ಸನ್ನಿ ಅಚ್ಚರಿಯ ಆಸೆಯನ್ನು ಹಿಟ್​ಮ್ಯಾನ್ ಈಡೇರಿಸ್ತಾರಾ..?  
ಕ್ರಿಕೆಟ್

ಆ ಘಟನೆಯ ಬಗ್ಗೆ ತುಂಬಾ ಬೇಸರವಿದೆ ಎಂದ ಗವಾಸ್ಕರ್!...ಸನ್ನಿ ಅಚ್ಚರಿಯ ಆಸೆಯನ್ನು ಹಿಟ್​ಮ್ಯಾನ್ ಈಡೇರಿಸ್ತಾರಾ..? | Sunil Gavaskar

Sunil Gavaskar: ಭಾರತ ತಂಡವು ನಿನ್ನೆ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದರು, ಸರಣಿಯನ್ನು ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ವಿಂಡೀಸ್ ತಂಡವು ಟೀಮ್​ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಸ್ತುತ ಸರಣಿಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತು.

Sunil Gavaskar: ಭಾರತ ತಂಡವು ನಿನ್ನೆ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದರು, ಸರಣಿಯನ್ನು ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ವಿಂಡೀಸ್ ತಂಡವು ಟೀಮ್​ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಸ್ತುತ ಸರಣಿಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 351 ರನ್‌ಗಳನ್ನು ಕಲೆಹಾಕಿತು. ಕನ್ನಡಿಗ ಕೆ ಎಲ್ ರಾಹುಲ್ ಶತಕವು ಭಾರತಕ್ಕೆ ಈ ಬೃಹತ್ ಮೊತ್ತವನ್ನು ಕಲೆಹಾಕಲು ನೆರವಾಯಿತು. ಇದರೊಂದಿಗೆ, ರೋಹಿತ್ ಶರ್ಮಾರ ಅದ್ಭುತ ಆಟವೂ ಕೂಡ ಅಭಿಮಾನಿಗಳಿಗೆ ಮನರಂಜನೆ ನೀಡಿತು. ಈ ಪಂದ್ಯದಲ್ಲಿ ಹಿಟ್​ಮ್ಯಾನ್​ 92 ರನ್​ಗಳಿಸಿ ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು.

ಈ ಕುರಿತಾಗಿ ಮಾತನಾಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ ಅವರು ಪಂದ್ಯದಲ್ಲಿ ಶತಕ ವಂಚಿತರಾಗಿದ್ದಕ್ಕೆ ತಮಗೆ ಎಷ್ಟು ನಿರಾಶೆಯಾಗಿದೆ ಎಂಬುದರ ಕುರಿತು ಮಾತನಾಡಿದರು.

ಇದನ್ನೂ ಓದಿ:ವಯಸ್ಸು ಕೇವಲ ಒಂದು ಸಂಖ್ಯೆ!....ರೋಹಿತ್ ಆಟ ನೋಡಿ ಅಜಿತ್ ಅಗರ್ಕರ್ ಪಶ್ಚಾತಾಪ ಪಡುತ್ತಿರಬಹುದು ಎಂದ ಮಾಜಿ ಕ್ರಿಕೆಟಿಗ | Sadagopan Ramesh

ಜಿಯೋಹಾಟ್‌‌ಸ್ಟಾರ್‌ ಜೊತೆ ಮಾತನಾಡಿದ ಗವಾಸ್ಕರ್​, ರೋಹಿತ್ 92 ರನ್‌ಗಳಿಗೆ ಔಟಾಗಿದ್ದಕ್ಕೆ ನನಗೆ ನಿರಾಶೆಯಾಗಲು ಕಾರಣವೆಂದರೆ, ಅವರಿಗೆ ಶತಕ ಬಾರಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಮುಂಬರುವ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು. ಆ ವೇಳೆಗೆ ರೋಹಿತ್ ಏಕದಿನ ಶತಕಗಳ ಸಂಖ್ಯೆಯು ಅವರ ವಯಸ್ಸಿಗಿಂತ ಹೆಚ್ಚಿರಬೇಕು ಎನ್ನುವುದು ನನ್ನ ಬಯಕೆ. ಒಂದು ವೇಳೆ ಅವರು ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದರೆ, ತಮ್ಮ 36ನೇ ಶತಕದೊಂದಿಗೆ ಆ ಸಾಧನೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.

ರೋಹಿತ್ ಬ್ಯಾಟಿಂಗ್ ಶೈಲಿಯ ಬಗ್ಗೆ ಬೆಳಕು ಚೆಲ್ಲಿದ ಗವಾಸ್ಕರ್

ಇದಲ್ಲದೆ, 2023ರ ಏಕದಿನ ವಿಶ್ವಕಪ್‌ನಿಂದೀಚೆಗೆ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಎಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ಗವಾಸ್ಕರ್ ಮಾತನಾಡಿದರು. ಆ ವಿಶ್ವಕಪ್‌ನಲ್ಲಿ ರೋಹಿತ್ ಅವರು ಔಟಾಗುವ ಭಯವಿಲ್ಲದೆ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು (ಬ್ಯಾಂಗ್-ಬ್ಯಾಂಗ್) ಆಡಲು ಆರಂಭಿಸಿದ್ದರು.

ಆ ವೇಳೆ ಟೀಮ್​ ಇಂಡಿಯಾದ ನಾಯಕರಾಗಿ ರೋಹಿತ್ ಸ್ವತಃ ರೂಪಿಸಿಕೊಂಡಿದ್ದ ಬ್ಯಾಟಿಂಗ್ ಶೈಲಿಯಲ್ಲಿ ಈಗ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಆ ಸಂದರ್ಭದಲ್ಲಿ ಅವರು ಬೇಗನೆ ಔಟಾಗುವ ಸಾಧ್ಯತೆಯನ್ನು ಲೆಕ್ಕಿಸದೆ ಮೊದಲ ಎಸೆತದಿಂದಲೇ ಬಿರುಸಿನ ಆಟವಾಡುತ್ತಿದ್ದರು. ಆದರೆ ಈಗ ತಮ್ಮ ವಿಕೆಟ್ ಎಷ್ಟುಮೌಲ್ಯಯುತ ಎಂಬುದು ಅವರಿಗೆ ಅರಿವಾಗಿದೆ. 2023ರ ವಿಶ್ವಕಪ್‌ನಲ್ಲಿ ಅವರು ತಂಡಕ್ಕೆ ಅತ್ಯುತ್ತಮ ಆರಂಭಗಳನ್ನು ಒದಗಿಸಿಕೊಟ್ಟಿದ್ದರು, ಆದರೆ ಅವರು ಕೇವಲ 30-40 ರನ್‌ಗಳಿಗೆ ಔಟಾಗುವ ಬ್ಯಾಟ್ಸ್‌ಮನ್ ಅಲ್ಲ. ಅವರು ಶತಕಗಳನ್ನು ಬಾರಿಸುವ ಆಟಗಾರ. ಆದ್ದರಿಂದ ಅವರು ದೊಡ್ಡ ಮೊತ್ತದ ರನ್‌ಗಳನ್ನು ಗಳಿಸುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಗವಾಸ್ಕರ್​ ಹೇಳಿದರು(ಏಜೆನ್ಸೀಸ್​).