ಟೀಮ್ ಇಂಡಿಯಾ- ಸೌತ್ ಆಫ್ರಿಕಾ
- ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೇಲುಗೈ
- ಟಿ20 ಸರಣಿ ವೇಳಾಪಟ್ಟಿ, ಹೆಡ್-ಟು-ಹೆಡ್ ರೆಕಾರ್ಡ್
- ಸಂಜೆ 7 ಗಂಟೆಯಿಂದ ಪಂದ್ಯ ಆರಂಭ
ನವದೆಹಲಿ: ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಬೀಗಿದ ಟೀಮ್ ಇಂಡಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸನ್ನದ್ಧವಾಗಿದೆ. ಟೆಸ್ಟ್ ಸರಣಿಯಲ್ಲಿ ಹರಿಣರ ಪಡೆ ಎದುರು ಕ್ಲೀನ್ ಸ್ವೀಪ್ ಆದ ಭಾರತ, ಈಗ ಟಿ20 ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಐದು ಪಂದ್ಯಗಳ ಟಿ20 ಸರಣಿ ಇದೇ ಡಿ.09ರಿಂದ ತವರಿನಲ್ಲೇ ನಡೆಯಲಿದೆ.
ಹೆಡ್-ಟು-ಹೆಡ್ ದಾಖಲೆಗಳು?
ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ ಟಿ20 ಪಂದ್ಯಗಳಲ್ಲಿ 31 ಬಾರಿ ಮುಖಾಮುಖಿಯಾಗಿವೆ. ಭಾರತ ಒಟ್ಟು 18 ಪಂದ್ಯವನ್ನು ಗೆದ್ದಿದ್ದರೆ, ಹರಿಣರ ಪಡೆ 12 ಮ್ಯಾಚ್ ಗೆದ್ದಿದೆ. ಒಂದೇ ಒಂದು ಪಂದ್ಯದಲ್ಲಿ ಮಾತ್ರ ಯಾವುದೇ ಫಲಿತಾಂಶ ಹೊರಬಂದಿಲ್ಲ. ಭಾರತ ತವರಿನಲ್ಲಿ 5 ಮ್ಯಾಚ್ನಲ್ಲಿ ಜಯ ಸಾಧಿಸಿದ್ದರೆ, ವಿದೇಶಿ ತಂಡ 4ರಲ್ಲಿ ಗೆಲುವು ದಾಖಲಿಸಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದಿದ್ದರೆ, ಹರಿಣರ ಪಡೆ ನಮ್ಮ ಅಂಗಳದಲ್ಲಿ 6 ಪಂದ್ಯಗಳನ್ನು ಗೆದ್ದಿದೆ.
5 ಟಿ20 ಪಂದ್ಯಗಳ ವೇಳಾಪಟ್ಟಿ
2ನೇ ಟಿ20: ಡಿ.11 (ಮುಲ್ಲನ್‌ಪುರ)
3ನೇ ಟಿ20: ಡಿ.14 (ಧರ್ಮಶಾಲಾ)
5ನೇ ಟಿ20: ಡಿ.19 (ಅಹಮದಾಬಾದ್)
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.
ದಕ್ಷಿಣ ಆಫ್ರಿಕಾ ತಂಡ
ಏಡೆನ್ ಮಾರ್ಕ್ರಮ್ (ನಾಯಕ), ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜಾರ್ಜಿ, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್, ಡೊನೊವನ್ ಫೆರೇರಾ, ಟ್ರಿಸ್ಟಾನ್ ಸ್ಟಬ್ಸ್, ಒಟ್ನೀಲ್ ಬಾರ್ಟ್‌ಮ್ಯಾನ್, ಕೇಶವ್ ಮಹಾರಾಜ್, ಕ್ವೆನಾ ಮಫಾಗಿ, ಕ್ವೆನಾ ಮಫಾಗಿ.