (65 ರನ್, 79 ಎಸೆತ, 7 ಬೌಂಡರಿ) ಅರ್ಧಶತಕಗಳ ಬಲದಿಂದ ಭಾರತ ತಂಡ (India Under-19) 19 ವಯೋಮಿತಿಯ ಏಕದಿನ ಸರಣಿಯ ಮಳೆಬಾಧಿತ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ 25 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ವೈಭವ್ ಸೂರ್ಯವಂಶಿ ಹಂಗಾಮಿ ನಾಯಕತ್ವದ ಭಾರತ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ವಿಲ್ಲೋಮೂರ್ ಪಾರ್ಕ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ ಒಂದು ಹಂತದಲ್ಲಿ 67 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಹರ್ವಂಶ್-ಅಂಬರೀಸ್ (
Harvansh Pangalia) 5ನೇ ವಿಕೆಟ್ಗೆ 137 ರನ್ ಜತೆಯಾಟವಾಡಿ ಆಸರೆಯಾದರು. ಇದರೊಂದಿಗೆ ಭಾರತ ಭರ್ತಿ 50 ಓವರ್ಗಳಲ್ಲಿ 301 ರನ್ ಗಳಿಸಿ ಆಲೌಟ್ ಆಯಿತು. ಪ್ರತಿಯಾಗಿ ದ. ಆಫ್ರಿಕಾ 27.4 ಓವರ್ಗಳಲ್ಲಿ 4 ವಿಕೆಟ್ಗೆ 148 ರನ್ ಗಳಿಸಿದಾಗ ಗುಡುಗು ಮತ್ತು ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ನಂತರ ಆಟ ಮುಂದುವರಿಯದೆ ಡಿಎಲ್ಎಸ್ ನಿಯಮದನ್ವಯ ಫಲಿತಾಂಶ ನಿರ್ಧರಿಸಲಾಯಿತು. ಡಿಎಲ್ಎಸ್ ಪ್ರಕಾರ ದ. ಆಫ್ರಿಕಾ 27.4 ಓವರ್ಗಳಲ್ಲಿ 174 ರನ್ ಗಳಿಸಬೇಕಾಗಿತ್ತು. ಭಾರತ: 50 ಓವರ್ಗಳಲ್ಲಿ 301 (ಆರನ್ ಜಾರ್ಜ್ 5, ವೈಭವ್ ಸೂರ್ಯವಂಶಿ 11, ವೇದಾಂತ್ 21, ಅಭಿಜ್ಞಾನ್ 21, ಹರ್ವಂಶ್ 93, ಅಂಬರೀಷ್ 65, ಕನಿಷ್ಕ್ 32, ಖಿಲನ್ 26, ಬಸೋನ್ 54ಕ್ಕೆ 4), ದಕ್ಷಿಣ ಆಫ್ರಿಕಾ: 27.4 ಓವರ್ಗಳಲ್ಲಿ 4 ವಿಕೆಟ್ಗೆ 148 (ಶಾಲ್ಕ್ವಿಕ್ 60*, ಮನಾಕ್ 46, ದೀಪೇಶ್ ದೇವೇಂದ್ರನ್ 33ಕ್ಕೆ 3, ಖಿಲನ್ ಪಟೇಲ್ 14ಕ್ಕೆ 1).