SRH vs CSK ಪಂದ್ಯ 
ಕ್ರಿಕೆಟ್

ಎಸ್​ಆರ್​ಎಚ್​ ವಿರುದ್ಧ ಗೆದ್ದರೂ ಸಿಎಸ್​ಕೆ ಅಭಿಮಾನಿಗಳಿಗಿಲ್ಲ ಖುಷಿ! ಬದಲಾವಣೆಗಳು ತಂದರೂ ತಪ್ಪದ ಬೇಸರ | SRH vs CSK

ಪ್ರಮುಖ ಮುಖ್ಯಾಂಶಗಳು

  • ಇಂದು (ಏ.18) ಸಂಜೆ ಸಿಎಸ್​ಕೆ ಮತ್ತು ಎಸ್​ಆರ್​ಎಚ್​ ಪಂದ್ಯ
  • ಸನ್‌ರೈಸರ್ಸ್ ಪಂದ್ಯಕ್ಕಾಗಿ ಚೆನ್ನೈ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳು
  • ಮತ್ತೊಮ್ಮೆ ಸಿಎಸ್​ಕೆ ಅಭಿಮಾನಿಗಳಿಗೆ ಭಾರೀ ಬೇಸರ
SRH vs CSK: ಐಪಿಎಲ್​ 19ನೇ ಆವೃತ್ತಿಯ ಆರಂಭದಲ್ಲಿ ಸತತ ಸೋಲಿನಿಂದ ಲೀಗ್ ಆರಂಭಿಸಿದ ಐದು ಬಾರಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್, ಸಂಜು ಸ್ಯಾಮ್ಸನ್​ರಿಂದ ಶತಕದಾಟ ಬಂದಾಗಿನಿಂದ ಗೆಲುವಿನ ಲಯಕ್ಕೆ ಮರಳಿದೆ. ಇಂದು ಉಪ್ಪಾಳ್​ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ಎದುರು ಕಣಕ್ಕಿಳಿಯಲಿರುವ ಸಿಎಸ್​ಕೆ, ಮತ್ತೊಂದು ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಇನ್ನೊಂದು ಸ್ಥಾನ ಮೇಲೇರಲು ಸಜ್ಜಾಗಿದೆ.  ​  

ಮೈದಾನದಲ್ಲಿ ಧೋನಿ

ಪ್ರಸ್ತುತ, ಐಪಿಎಲ್​ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸಿಎಸ್​ಕೆ, ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಮತ್ತೊಂದೆಡೆ, ಐಪಿಎಲ್​ ಆರಂಭದಿಂದಲೂ ಫಿಟ್ನೆಸ್​ ಸಮಸ್ಯೆಗಳಿಂದ ತಂಡದ ಪರ ಆಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ತಮ್ಮ ದರ್ಶನ ಪಡೆಯಲು ತೀವ್ರ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಪದೇ ಪದೇ ನಿರಾಶೆ ಉಂಟಾಗುತ್ತಿದೆ. ಇದರಿಂದ ಸಿಎಸ್​ಕೆ ಪಂದ್ಯ ಗೆದ್ದರೂ ಅಭಿಮಾನಿಗಳಲ್ಲಿ ಅಂತಹ ಖುಷಿ ಕಾಣುತ್ತಿಲ್ಲ. ತಮ್ಮ ನೆಚ್ಚಿನ ಕ್ಯಾಪ್ಟನ್​ ಕೂಲ್​ರನ್ನು ನೋಡದೆ, ಫ್ಯಾನ್ಸ್​ಗಳು ಅತೀವ ಬೇಸರಕ್ಕೀಡಾಗಿದ್ದಾರೆ. ಇಂದಿನ ಪಂದ್ಯದಲ್ಲಿಯೂ ತಂಡದಲ್ಲಿ ಅವರ ಅನುಪಸ್ಥಿತಿ ಕಾಡಲಿದೆ ಎಂದು ಕೆಲವು ವರದಿಗಳು ಸೂಚಿಸಿವೆ.   
ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಖಲೀಲ್ ಅಹ್ಮದ್ ಬದಲಿಗೆ ಮುಖೇಶ್ ಚೌಧರಿ ಆಡಲಿದ್ದಾರೆ ಎಂದು ವರದಿಯಾಗಿದೆ. ಮುಖೇಶ್ ಮತ್ತು ಅನ್ಶುಲ್ ಕಾಂಬೋಜ್ ಬೌಲಿಂಗ್​ನಲ್ಲಿ ಕಮಾಲ್​ ಮಾಡಲು ಪಣತೊಟ್ಟಿದ್ದಾರೆ. ಅವರೊಂದಿಗೆ ಗುರ್ಜಪ್ನೀತ್ ಸಿಂಗ್ ಕೂಡ ತಂಡದಲ್ಲಿ ಇರಲಿದ್ದಾರೆ. ತಂಡದ ವೇಗಿ ನಾಥನ್ ಎಲ್ಲಿಸ್ ಅವರ ಅನುಪಸ್ಥಿತಿ ಮುಂದುವರಿಯಲಿದ್ದು, ಸಿಎಸ್​ಕೆ ಬೌಲಿಂಗ್ ಎಂದಿನಂತೆ ದುರ್ಬಲವಾಗಿಯೇ ಇರಲಿದೆ. ಇನ್ನು ಕಳಪೆ ಫಾರ್ಮ್ ಹೊರತಾಗಿಯೂ ನಾಯಕ ರುತುರಾಜ್ ಗಾಯಕ್ವಾಡ್ ಓಪನರ್ ಆಗಿ ಸಂಜು ಸ್ಯಾಮ್ಸನ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿರುವುದು ಕ್ರಿಕೆಟ್​ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).