ಭಾರತೀಯ ಕ್ರಿಕೆಟ್ ಆಟಗಾರ Hardik Pandya (ಚಿತ್ರ Instagram) 
ಕ್ರಿಕೆಟ್

ಹಾರ್ದಿಕ್-ಮಹೀಕಾ ಪ್ರೀತಿಗೆ ಈಗ 'ಚಿರತೆ'ಯ ಬಲ: ಪ್ರೇಮಿಗಳ ದಿನದಂದೇ ಅನಾವರಣಗೊಂಡಿತು ಆ ವಿಶೇಷ ಹಚ್ಚೆ! Hardik Pandya

ಪ್ರಮುಖ ಮುಖ್ಯಾಂಶಗಳು

  • ಹಾರ್ದಿಕ್ ಪಾಂಡ್ಯ ಕ್ರಿಕೆಟ್​ ಮೈದಾನದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್​ಗಾಗಿ ಸದಾ ಸುದ್ದಿಯಲ್ಲಿರುತ್ತಾರೆ
  • ಈ ಬಾರಿ ಅವರು ಸುದ್ದಿಯಲ್ಲಿರುವುದು ಆಟಕ್ಕಲ್ಲ. ಬದಲಾಗಿ ಕುತ್ತಿಗೆಯ ಮೇಲೆ ಹಾಕಿಸಿಕೊಂಡಿರುವ ವಿಶೇಷ ಟ್ಯಾಟೂಗಾಗಿ
  • ಇದು ಕೇವಲ ಸೌಂದರ್ಯವನ್ನು ಸೂಚಿಸುವುದಲ್ಲದೇ, ಅವರ ವೈಯಕ್ತಿಕ ಜೀವನದ ಸಂಬಂಧದ ಬಗ್ಗೆ ಇರುವ ಕಾಳಜಿ
  • ಹಾರ್ದಿಕ್ ಅವರು ಆರಂಭದಲ್ಲಿ ಅತ್ಯಂತ ಸರಳವಾದ ಆಲೋಚನೆಯನ್ನು ಹೊಂದಿದ್ದರು
Hardik Pandya: ಭಾರತೀಯ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಕ್ರಿಕೆಟ್​ ಮೈದಾನದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್​ಗಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಅವರು ಸುದ್ದಿಯಲ್ಲಿರುವುದು ಆಟಕ್ಕಲ್ಲ. ಬದಲಾಗಿ ತಮ್ಮ ಕುತ್ತಿಗೆಯ ಮೇಲೆ ಹಾಕಿಸಿಕೊಂಡಿರುವ ವಿಶೇಷ ಟ್ಯಾಟೂಗಾಗಿ. ಇದು ಕೇವಲ ಸೌಂದರ್ಯವನ್ನು ಸೂಚಿಸುವುದಲ್ಲದೇ, ಅವರ ವೈಯಕ್ತಿಕ ಜೀವನದ ಸಂಬಂಧದ ಬಗ್ಗೆ ತೋರಿಸುವ ಕಲಾಕೃತಿಯಾಗಿ ಹೊರಹೊಮ್ಮಿರುವುದು ಸಧ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಟ್ಯಾಟುವಿನ ಪಯಣ ಬಹಳ ಕುತೂಹಲಕಾರಿಯಾಗಿದ್ದು, ಹಾರ್ದಿಕ್​ ತನ್ನ ಸಂಗಾತಿ ಮಹೀಕಾ ಅವರ ಮೊದಲ ಅಕ್ಷರವಾದ M ಅಕ್ಷರವನ್ನು ಕುತ್ತಿಗೆ ಮೇಲೆ ಹಾಕಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಟ್ಯಾಟೂ ಕಲಾವಿದರ ಕೈಚಳಕದಿಂದ ಇದು ವಿಶೇಷ ವಿನ್ಯಾಸವಾಗಿ ರೂಪಾಂತರಗೊಂಡಿತು.
ಟ್ಯಾಟೂ ವಿನ್ಯಾಸ ತಂಡದ ಪ್ರಕಾರ, ಹಾರ್ದಿಕ್ ಅವರು ಆರಂಭದಲ್ಲಿ ಅತ್ಯಂತ ಸರಳವಾದ ಆಲೋಚನೆಯನ್ನು ಹೊಂದಿದ್ದರು. ತಮ್ಮ ಸಂಗಾತಿ ಮಹೀಕಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸೂಕ್ಷ್ಮವಾಗಿ ಕಾಣುವಂತೆ M ಅಕ್ಷರವನ್ನು ಹಾಕಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಟ್ಯಾಟೂ ಕಲಾವಿದರೊಂದಿಗೆ ನಡೆದ ಸುದೀರ್ಘ ಚರ್ಚೆಗಳ ಸಮಯದಲ್ಲಿ ಚಿತ್ರಣವೇ ಬದಲಾಯಿತು ಎಂದಿದ್ದಾರೆ.
ಅಂತಿಮ ಕಲಾಕೃತಿಯಲ್ಲಿ ಎರಡು ಚಿರತೆಗಳ ನಡುವೆ M ಎಂಬ ಅಕ್ಷರ ಮೂಡಿರುವುದು ಕಾಣಬಹುದಾಗಿದೆ. ಈ ಟ್ಯಾಟೂವನ್ನು ಕೇವಲ ಪ್ರಾಣಿಗಳ ಮೇಲಿನ ಪ್ರೀತಿಗಾಗಿ ಅಥವಾ ಸೌಂದರ್ಯಕ್ಕಾಗಿ ವಿನ್ಯಾಸಗೊಳಿಸಲಾಗಿಲ್ಲ. ಬದಲಾಗಿ, ಹಾರ್ದಿಕ್ ಮತ್ತು ಮಹೀಕಾ ನಡುವಿನ ಗಾಢವಾದ ಬಂಧವನ್ನು ಪ್ರತಿನಿಧಿಸಲು ವಿಶಿಷ್ಟ ವಿನ್ಯಾಸವಾಗಿ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಟ್ಯಾಟೂ ಕುರಿತು ಮಾತನಾಡಿದ ಏಲಿಯೆನ್ಸ್ ಟ್ಯಾಟೂ ಸಂಸ್ಥಾಪಕಿ ಸನ್ನಿ ಭಾನುಶಾಲಿ, ಹಾರ್ದಿಕ್ ಆರಂಭದಲ್ಲಿ ಅವರ ಸಂಗಾತಿಯ ಅಕ್ಷರವನ್ನು ಹಾಕಿಸಿಕೊಳ್ಳುವ ಉದ್ದೇಶದಿಂದ ಬಂದಿದ್ದರು. ಆದರೆ, ಸಂಭಾಷಣೆಗಳು ನಡೆಯುತ್ತಾ ಹೋದಂತೆ, ಅವರ ನಡುವಿನ ಭಾಂದವ್ಯ ಕೇವಲ ಅಕ್ಷರಕ್ಕೆ ಸೀಮಿತವಾಗಿಲ್ಲ ಎಂಬುದು ಬೆಳಕಿಗೆ ಬಂದಿತು. ಅವರಿಬ್ಬರ ಆಳವಾದ ಪ್ರೀತಿ ಈ ರೀತಿಯ ಟ್ಯಾಟೂ ಆಗಿ ಹೊರಹೊಮ್ಮಿತು ಎಂದು ಬಹಿರಂಗಗೊಳಿಸಿದರು.

ಹಾರ್ದಿಕ್​-ಮಹೀಕಾ ಬಗ್ಗೆ

2025ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಈ ಜೋಡಿ ಒಟ್ಟಿಗೆ ಕಂಡ ನಂತರ ಇವರಿಬ್ಬರ ಬಗ್ಗೆ ವದಂತಿಗಳು ಹರಿದಾಡಲು ಪ್ರಾರಂಭಿಸಿದವು. ಅಕ್ಟೋಬರ್ 2025ರಲ್ಲಿ ಹಾರ್ದಿಕ್ ಇನ್‌ಸ್ಟಾಗ್ರಾಂನಲ್ಲಿ ಮಹೀಕಾ ಅವರನ್ನು ಪ್ರೀತಿಸುತ್ತಿರುವುದಾಗಿ ಅಧೀಕೃತವಾಗಿ ಘೋಷಿಸಿದರು. ಅಂದಿನಿಂದ ಇಂದಿನವರೆಗೂ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋಗಳು, ಸ್ಟೋರಿಗಳನ್ನು ಹಂಚಿಕೊಳ್ಳುತ್ತಿದ್ದಾರೆ (ಏಜೆನ್ಸೀಸ್​).