WPL: ಯುಪಿ ವಾರಿಯರ್ಸ್ ಎದುರು ಗುಜರಾತ್ ಜೈಂಟ್ಸ್ಗೆ ರೋಚಕ ಗೆಲುವು
ಮುಂಬೈ: ನಾಯಕಿ ಆಶ್ಲೇ ಗಾರ್ಡ್ನರ್ (65 ರನ್, 41 ಎಸೆತ, 6 ಬೌಂಡರಿ, 3 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಜಾರ್ಜಿಹ್ಯಾ ವೇರ್ಹ್ಯಾಂ (27* ರನ್, 10 ಎಸೆತ,1 ಬೌಂಡರಿ, 3 ಸಿಕ್ಸರ್ ಹಾಗೂ 30ಕ್ಕೆ 2) ಆಲ್ರೌಂಡ್ ಆಟದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ (Gujarat Giants) ಡಬ್ಲುಪಿಎಲ್ (WPL) 4ನೇ ಆವೃತ್ತಿಯಲ್ಲಿ ರನ್ಮಳೆ ಹರಿಸಿ ಯುಪಿ ವಾರಿಯರ್ಸ್ (UP Warriorz) ಎದುರು 10 ರನ್ಗಳ ರೋಚಕ ಗೆಲುವು ಒಲಿಸಿಕೊಂಡಿತು.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಗುಜರಾತ್ಗೆ ಸೋಫಿ ಡಿವೈನ್ (38) ಉತ್ತಮ ಆರಂಭ ನೀಡಿದರು. ನಂತರ ಅನುಷ್ಕಾ ಶರ್ಮ (44) ಹಾಗೂ ಗಾರ್ಡ್ನರ್ ಜತೆಯಾಟ ಸ್ಲಾಗ್ ಓವರ್ನಲ್ಲಿ ವೇರ್ಹ್ಯಾಂ ಬಿರುಸಿನಾಟದಿಂದ ಗುಜರಾತ್ ಅಂತಿಮವಾಗಿ 4 ವಿಕೆಟ್ಗೆ 207 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಎಡಗೈ ಬ್ಯಾಟರ್ ಪೋಬಿ ಲಿಚ್ಫೀಲ್ಡ್ (78 ರನ್, 40 ಎಸೆತ, 8 ಬೌಂಡರಿ, 5 ಸಿಕ್ಸರ್) ಏಕಾಂಗಿ ಸಾಹಸ ನಡುವೆಯೂ ಯುಪಿ ವಾರಿಯರ್ಸ್ 8 ವಿಕೆಟ್ಗೆ 197 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಗುಜರಾತ್ ಜೈಂಟ್ಸ್: 4 ವಿಕೆಟ್ಗೆ 207 (ಬೆಥ್ ಮೂನಿ 13, ಸೋಫಿ ಡಿವೈನ್ 38, ಅನುಷ್ಕಾ ಶರ್ಮ 44, ಆಶ್ಲೇ ಗಾರ್ಡ್ನರ್ 65, ಜಾರ್ಜಿಹ್ಯಾ ವೇರ್ ಹ್ಯಾಂ 27*, ಭಾರತಿ 14*, ಸೋಫಿ ಎಕೆಲ್ಸ್ಟೋನ್ 32ಕ್ಕೆ 2, ಶಿಖಾ ಪಾಂಡೆ 29ಕ್ಕೆ 1). ಯುಪಿ ವಾರಿಯರ್ಸ್: 8 ವಿಕೆಟ್ಗೆ 197 (ಕಿರಣ್ ನವಗಿರೆ 1, ಮೆಗ್ ಲ್ಯಾನಿಂಗ್ 30, ಪೋಬಿ ಲಿಚ್ಫೀಲ್ಡ್ 78, ಹರ್ಲೀನ್ ಡಿಯೋಲ್ 0, ದೀಪ್ತಿ ಶರ್ಮ 1, ಶ್ವೇತಾ 25, ಡಿಯೆಂಡ್ರಾ 12, ಎಕೆಲ್ಸ್ಟೋನ್ 11, ಆಶಾ 27*, ಶಿಖಾ 1*, ರೇಣುಕಾ 25ಕ್ಕೆ 2, ವೇರ್ ಹ್ಯಾಂ 30ಕ್ಕೆ 2, ಡಿವೈನ್ 55ಕ್ಕೆ 2). ಪಂದ್ಯಶ್ರೇಷ್ಠ: ಜಾರ್ಜಿಹ್ಯಾ ವೇರ್ಹ್ಯಾಂ