- ಸೂಪರ್ 8 ಹಂತ ತಲುಪಿದ ಟಿ20 ವಿಶ್ವಕಪ್ ಟೂರ್ನಿ
- ಮತ್ತೊಮ್ಮೆ ಇಂಡೋ-ಪಾಕ್ ಹೈವೋಲ್ಟೇಜ್ ಕದನಕ್ಕೆ ಫ್ಯಾನ್ಸ್ ಕೌತುಕ
- ಇದೇನಾದರೂ ಸಂಭವಿಸಿದರೆ ಇನ್ನೊಂದು ಭಾರತ-ಪಾಕ್ ಹೈವೋಲ್ಟೇಜ್ ಕದನ ಖಚಿತ
IND vs PAK: ಪ್ರಸಕ್ತ ಭಾರತದಲ್ಲಿ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಗಳು ಕುತೂಹಲಕಾರಿ ಹಾಗೂ ರೋಚಕದತ್ತ ಸಾಗಿದ್ದು, ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಇದೀಗ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿವೆ. ಇದು ಕ್ರಿಕೆಟ್ ಅಭಿಮಾನಿಗಳ ಕೌತುಕವನ್ನು ಇನ್ನಷ್ಟು ಡಬಲ್ ಮಾಡಿದೆ.
ಸೂಪರ್ 8 ಕದನ
ಫೆ.15ರಂದು ನಡೆದ ಇಂಡೋ-ಪಾಕ್ ಹೈವೋಲ್ಟೇಜ್ ಕದನದಲ್ಲಿ 61 ರನ್ಗಳಿಂದ ಸೂರ್ಯಕುಮಾರ್ ಯಾದವ್ ಪಡೆ ಭರ್ಜರಿ ಗೆಲುವನ್ನು ದಾಖಲಿಸಿತು. ಇದು ಪಾಕಿಸ್ತಾನಕ್ಕೆ ಭಾರೀ ಮುಖಭಂಗ ಉಂಟುಮಾಡಿತು. ಈಗ ಈ ಎರಡೂ ತಂಡಗಳು ಸೂಪರ್ 8 ಹಂತವನ್ನು ಪ್ರವೇಶಿಸಿದ್ದೇ ಆದರೂ ಎರಡನೇ ಬಾರಿಗೆ ಮುಖಾಮುಖಿಯಾಗಲಿವೆಯೇ? ಎಂಬ ಪ್ರಶ್ನೆ, ಕುತೂಹಲ ಮೂಡಿದೆ. ಕ್ರಿಕೆಟ್ ವಿಶ್ಲೇಷಕರು ಭಾರತ-ಪಾಕ್ ಮ್ಯಾಚ್ ನಡೆಯೋದು ಖಚಿತ ಎಂದು ಭವಿಷ್ಯ ನುಡಿದಿದ್ದು, ಹೇಗೆ ಎಂಬುದನ್ನು ಸಹ ವಿವರಿಸಿದ್ದಾರೆ.
ಸೆಮಿಫೈನಲ್ಗೆ 4 ತಂಡಗಳು
ಟಿ20 ವಿಶ್ವಕಪ್‌ನಲ್ಲಿ, ಪಾಕಿಸ್ತಾನ ಮತ್ತು ಭಾರತವನ್ನು ಎ ಗ್ರೂಪ್ನಿಂದ, ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳನ್ನು ಬಿ ಗುಂಪಿನಿಂದ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಅನ್ನು ಸಿ ಮತ್ತು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾವನ್ನು ಗ್ರೂಪ್ 'ಡಿ'ಯಿಂದ ಆಯ್ಕೆ ಮಾಡಲಾಗಿದೆ. ಎ ಗ್ರೂಪ್ನಿಂದ ಸೂಪರ್ 8 ಹಂತಕ್ಕೆ ಆಯ್ಕೆಯಾಗಿರುವ ಭಾರತ ಮತ್ತು ಪಾಕಿಸ್ತಾನ ತಲಾ ಮೂರು ಪಂದ್ಯಗಳನ್ನು ಎದುರಿಸಲಿವೆ. ಪಾಕ್ ಈ ತಿಂಗಳ 21ರಂದು ನ್ಯೂಜಿಲೆಂಡ್, 24ರಂದು ಇಂಗ್ಲೆಂಡ್ ಮತ್ತು 28ರಂದು ಶ್ರೀಲಂಕಾ ವಿರುದ್ಧ ಆಡಲಿದೆ.
ಇದು ನಡೆಯಬೇಕು...
ಅದೇ ಭಾರತ, ಈ ತಿಂಗಳ 22ರಂದು ದಕ್ಷಿಣ ಆಫ್ರಿಕಾ, 26ರಂದು ಜಿಂಬಾಬ್ವೆ ಮತ್ತು ಮಾರ್ಚ್ 1ರಂದು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಸೆಮಿಫೈನಲ್ಗೆ ಲಗ್ಗೆಯಿಡಲು ಆಡಲಿದೆ. ಇಲ್ಲಿ ಸೂರ್ಯಕುಮಾರ್ ಯಾದವ್ ಪಡೆ, ಸೂಪರ್ 8ರ ಗ್ರೂಪ್ 1ರಲ್ಲಿ ಮೊದಲ ಸ್ಥಾನ ಪಡೆಯಬೇಕು ಮತ್ತು ಪಾಕಿಸ್ತಾನ ಗುಂಪು 2ರಲ್ಲಿ ಎರಡನೇ ಸ್ಥಾನ ಪಡೆಯಬೇಕು. ಇದೇನಾದರೂ ಸಂಭವಿಸಿದರೆ, ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ಮತ್ತೊಂದು ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಅಕಸ್ಮಾತ್ ಇದು ನಡೆಯದಿದ್ದರೆ ಏನಾಗುತ್ತೆ? ಎಂಬ ಪ್ರಶ್ನೆಗೂ ಇದೇ ಉತ್ತರ.
ಹೈವೋಲ್ಟೇಜ್ ಅಲ್ಲ ಪವರ್ಹೌಸ್
ಇದೇನಾದರೂ ಸಂಭವಿಸದಿದ್ದರೆ, ಎರಡೂ ತಂಡಗಳು ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು. ಆಗ ಫೈನಲ್ ತಲುಪುವ ಸಾಧ್ಯತೆಯಿದೆ. ಭಾರತ ಮತ್ತು ಪಾಕಿಸ್ತಾನ ಫೈನಲ್ ತಲುಪಿದರೆ, ಕೊಲಂಬೊದಲ್ಲಿ ಹೈವೋಲ್ಟೇಜ್ ಅಲ್ಲ, ಪವರ್ಹೌಸ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಆದಾಗ್ಯೂ, ಕ್ರಿಕೆಟ್ ತಜ್ಞರ ಪ್ರಕಾರ, ತಂಡಗಳ ಬಲಾಬಲವನ್ನು ಆಧರಿಸಿ ಹೇಳುವುದಾದರೆ, ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಪಾಕಿಸ್ತಾನ ಸೆಮಿಫೈನಲ್ಗೆ ಲಗ್ಗೆಯಿಡುವ ಸಾಧ್ಯತೆಗಳು ಹೆಚ್ಚಿವೆ,(ಏಜೆನ್ಸೀಸ್).