ಬೌಲರ್​ಗಳ ಬೆವರಿಳಿಸುವ ಹೆನ್ರಿಕ್ ಕ್ಲಾಸೆನ್​ ಬಿರಿಯಾನಿ ಖಾರಕ್ಕೆ ಕಣ್ಣೀರಿಟ್ಟರು: ಇಶಾನ್​ ಕಿಶನ್​ ರಿಯಾಕ್ಷನ್​ ವೈರಲ್... Heinrich Klaasen  
ಕ್ರಿಕೆಟ್

ಬೌಲರ್​ಗಳ ಬೆವರಿಳಿಸುವ ಹೆನ್ರಿಕ್ ಕ್ಲಾಸೆನ್​ ಬಿರಿಯಾನಿ ಖಾರಕ್ಕೆ ಕಣ್ಣೀರಿಟ್ಟರು: ಇಶಾನ್​ ಕಿಶನ್​ ರಿಯಾಕ್ಷನ್​ ವೈರಲ್... Heinrich Klaasen

ಪ್ರಮುಖ ಮುಖ್ಯಾಂಶಗಳು

  • ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಬಗ್ಗೆ ನಿಮಗೆ ಗೊತ್ತಿದೆ
  • ಬ್ಯಾಟ್​ ಹಿಡಿದು ಕ್ರೀಸ್​ನಲ್ಲಿ ನಿಂತರೆ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುತ್ತಾರೆ
  • ಎದುರಾಳಿ ಬೌಲರ್​ಗಳ ಬೆವರಿಳಿಸುವ ಕ್ಲಾಸೆನ್​ ಇದೀಗ ತಾವೇ ಕಣ್ಣೀರಿಟ್ಟಿದ್ದಾರೆ
  • ವರ್ಲ್ಡ್​ ಫೇಮಸ್​ ಹೈದರಾಬಾದಿ​ ಬಿರಿಯಾನಿ ಖಾರದ ಘಾಟನ್ನು ತಡೆಯದೇ ಕಣ್ಣೀರಿಟ್ಟ ಕ್ಲಾಸೆನ್​
Heinrich Klaasen : ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬ್ಯಾಟ್​ ಹಿಡಿದು ಕ್ರೀಸ್​ನಲ್ಲಿ ನಿಂತರೆ, ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ, ಎದುರಾಳಿ ಬೌಲರ್​ಗಳ ಬೆವರಿಳಿಸುವ ಕ್ಲಾಸೆನ್​, ಇದೀಗ ತಾವೇ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಕ್ಲಾಸೆನ್​ಗೆ ಏನಾಯ್ತು ಅಂತೀರಾ? ಹಾಗಾದರೆ, ಈ ಸ್ಟೋರಿ ಓದಿ.
ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಮೆಂಟ್​ನಲ್ಲಿ ಈವರೆಗೂ ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆಲವು ಸಾಧಿಸಿ, ಎರಡರಲ್ಲಿ ಸೋಲುಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಏಪ್ರಿಲ್ 5 ರಂದು ಉಪ್ಪಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್​ ಜೈಂಟ್ಸ್​ ವಿರುದ್ಧ ಎಸ್​ಆರ್​ಎಚ್​ ಸೋಲುಂಡಿತು. ಸೋಲಿನ ಬೇಸರ ಒಂದೆಡೆಯಾದರೆ, ಹೇಗೋ ಹೈದರಾಬಾದ್​ಗೆ ಬಂದಿದ್ದರಿಂದ ಎಲ್ಲರ ಮನಸ್ಸು ವರ್ಲ್ಡ್​ ಫೇಮಸ್​ ಹೈದರಾಬಾದಿ​ ಬಿರಿಯಾನಿ ಮೇಲೆ ಹೋಯಿತು.
ನಾಯಕ ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್ ಸೇರಿದಂತೆ ತಂಡದ ಇತರೆ ಆಟಗಾರರು ಹೋಟೆಲ್‌ಗೆ ಹೋದರು. ಎಲ್ಲರೂ ಆರಾಮಾಗಿ ಬಿರಿಯಾನಿ ಸವಿಯುವಾಗ ಹೆನ್ರಿಕ್ ಕ್ಲಾಸೆನ್ ಮಾತ್ರ ಬಿರಿಯಾನಿಯ ಖಾರಕ್ಕೆ ಸುಸ್ತಾದರು. ಏಕೆಂದರೆ, ಬಿರಿಯಾನಿಯ ಖಾರದ ಘಾಟು ಕ್ಲಾಸೆನ್​ ಅವರ ಕಣ್ಣಲ್ಲಿ ನೀರು ಮತ್ತು ಮೈಯಲ್ಲಿ ಬೆವರು ತರಿಸಿತು. ಕೂಡಲೇ ತಮ್ಮ ಬಳಿಯಿದ್ದ ಕರವಸ್ತ್ರದಿಂದ ಕ್ಲಾಸೆನ್​ ಮುಖ ಮತ್ತು ಕಣ್ಣೊರೆಸಿಕೊಂಡರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಇಶಾನ್ ಕಿಶನ್, ಕ್ಲಾಸೆನ್​ ಅವರನ್ನು ನೋಡಿ ನಕ್ಕರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ನಿತೀಶ್​ ಕುಮಾರ್​ ರೆಡ್ಡಿ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ಹೈದರಾಬಾದ್ ಬಿರಿಯಾನಿ ಅಂದರೆ ಸುಮ್ಮನೇನಾ? ಮೈದಾನದಲ್ಲಿ ಸಿಕ್ಸ್ ಹೊಡೆಯುವಷ್ಟು ಸುಲಭವಲ್ಲ ಎನ್ನುತ್ತಿದ್ದಾರೆ, (ಏಜೆನ್ಸೀಸ್​).