ಆತ ಕ್ರಿಕೆಟ್ ಆಡುವ ರೀತಿ ವಿಡಿಯೋ ಗೇಮ್ನಂತಿರುತ್ತದೆ... ಅಚ್ಚರಿಯ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್! Sanju Samson
- ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ
- ತಮ್ಮ ವಿನಾಶಕಾರಿ ಬ್ಯಾಟಿಂಗ್ ಮೂಲಕವೇ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ
- ವೈಭವ್, ಬ್ಯಾಟ್ ಹಿಡಿದು ಕ್ರೀಸ್ಗೆ ಇಳಿದರೆ ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕು ಶುರುವಾಗುತ್ತದೆ
- ವೈಭವ್ ಬಗ್ಗೆ ಸಂಜು ಸ್ಯಾಮ್ಸನ್ ಆಡಿರುವ ಮಾತುಗಳು ಇದೀಗ ಎಲ್ಲರ ಗಮನ ಸೆಳೆದಿದೆ
Sanju Samson : ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತಮ್ಮ ವಿನಾಶಕಾರಿ ಬ್ಯಾಟಿಂಗ್ ಮೂಲಕವೇ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ. ವೈಭವ್, ಬ್ಯಾಟ್ ಹಿಡಿದು ಕ್ರೀಸ್ಗೆ ಇಳಿದರೆ ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕು ಶುರುವಾಗುತ್ತದೆ. ಕೇವಲ 14ನೇ ವಯಸ್ಸಿನಲ್ಲಿ ಕ್ರೀಡಾ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ವೈಭವ್, ಇತ್ತೀಚಿಗೆ ನಡೆದ U-19 ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂಥಾ ವೈಭವ್ ಬಗ್ಗೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಟೀಮ್ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಆಡಿರುವ ಮಾತುಗಳು ಎಲ್ಲರ ಗಮನ ಸೆಳೆದಿದೆ. 2025ರ ಐಪಿಎಲ್ ವೇಳೆ ರಾಹುಲ್ ದ್ರಾವಿಡ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಸ್ಯಾಮ್ಸನ್ ನೆನಪಿಸಿಕೊಂಡರು.
ಅಂದಹಾಗೆ, 2025ರ ಐಪಿಎಲ್ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ವೈಭವ್ ಸೂರ್ಯವಂಶಿ, ಕೇವಲ 14 ವರ್ಷ 23 ದಿನಗಳಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದರು. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವೈಭವ್ ಅವರನ್ನು 1.10 ಕೋಟಿ ರೂ.ಗಳಿಗೆ ಖರೀದಿಸಿತು. ಮೊದಲ ಐಪಿಎಲ್ನಲ್ಲೇ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ವೈಭವ್ ವಿಶ್ವದ ಗಮನ ಸೆಳೆದರು.
ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ('ನಮನ್ ಪ್ರಶಸ್ತಿಗಳು-2026') ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ (ಮಾರ್ಚ್ 15) ಬಹಳ ಸಡಗರದಿಂದ ನಡೆಯಿತು. ಈ ಅದ್ಧೂರಿ ಸಮಾರಂಭದಲ್ಲಿ ಕಳೆದ ವರ್ಷದಿಂದ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಭಾರತೀಯ ಹಿರಿಯ ಮತ್ತು ಕಿರಿಯ ತಂಡಗಳನ್ನು ಬಿಸಿಸಿಐ ಸನ್ಮಾನಿಸಿತು. ಈ ಕಾರ್ಯಕ್ರಮದ ವೇಳೆ ಸಂಜು ಸ್ಯಾಮ್ಸನ್ ಒಂದು ಕುತೂಹಲಕಾರಿ ಘಟನೆಯನ್ನು ನೆನಪಿಸಿಕೊಂಡರು. ಐಪಿಎಲ್ನಲ್ಲಿ ಪಂದ್ಯದ ಮೊದಲು ರಾಹುಲ್ ದ್ರಾವಿಡ್ ಅವರು ಆಟಗಾರರನ್ನು ತಮ್ಮ ಕೋಣೆಗೆ ಕರೆದು ಪಂದ್ಯದ ಯೋಜನೆಯ ಬಗ್ಗೆ ಕೇಳಿದಾಗ ವೈಭವ್ ಹೇಳಿದ ಮಾತುಗಳನ್ನು ಸಂಜು ನೆನಪಿಸಿದರು.
ನಿಮ್ಮ ಇಂದಿನ ಪ್ಲಾನ್ ಏನು ಎಂದು ಕೋಚ್ ರಾಹುಲ್ ದ್ರಾವಿಡ್ ಅವರು ಕೇಳಿದ ಪ್ರಶ್ನೆಗಳಿಗೆ ವೈಭವ್ ತುಂಬಾ ಸರಳವಾಗಿ ಉತ್ತರಿಸಿದರು. ಸರ್, ಯಾವುದೇ ವಿಶೇಷ ಯೋಜನೆ ಇಲ್ಲ. ನಾನು ನನ್ನ ಆಟವನ್ನು ಆಡುವುದಾಗಿ ವೈಭವ್ ಹೇಳಿದರು. ಅಲ್ಲದೆ, ಮೊದಲ ಚೆಂಡು ನನ್ನ ವಲಯದಲ್ಲಿ ಬಂದರೆ, ನಾನು ಅದನ್ನು ಗಾಳಿಯಲ್ಲಿ ಕಳುಹಿಸುತ್ತೇನೆ ಎಂದರು. ಅಂತಿಮವಾಗಿ, ವೈಭವ್ ಅದೇ ರೀತಿ ಮಾಡಿದರು. ತಮ್ಮ ಮಾತಿನಂತೆಯೇ ಮೈದಾನದಲ್ಲಿ ಆಡಿದರು. ವೈಭವ್ ಅವರು ಕ್ರಿಕೆಟ್ ಆಡುವ ರೀತಿ "ವಿಡಿಯೋ ಗೇಮ್" ನಂತಿದೆ ಎಂದು ಸ್ಯಾಮ್ಸನ್ ಹೇಳಿದರು.
ಸಂಜು ಹೇಳಿದ ಮಾತುಗಳನ್ನು ಕೇಳಿದ ವೈಭವ್ ಸೂರ್ಯವಂಶಿ ಮನಸಾರೆ ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ, (ಏಜೆನ್ಸೀಸ್).