ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

ಆರ್​ಸಿಬಿ ಎದುರು ಸೋಲಿನ ಬೆನ್ನಲ್ಲೇ ಎಂಐ ಫ್ರಾಂಚೈಸಿಯನ್ನು ಅನ್​ಫಾಲೋ ಮಾಡಿದ ಹಾರ್ದಿಕ್​! ಇಷ್ಟಕ್ಕೆಲ್ಲ ಅದೇ ಕಾರಣ...

ಪ್ರಮುಖ ಮುಖ್ಯಾಂಶಗಳು

  • ಆರ್‌ಸಿಬಿ ವಿರುದ್ಧ ಹೀನಾಯ ಸೋಲು
  • ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್​
  • ನಾಯಕತ್ವದಿಂದ ಕೆಳಗಿಳಿಸಿದ್ದು ಹಾಗೂ ಆರ್​ಸಿಬಿ ಎದುರು ಸೋಲುಂಡ ಕಾರಣಕ್ಕೆ ತಂಡವನ್ನು ಅನ್‌ಫಾಲೋ?
Hardik Pandya: ನಿನ್ನೆ (ಮೇ.11) ರಾಯ್‌ಪುರದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಜಯ ಸಾಧಿಸಿತು. ಈ ಹಿನ್ನೆಲೆಯಲ್ಲಿ, ಮುಂಬೈ ಇಂಡಿಯನ್ಸ್ 2026ರ ಸೀಸನ್​ನ ಪ್ಲೇಆಫ್ ರೇಸ್‌ನಿಂದ ಎಕ್ಸಿಟ್​ ಆಗಿದೆ. ಇದರಿಂದಾಗಿ, ಎಂಐ ಫ್ರಾಂಚೈಸಿ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಮತ್ತೊಂದೆಡೆ, ತಮ್ಮದೇ ತಂಡವನ್ನು ಹಾರ್ದಿಕ್​ ಅನ್​ಫಾಲೋ, ಫಾಲೋ ಮಾಡಿದ್ದಾರೆ ಎನ್ನಲಾಗಿದೆ.
ಈ ಸೀಸನ್​ನಲ್ಲಿ ಸತತವಾಗಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕಾರಣ, ಮುಂಬೈ ತಂಡದ ಕ್ಯಾಪ್ಟನ್​ ಸ್ಥಾನದಿಂದ ಹಾರ್ದಿಕ್ ಪಾಂಡ್ಯರನ್ನು ಕೆಳಗಿಳಿಸಲಾಯಿತು. ಅವರ ಜಾಗಕ್ಕೆ ಎಂದಿನಂತೆ ಸೂರ್ಯಕುಮಾರ್​ಗೆ ಜವಾಬ್ದಾರಿಯನ್ನು ನೀಡಲಾಯಿತು. ಮೊದಲೇ ತನ್ನನ್ನು ಹೊರಗಿಟ್ಟ ಬೇಸರದಲ್ಲಿದ್ದ ಪಾಂಡ್ಯ, ಆರ್​ಸಿಬಿ ಎದುರು ಸೋತು ಲೀಗ್​ನಿಂದ ಹೊರಬಿದ್ದ ತಕ್ಷಣವೇ ತಂಡವನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ನಿಮಿಷಗಳಲ್ಲಿ ವೈರಲ್​ ಆಗ್ತಿದ್ದಂತೆ ಹಾರ್ದಿಕ್ ಮತ್ತೆ ಫಾಲೋ ಮಾಡುವ ಮೂಲಕ ಆ ರೀತಿ ಏನೂ ಆಗಿಲ್ಲ ಎಂಬಂತೆ ನಡೆದುಕೊಂಡಿದ್ದಾರೆ. ಆದರೆ, ಬುದ್ಧಿವಂತ ನೆಟ್ಟಿಗರು ಮೊದಲೇ ಇದರ ಸ್ಕ್ರೀನ್​ಶಾಟ್​ ತೆಗೆದುಕೊಂಡಿರುವುದು ಕೂಡ ವೈರಲ್​ ಆಗಿದೆ. 
ಇನ್‌ಸ್ಟಾಗ್ರಾಮ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಅನ್‌ಫಾಲೋ ಮಾಡಿದ್ದ ಹಾರ್ದಿಕ್​, ಫ್ರಾಂಚೈಸಿಯೊಂದಿಗಿನ ಪೋಸ್ಟ್‌ಗಳನ್ನು ಸಹ ಡಿಲೀಟ್​ ಮಾಡಿದ್ದಾರೆ ಎನ್ನಲಾಗಿತ್ತು. ಫ್ರಾಂಚೈಸಿಯ ಜೊತೆಗೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಸೇರಿ ಮುಂಬೈನ ಕೆಲವು ಸ್ಟಾರ್​ ಆಟಗಾರರನ್ನು ಅನ್‌ಫಾಲೋ ಮಾಡಿದ್ದಾಗಿ ವರದಿಗಳು ತಿಳಿಸಿತ್ತು. ಆದರೆ, ಈ ಸುದ್ದಿಗಳು ಭಾರೀ ವೈರಲ್​ ಆಗ್ತಿದ್ದಂತೆ, ಹಾರ್ದಿಕ್​ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯನ್ನು ಫಾಲೋ ಮಾಡ್ತಿರುವುದು ಕಂಡುಬಂದಿದೆ. ಇದು ಕ್ರಿಕೆಟ್​ ಪ್ರಿಯರನ್ನು ಕೆಲ ಕಾಲ ತೀವ್ರ ಗೊಂದಲಕ್ಕೆ ಸಿಲುಕಿಸಿತು.

ಪಂದ್ಯದ ವಿವರ

ಎಂಐ ನೀಡಿದ 167 ರನ್‌ಗಳ ಗುರಿ ಬೆನ್ನಟ್ಟಿದ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ, ಕೇವಲ 5.1 ಓವರ್‌ಗಳಲ್ಲಿ 39 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೃನಾಲ್ ವಿಕೆಟ್ ಪತನದ ನಂತರ ಪಂದ್ಯವು ಮುಂಬೈ ಕಡೆಗೆ ವಾಲಿದಂತೆ ಕಂಡರೂ, ಆರ್‌ಸಿಬಿ ಆಟಗಾರರು ಅಂತಿಮ ಎಸೆತದವರೆಗೆ ತಾಳ್ಮೆ ಕಳೆದುಕೊಳ್ಳದೆ ಹೋರಾಡಿ, ಕೊನೆಯ ಎಸೆತದಲ್ಲಿ ಬೇಕಿದ್ದ ಎರಡು ರನ್‌ಗಳನ್ನು ಪಡೆಯುವ ಮೂಲಕ ಜಯದ ನಗೆ ಬೀರಿದರು. ಈ ಸೋಲಿನಿಂದ ಮುಂಬೈ 19ನೇ ಐಪಿಎಲ್​ ಸೀಸನ್​ನಿಂದ ಅಧಿಕೃತವಾಗಿ ಎಕ್ಸಿಟ್​ ಆಗಿದೆ,(ಏಜೆನ್ಸೀಸ್).