ಐಪಿಎಲ್​ 2026  
ಕ್ರಿಕೆಟ್

ಹರಾಜು ಪ್ರಕ್ರಿಯೆಗೆ ದಿನಗಣನೆ: ಆಟಗಾರರ ಖರೀದಿಗೆ ಫ್ರಾಂಚೈಸಿಗಳ ಬಳಿಯಿರುವ ಹಣವೆಷ್ಟು? ಇಲ್ಲಿದೆ ವಿವರ | IPL 2026

ಪ್ರಮುಖ ಮುಖ್ಯಾಂಶಗಳು

  • ರಿಲೀಸ್​, ರಿಟೈನ್​ ಮಾಡಿದ ಆಟಗಾರರ ಪಟ್ಟಿ ಪ್ರಕಟಿಸಿದ ಫ್ರಾಂಚೈಸಿಗಳು
  • ಡಿ.16ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ
  • ಯಾವ ತಂಡದ ಬಳಿ ಎಷ್ಟಿದೆ ಹಣ?
ಮುಂಬೈ: ಇದೇ ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಹರಾಜಿಗೂ ಮುನ್ನ ಐಪಿಎಲ್ ರಿಟೈನ್​, ರಿಲೀಸ್​ ಪ್ರಕ್ರಿಯೆ ನಡೆದಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಉಳಿಸಿಕೊಳ್ಳುವಿಕೆ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ ಒಂದಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಹಾಗೂ ಸ್ಟಾರ್​ ಆಟಗಾರರ ಎಂಟ್ರಿ ಬಗ್ಗೆ ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿವೆ.
ರಿಟೈನ್​ ಹಾಗೂ ರಿಲೀಸ್​ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಐಪಿಎಲ್ 2026ರ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗುತ್ತಿದೆ. ಆಟಗಾರರನ್ನು ಉಳಿಸಿಕೊಳ್ಳುವ ಗಡುವು ಶನಿವಾರ ಅಂತ್ಯಗೊಂಡಿದ್ದು, ಇದರೊಂದಿಗೆ, ಫ್ರಾಂಚೈಸಿಗಳು ಅನೇಕ ಆಟಗಾರರನ್ನು ಬಿಡುಗಡೆಗೊಳಿಸಿ ಮತ್ತು ಕೆಲವರನ್ನು ಟ್ರೇಡ್​ ಮೂಲಕ ಮತ್ತೊಂದು ತಂಡಕ್ಕೆ ಕಳಿಸಿಕೊಟ್ಟಿರುವುದು ಸದ್ಯ ಕ್ರಿಕೆಟ್​ ಪ್ರಿಯರ ಅಚ್ಚರಿಗೆ ಕಾರಣವಾಯಿತು.
ಪ್ರಸ್ತುತ, ರಿಟೈನ್​ ಮತ್ತು ರಿಲೀಸ್​ ಮಾಡಬೇಕಾದ ಆಟಗಾರರ ಪಟ್ಟಿಗಳನ್ನು ಎಲ್ಲಾ ಫ್ರಾಂಚೈಸಿಗಳು ಪ್ರಕಟಿಸಿದ್ದು, ಇದೇ ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆದಾಗ್ಯೂ, ಆಟಗಾರರನ್ನು ಉಳಿಸಿಕೊಳ್ಳುವುದು ಮತ್ತು ಕಳಿಸಿಕೊಟ್ಟ ನಂತರ ಪ್ರತಿ ತಂಡವು ಎಷ್ಟು ಹಣವನ್ನು ಬಿಡ್ಡಿಂಗ್​ಗಾಗಿ ತಮ್ಮ ಬಳಿ ಇರಿಸಿಕೊಂಡಿದೆ ಎಂಬುದರ ವಿವರ ಹೀಗಿದೆ ನೋಡಿ.
1. ಚೆನ್ನೈ ಸೂಪರ್ ಕಿಂಗ್ಸ್: 43.40 ಕೋಟಿ ರೂ.
2. ಡೆಲ್ಲಿ ಕ್ಯಾಪಿಟಲ್ಸ್: 21.80 ಕೋಟಿ ರೂ.
3. ಗುಜರಾತ್ ಟೈಟನ್ಸ್: 12.90 ಕೋಟಿ ರೂ.
4. ಕೋಲ್ಕತ ನೈಟ್ ರೈಡರ್ಸ್: 64.30 ಕೋಟಿ ರೂ.
5. ಲಖನೌ ಸೂಪರ್ ಜೈಂಟ್ಸ್: 22.95 ಕೋಟಿ ರೂ.
6. ಮುಂಬೈ ಇಂಡಿಯನ್ಸ್: 2.75 ಕೋಟಿ ರೂ.
7. ಪಂಜಾಬ್ ಕಿಂಗ್ಸ್: 11.50 ಕೋಟಿ ರೂ.
8. ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.40 ಕೋಟಿ ರೂ.
9. ರಾಜಸ್ಥಾನ ರಾಯಲ್ಸ್: 16.05 ಕೋಟಿ ರೂ.
10. ಸನ್‌ರೈಸರ್ಸ್ ಹೈದರಾಬಾದ್: 25.50 ಕೋಟಿ ರೂ.


ತಂಡಗಳಲ್ಲಿ ಎಷ್ಟು ಆಟಗಾರರಿಗೆ ಸ್ಥಾನವಿದೆ?

ಸಿಎಸ್​ಕೆ: (4 ವಿದೇಶಿ ಆಟಗಾರರು ಸೇರಿ ಒಟ್ಟು 9 ಆಟಗಾರರು).
ಡಿಸಿ: (5 ವಿದೇಶಿ ಆಟಗಾರರು ಸೇರಿದಂತೆ 8 ಆಟಗಾರರು)
ಜಿಟಿ: (4 ವಿದೇಶಿ ಆಟಗಾರರು ಸೇರಿದಂತೆ 5 ಆಟಗಾರರು)
ಕೆಕೆಆರ್​: (6 ವಿದೇಶಿ ಆಟಗಾರರು ಸೇರಿದಂತೆ 13 ಆಟಗಾರರು)
ಎಲ್​ಎಸ್​ಜಿ: (4 ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರು)
ಎಂಐ: (ಒಬ್ಬ ವಿದೇಶಿ ಆಟಗಾರ ಸೇರಿದಂತೆ 5 ಆಟಗಾರರು)
ಪಂಜಾಬ್ ಕಿಂಗ್ಸ್​: (4 ಆಟಗಾರರು, ಇಬ್ಬರು ವಿದೇಶಿ ಆಟಗಾರರಿಗೆ ಸ್ಥಾನ)
ಆರ್​ಸಿಬಿ: (8 ಆಟಗಾರರು, ಇಬ್ಬರು ವಿದೇಶಿ ಆಟಗಾರರಿಗೆ ಸ್ಥಾನ)
ಆರ್​ಆರ್​: (9 ಆಟಗಾರರು, ಒಬ್ಬ ವಿದೇಶಿ ಆಟಗಾರನಿಗೆ ಸ್ಥಾನ)
ಎಸ್​ಆರ್​ಎಚ್​: (10 ಆಟಗಾರರು, ಇಬ್ಬರು ವಿದೇಶಿ ಆಟಗಾರರಿಗೆ ಸ್ಥಾನ)

ಕೆಕೆಆರ್​ ಬಳಿ ಹೆಚ್ಚು ಹಣ!

ವೆಂಕಟೇಶ್ ಅಯ್ಯರ್ (23.75 ಕೋಟಿ ರೂ.) ಮತ್ತು ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಆ್ಯಂಡ್ರೆ ರಸೆಲ್ (12 ಕೋಟಿ ರೂ.) ಅವರನ್ನು ರಿಲೀಸ್ ಮಾಡಿದ ಬಳಿಕ ಕೋಲ್ಕತ ನೈಟ್ ರೈಡರ್ಸ್ ಇತರೆ ತಂಡಗಳಿಗಿಂತ ಅತಿ ಹೆಚ್ಚು ಹಣವನ್ನು (64.3 ಕೋಟಿ ರೂ.) ತನ್ನ ಬಳಿ ಇಟ್ಟುಕೊಂಡಿದೆ,(ಏಜೆನ್ಸೀಸ್).