Hockey World Cup: ಭಾರತ-ಆಸೀಸ್ ಕ್ವಾರ್ಟರ್​​ಫೈನಲ್ 
ಕ್ರಿಕೆಟ್

Hockey World Cup: ಭಾರತ-ಆಸೀಸ್ ಕ್ವಾರ್ಟರ್​​ಫೈನಲ್

ಆಮ್‌ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್):

ಎಫ್​ಐಎಚ್​ ಹಾಕಿ ವಿಶ್ವಕಪ್‌ನಲ್ಲಿ ಪ್ರಶಸ್ತಿ ಆಸೆ ಜೀವಂತವಿರಿಸಲು ಭಾರತ ಮಹಿಳಾ ತಂಡ ಗೆಲ್ಲಲೇಬೇಕಾದ ಅನಿವಾರ‌್ಯತೆಯಲ್ಲಿದ್ದು, ಜತೆಗೆ ಇತರ ಪಂದ್ಯದ ಫಲಿತಾಂಶವೂ ವರದಾನವಾಗಬೇಕಿದೆ. ಸಲೀಮಾ ಟೆಟೆ ಪಡೆ ‘ಕ್ವಾರ್ಟರ್‌ ಫೈನಲ್’ ಮಾದರಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾನುವಾರ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದರೂ, ಇದಕ್ಕೆ ಮುನ್ನ ನಡೆಯುವ ಪಂದ್ಯದಲ್ಲಿ ಚೀನಾ ಎದುರು ಹಾಲಿ ಚಾಂಪಿಯನ್ ನೆದರ್ಲ್ಯಾಂಡ್ಸ್ ತಂಡ ಸೋಲು ಅನುಭವಿಸದಿದ್ದರೇ ಸೆಮಿಫೈನಲ್‌ಗೇರುವ ಅವಕಾಶ ಹೊಂದಿರಲಿದೆ.


ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ವಿಶ್ವ ನಂ.1 ನೆದರ್ಲ್ಯಾಂಡ್ಸ್ ಎದುರು 2-0ಯಿಂದ ಸೋತರೂ ಸೆಮೀಸ್ ರೇಸ್‌ನಲ್ಲಿರುವ ಭಾರತ ತಂಡ ಒಂದು ಅಂಕದೊಂದಿಗೆ ಇ ಗುಂಪಿನಲ್ಲಿ ಕೊನೇ ಸ್ಥಾನದಲ್ಲಿದೆ. ಆತಿಥೇಯ ನೆದರ್ಲ್ಯಾಂಡ್ಸ್ ತಂಡ ಆರು ಪಾಯಿಂಟ್‌ನೊಂದಿಗೆ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದ್ದು, ಇನ್ನೊಂದು ಸ್ಥಾನಕ್ಕೆ ಚೀನಾ (2), ಆಸ್ಟ್ರೇಲಿಯಾ (1), ಭಾರತ ತಂಡಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.
ಭಾರತ ಸೆಮಿಫೈನಲ್‌ಗೇರುವ ಹಾದಿ ಸ್ಪಷ್ಟತೆ ಹೊಂದಿದೆ. ಚೀನಾ ಎದುರು ನೆದರ್ಲ್ಯಾಂಡ್ಸ್ ಸೋಲು ತಪ್ಪಿಸಿ ಡ್ರಾ ಅಥವಾ ಗೆಲುವು ದಾಖಲಿಸಿ, ಆಸ್ಟ್ರೇಲಿಯಾ ಎದುರು ಭಾರತ ಗೆದ್ದರೆ ಮುಂದಿನ ಸುತ್ತಿಗೇರಬಹುದಾಗಿದೆ. ಒಂದು ವೇಳೆ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸುವಲ್ಲಿ ಚೀನಾ ಯಶಸ್ವಿಯಾದರೆ, ಆಗ, ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ಔಪಚಾರಿಕ ಎನಿಸಲಿದೆ.
ಚೀನಾ ಗರಿಷ್ಠ 5 ಹಾಗೂ ಭಾರತ ಗರಿಷ್ಠ 4 ಅಂಕ ಕಲೆಹಾಕುವ ಅವಕಾಶವಿದೆ. ಚೀನಾ ಸೋತು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾಗೊಂಡರೆ ಆಗ ಮೂರೂ ತಂಡಗಳು ತಲಾ ಎರಡು ಅಂಕ ಹೊಂದಲಿವೆ. ಗೋಲು ವ್ಯತ್ಯಾಸ ನಿರ್ಣಾಯಕವಾಗಲಿದೆ. ಎರಡು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ 2025-26ರ ಪ್ರೊ ಲೀಗ್‌ನಲ್ಲಿ 8ನೇ ಸ್ಥಾನ ಪಡೆದರೆ, ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ರನ್ನರ್ ಅಪ್ ಎನಿಸಿತ್ತು.
ಆರಂಭ: ರಾತ್ರಿ 10.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.