ಅಕ್ವಿಬ್ ನಬಿ ಆಯ್ಕೆ ಸಂಬಂಧಿಸಿ ಆಯ್ಕೆ ಸಮಿತಿ ವಿರುದ್ಧ ತಿರುಗಿಬಿದ್ದ ಇರ್ಫಾನ್​ ಪಠಾಣ್​ 
ಕ್ರಿಕೆಟ್

ನನಗೆ ಅವರ ತರ್ಕವೇ ಅರ್ಥವಾಗಲ್ಲ: ಕಾಶ್ಮೀರದ ಅಕ್ವಿಬ್​ ನಬಿಗೆ ಅವಕಾಶ ಏಕಿಲ್ಲ? ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಸಿಡಿದೆದ್ದ ಇರ್ಫಾನ್​ ಪಠಾಣ್​! Irfan Pathan on Aquib Nabi

ಪ್ರಮುಖ ಮುಖ್ಯಾಂಶಗಳು

  • ಭಾರತ ಟೆಸ್ಟ್​ ತಂಡಕ್ಕೆ ಆಯ್ಕೆಯಾಗದ ವೇಗಿ ಅಕ್ವಿಬ್ ನಬಿ
  • ಅಕ್ವಿಬ್ ನಬಿ ಆಯ್ಕೆ ಸಂಬಂಧಿಸಿ ಆಯ್ಕೆ ಸಮಿತಿ ವಿರುದ್ಧ ತಿರುಗಿಬಿದ್ದ ಇರ್ಫಾನ್​ ಪಠಾಣ್​
  • ನನಗೆ ಈ ಆಯ್ಕೆ ಸಮಿತಿ ಅವರ ತರ್ಕವೇ ಅರ್ಥವಾಗುವುದಿಲ್ಲ ಎಂದು ಆಕ್ರೋಶ
ಕ್ರಿಕೆಟ್​: ಮುಂದಿನ ದಿನಗಳಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೆ ಜಮ್ಮು-ಕಾಶ್ಮೀರದ ಬೌಲರ್​​ ಅಕ್ವಿಬ್ ನಬಿ (Aquib Nabi) ಯನ್ನು ಆಯ್ಕೆ ಮಾಡದ ಕಾರಣ ಭಾರತ ತಂಡದ ಮಾಜಿ ಆಟಗಾರ ಇರ್ಫಾನ್​ ಪಠಾಣ್ (Irfan Pathan on Aquib Nabi)​ ರಾಷ್ಟ್ರೀಯ ಆಯ್ಕೆ ಸಮಿತಿ ಮೇಲೆ ಗರಂ ಆಗಿದ್ದಾರೆ.
ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿತೂ ನಬಿಯನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳದಿದ್ದಕ್ಕೆ ಪಠಾಣ್​​ ಬೇಸರ ವ್ಯಕ್ತ ಪಡಿಸಿದ್ದಾರೆ.

ನನಗೆ ಅವರ ತರ್ಕವೇ ಅರ್ಥವಾಗುವುದಿಲ್ಲ!

ನನಗೆ ಜಮ್ಮು-ಕಾಶ್ಮೀರದ ಈ ಅಕ್ವಿಬ್ ನಬಿಯನ್ನು ಏಕೆ ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ಇಂದಿಗೂ ಅರ್ಥವಾಗುತ್ತಿಲ್ಲ. ಹಿಂದೆ ನಡೆದಿದ್ದ ಅಫ್ಘಾನ್​ ವಿರುದ್ಧದ ಸರಣಿಯಲ್ಲಿ ಕೂಡ ಇತನನ್ನು ಕೇವಲ ನೆಟ್​ ಬೌಲರ್​ ಆಗಿ ಸೇರಿಸಿಕೊಳ್ಳಲಾಗಿತ್ತು ಎಂದಿದ್ದಾರೆ.
ಭಾರತ ಟೆಸ್ಟ್​ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಹಾಗೂ ಮೊಹಮ್ಮದ್​ ಸಿರಾಜ್​ ಇಬ್ಬರೇ ಮುಖ್ಯ ಬೌಲರ್​ಗಳಿದ್ದಾರೆ. ಇವರಲ್ಲಿ ಒಬ್ಬರು ಗಾಯಗೊಂಡರೆ ಇವರ ಸ್ಥಾನ ತುಂಬಬಲ್ಲ ಇನ್ನೊಬ್ಬ ವೇಗಿ ನಮ್ಮ ಬಳಿಯಿಲ್ಲ. ಇದನ್ನು ಏಕೆ ಆಯ್ಕೆ ಸಮಿತಿ ಸದಸ್ಯರು ಯೋಚಿಸುತ್ತಿಲ್ಲ, ಅವರು ಯಾವ ತರ್ಕದ ಆಧಾರದಲ್ಲಿ ಆಟಗಾರರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ನನಗ ಅರ್ಥವಾಗುತ್ತಿಲ್ಲ ಎಂದು ಪಠಾಣ್​ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಟ್ಯಾಲೆಂಟ್​ ಇದ್ದಾಗಲೇ ಆಯ್ಕೆ ಮಾಡಿ!

ಈ ಭಾರಿ ನಡೆದ ರಣಜಿ ಟ್ರೋಫಿಯನ್ನು ಜಮ್ಮು-ಕಾಶ್ಮೀರ ತಂಡವೇ ಗೆದ್ದಿದೆ. ಈ ಗೆಲುವನ್ನು ಕಾಣುವಲ್ಲಿ ವೇಗಿ ಅಕ್ವಿಬ್ ನಬಿ ಪಾತ್ರ ಪ್ರಮುಖವಾಗಿತ್ತು. ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಕಾಶ್ಮೀರಿಗಳು ಟ್ರೋಫಿ ಗೆದ್ದಿದ್ದಾರೆ. ದೇಶೀಯ ಪಂದ್ಯಗಳ ಆಧಾರದಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ನಡೆಯುತ್ತದೆ ಎಂದ ಮೇಲೆ ನಬಿ ಏಕೆ ಭಾರತಕ್ಕೆ ಸೇರ್ಪಡೆಯಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಕ್ವಿಬ್ ನಬಿ ಒಬ್ಬನೇ ಅಲ್ಲ, ಅವನಷ್ಟೇ ಟ್ಯಾಲೆಂಟ್​ ಇರುವ ಇನ್ನಷ್ಟು ಜನ ಯುವ ಆಟಗಾರರಿದ್ದಾರೆ. ಅವರಿಗೆ ವಯಸ್ಸು ಹಾಗೂ ಹುಮ್ಮಸ್ಸು ಎರಡೂ ಇದ್ದಾಗಲೇ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ, ಭಾರತ ತಂಡ ಸದೃಡವಾಗುತ್ತದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ನಮ್ಮದಾಗುತ್ತದೆ. ಅದಕ್ಕಿಂತ ಮೊದಲು ಇಂತಹ ಯುವ ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳುವ ನೈಪುಣ್ಯತೆ ನಮ್ಮ ಆಯ್ಕೆಗಾರರಿಗೆ ಬರಬೇಕೆಂದು ಪಠಾಣ್​ ಹೇಳಿದ್ದಾರೆ, (ಏಜನ್ಸೀಸ್​).