ಗೆಳತಿ ಮಹಿಕಾಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ!
ಮುಂಬೈ: ಟೀಮ್ ಇಂಡಿಯಾ (Team India) ಆಲ್ರೌಂಡರ್ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ತನ್ನ ಗೆಳತಿ ಮಹಿಕಾ ಶರ್ಮಗೆ 1.7 ಕೋಟಿ ರೂ. ಮೌಲ್ಯದ ಮರ್ಸಿಡೀಸ್ ಬೆಂಜ್ ವಿ-ಕ್ಲಾಸ್ (Mercedes-Benz V-Class) ಕಾರು ಉಡುಗೊರೆ ನೀಡಿದ್ದಾರೆ. ಅವರು ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪತ್ನಿ ಮತ್ತು ಪುತ್ರನಿಗೆ 4 ಕೋಟಿ ರೂ. ಮೌಲ್ಯದ ಲ್ಯಾಂಡ್ ರೋವರ್ ಕಾರು ಉಡುಗೊರೆ ನೀಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ 12 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನೂ ಖರೀದಿಸಿದ್ದರು.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ವಾಂಖೆಡೆ ಕ್ರೀಡಾಂಗಣದ ಗ್ರೌಂಡ್ಸ್ಮನ್ಗೆ 10 ಲಕ್ಷ ರೂ. ಮೊತ್ತದ ಚೆಕ್ ಉಡುಗೊರೆ ನೀಡಿ ಕೂಡ ಸುದ್ದಿಯಾಗಿದ್ದರು. ಕಳೆದ ಟಿ20 ವಿಶ್ವಕಪ್ ವೇಳೆ ಈ ಸಿಬ್ಬಂದಿ ಹಾರ್ದಿಕ್ಗೆ ರಾತ್ರಿಯ ವೇಳೆಯೂ ಹೆಚ್ಚುವರಿ ಅವಧಿಯ ಅಭ್ಯಾಸಕ್ಕೆ ನೆರವಾಗಿದ್ದರಿಂದ ಈ ಸಹಾಯ ಮಾಡಿದ್ದರು.