ಹಾರ್ದಿಕ್ ಪಾಂಡ್ಯ ಧರಿಸಿದ ದುಬಾರಿ ವಾಚ್
- ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಹಾರ್ದಿಕ್ ಮಿಂಚು
- ಹಾರ್ದಿಕ್ ಪಾಂಡ್ಯ ಮಾತ್ರವಲ್ಲ, ಅವರು ಧರಿಸಿದ್ದ ವಾಚ್ ಕೂಡ ಮಿಂಚಿದೆ
- ಇದರ ವಿಶೇಷತೆ ಹಾಗೂ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಖಂಡಿತ
ನವದೆಹಲಿ: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 61 ರನ್ಗಳ ಭರ್ಜರಿ ಜಯ ಗಳಿಸಿತು. ಈ ಮ್ಯಾಚ್ನಲ್ಲಿ ಪಾಕ್ ಆರಂಭಿಕ ಬ್ಯಾಟರ್ನ ವಿಕೆಟ್ ಕಬಳಿಸಿದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಮೈದಾನದಲ್ಲಿ ಸಾವಿರಾರೂ ಅಭಿಮಾನಿಗಳ ಗಮನ ಸೆಳೆದರು. ಇಲ್ಲಿ ಕೇವಲ ಪಾಂಡ್ಯ ಮಾತ್ರ ಸದ್ದು ಮಾಡಲಿಲ್ಲ. ಬದಲಿಗೆ ಅವರು ಧರಿಸಿದ್ದ ಈ ನೀಲಿ ಬಣ್ಣದ ಆಕರ್ಷಕ ವಾಚ್ ಕೂಡ ಸದ್ದು ಮಾಡಿದೆ.
ಮಹಾಶಿವರಾತ್ರಿಯ ದಿನದಂದು ನಡೆದ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ವಿಶೇಷ ಆಕರ್ಷಣೆ ಆಗಿತ್ತು. ಇದರ ವಿಶೇಷತೆಯೆಂದರೆ, ಧ್ಯಾನದಲ್ಲಿರುವ ಶಿವನ (ರುದ್ರ) ಮುಖವನ್ನು ಅದರೊಳಗೆ ಇರಿಸಲಾಗಿದೆ. ಶಿವರಾತ್ರಿ ದಿನದಂದೇ ನಡೆದ ಪಂದ್ಯಕ್ಕೆ ಭಗವಂತನ ಆರ್ಶಿವಾದ ಇರಲಿ ಎಂದು ಭಾವಿಸಿ, ಧರಿಸಿದ್ದ ಹಾರ್ದಿಕ್, ಅಂತೆಯೇ ಹೈವೋಲ್ಟೇಜ್ ಪಂದ್ಯದಲ್ಲಿ ತಂಡದ ಪರ ಮಿಂಚಿದ್ದು ಮತ್ತೊಂದು ವಿಶೇಷ.
ಯಾವ ಬ್ರ್ಯಾಂಡ್ ಇದು?
ಈ ಐಷಾರಾಮಿ ವಾಚ್ 'ಜಾಕೋಬ್ & ಕೋ' ಸಂಸ್ಥೆಯದ್ದು. ಎಪಿಕ್ ಎಕ್ಸ್ ಸ್ಪೋರ್ಟ್ 'ರುದ್ರ' ಸ್ಪೆಷಲ್ ಸರಣಿಯ ವಾಚ್ ಇದಾಗಿದೆ. ವಿಶೇಷ ಎಂದರೆ, ಈ ಮಾಡೆಲ್ನ ಕೇವಲ 25 ಕೈಗಡಿಯಾರಗಳನ್ನು ಮಾತ್ರ ವಿಶ್ವಾದ್ಯಂತ ತಯಾರಿಸಲಾಗಿದೆ. ಇದು ಕಂಪನಿಗೆ ಬಹಳ ಆತ್ಮೀಯರು ಯಾರೋ, ಅವರಿಗೆ ಮಾತ್ರ ಸುಲಭವಾಗಿ ಲಭ್ಯ ಎಂಬುದು ಗಮನಾರ್ಹ.
ಬೆಲೆ ಕೇಳಿದ್ರೆ ಬೆರಗಾಗ್ತೀರಾ!
ಈ ಲಿಮಿಟೆಡ್ ಎಡಿಷನ್ ವಾಚ್ ಬೆಲೆ 25 ಲಕ್ಷ ರೂ. ಎನ್ನಲಾಗಿದೆ. ಇನ್ನೊಂದು ಕುತೂಹಲಕಾರಿ ಹೋಲಿಕೆಯೆಂದರೆ, ಇದು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಘಾ ಅವರ ತಿಂಗಳ ವೇತನಕ್ಕಿಂತ ಸುಮಾರು ಮೂರುವರೆ ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೇಂದ್ರ ಒಪ್ಪಂದದ ಪ್ರಕಾರ, ಒಬ್ಬ ಕ್ಯಾಪ್ಟನ್ ತಿಂಗಳಿಗೆ ಸುಮಾರು 7 ಲಕ್ಷ ರೂ. ಸಂಬಳ ಪಡೆಯುತ್ತಾನೆ. ಅಲ್ಲಿಗೆ ಪಾಕ್ ನಾಯಕ ಮೂರು ತಿಂಗಳ ಸಂಬಳವನ್ನು ಪಾವತಿಸಿದರೂ, ಹಾರ್ದಿಕ್ ಹಾಕಿರುವ ಈ ಒಂದು ದುಬಾರಿ ವಾಚ್ ಖರೀದಿಸುವುದು ಅಷ್ಟು ಸುಲಭವಿಲ್ಲ.
ಏನಿದರ ವಿಶೇಷತೆ?
- ಇದು ಗ್ರೇಡ್-5 ಟೈಟಾನಿಯಂನಿಂದ ಮಾಡಲ್ಪಟ್ಟಿದೆ. ಮತ್ತು ತುಂಬಾ ಹಗುರ ಹಾಗೂ ಗಟ್ಟಿಯಾಗಿದೆ
- ಗಡಿಯಾರವು ಅಸ್ಥಿಪಂಜರ ಡಿಸೈನ್ ಹೊಂದಿದ್ದು, ಅದು ಸಂಪೂರ್ಣ ಒಳಭಾಗವನ್ನು ನೋಡಲು ಅವಕಾಶ ಮಾಡಿಕೊಟ್ಟಿದೆ.
- ಇದು ವಾಟರ್ ರೆಸಿಸ್ಟೆಂಟ್ ಆಗಿದ್ದು, 50 ಮೀಟರ್ ಆಳದವರೆಗೆ ನೀರಿನಿಂದ ಯಾವುದೇ ರೀತಿಯಲ್ಲೂ ಡ್ಯಾಮೇಜ್ ಆಗೋದಿಲ್ಲ.
- ಒಂದೇ ಚಾರ್ಜ್‌ನಲ್ಲಿ ಸುಮಾರು 70 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ,(ಏಜೆನ್ಸೀಸ್).