ಆಸೀಸ್​ ನೆಲದ ಟೆಸ್ಟ್​ನಲ್ಲಿ ಬಾಂಗ್ಲಾ ಅಚ್ಚರಿಯ ಮೇಲುಗೈ! ಹಸನ್​ ದಾಳಿಗೆ ಕಾಂಗರೂ ತತ್ತರ 
ಕ್ರಿಕೆಟ್

ಆಸೀಸ್​ ನೆಲದ ಟೆಸ್ಟ್​ನಲ್ಲಿ ಬಾಂಗ್ಲಾ ಅಚ್ಚರಿಯ ಮೇಲುಗೈ! ಹಸನ್​ ದಾಳಿಗೆ ಕಾಂಗರೂ ತತ್ತರ

ಡಾರ್ವಿನ್​: ವೇಗಿ (

Hasan Mahmud

) ಹಸನ್​ ಮಹಮೂದ್​ (55ಕ್ಕೆ 6) ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೆಲಿಯಾ (

Australia

) ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ ಮೇಲುಗೈ ಬಿಟ್ಟುಕೊಟ್ಟಿದೆ. 23 ವರ್ಷಗಳ ಬಳಿಕ ಕಾಂಗರೂ ನಾಡಿನಲ್ಲಿ ಟೆಸ್ಟ್​ ಸರಣಿ ಆಡುತ್ತಿರುವ ಬಾಂಗ್ಲಾ ಅಚ್ಚರಿಯ ರೀತಿಯಲ್ಲಿ ಮೊದಲ ದಿನದ ಗೌರವ ಸಂಪಾದಿಸಿತು.


ಮರಾರ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಆಸೀಸ್​ ನಿರ್ಧಾರ ಕೈಕೊಟ್ಟಿತು. ಬಾಂಗ್ಲಾ ವೇಗಿಗಳ ದಾಳಿಗೆ ಕುಸಿದ ಆಸೀಸ್​ 200ರ ಗಡಿ ದಾಟಲು ವಿಫಲವಾಯಿತು. ಒಂದು ಹಂತದಲ್ಲಿ 74 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ತಿಣುಕಾಡಿದ ಆಸೀಸ್​, ಸ್ಟೀವನ್​ ಸ್ಮಿತ್​ (71) ಏಕಾಂಗಿ ಹೋರಾಟದ ನಡುವೆ ಚಹಾ ವಿರಾಮದ ಬಳಿಕ 53 ಓವರ್​ಗಳಲ್ಲಿ 198 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಬಾಂಗ್ಲಾ ದಿನದಂತ್ಯಕ್ಕೆ 24 ಓವರ್​ಗಳಲ್ಲಿ 1 ವಿಕೆಟ್​ಗೆ 96 ರನ್​ ಗಳಿಸಿದ್ದು, ಸದ್ಯ 102 ರನ್​ ಹಿನ್ನಡೆಯಲ್ಲಿದೆ.

ಆಸ್ಟ್ರೆಲಿಯಾ: 53 ಓವರ್​ಗಳಲ್ಲಿ 198 (ಹೆಡ್​ 23, ವೆದರಾಲ್ಡ್​ 23, ಲಬುಶೇನ್​ 1, ಸ್ಮಿತ್​ 71, ಗ್ರೀನ್​ 13, ಕ್ಯಾರಿ 19, ವೆಬ್​ಸ್ಟರ್​ 12, ಕಮ್ಮಿನ್ಸ್​ 9, ಸ್ಟಾರ್ಕ್​ 1, ಹಸನ್​ ಮಹಮೂದ್​ 55ಕ್ಕೆ 6, ಟಸ್ಕಿನ್​ 55ಕ್ಕೆ 2, ಇಬಾದತ್​ 39ಕ್ಕೆ 2). ಬಾಂಗ್ಲಾದೇಶ: 24 ಓವರ್​ಗಳಲ್ಲಿ 1 ವಿಕೆಟ್​ಗೆ 96 (ಶದ್ಮನ್​ 20, ತಂಜಿದ್​ 32*, ಹಕ್​ 35, ಸ್ಟಾರ್ಕ್​ 28ಕ್ಕೆ 1).