DC vs GT IPL 2026: ಗುಜರಾತ್ ಟೈಟಾನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯಲ್ಲಿ ಕೊನೆಯ ಕ್ಷಣದವರೆಗೂ ಉಸಿರು ಬಿಗಿಹಿಡಿದು ನೋಡುವಂತಹ ಆಟ ಕಂಡುಬಂದಿತು. ಕೆ.ಎಲ್. ರಾಹುಲ್ ಅವರ ಸಮಯೋಚಿತ 92 ರನ್ ಮತ್ತು ಡೇವಿಡ್ ಮಿಲ್ಲರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ, ದೆಹಲಿ ಕ್ಯಾಪಿಟಲ್ಸ್ ತಂಡವು ಕೇವಲ 1 ರನ್ ಅಂತರದಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಗುಜರಾತ್ ಟೈಟಾನ್ಸ್ ಈ ಸೀಸನ್‌ನ ತನ್ನ ಮೊದಲ ಗೆಲುವನ್ನು ಸಂಭ್ರಮಿಸಿದೆ.
ರಶೀದ್ ಖಾನ್ ಮ್ಯಾಜಿಕ್ ಸ್ಪೆಲ್
ದೆಹಲಿ ತಂಡವು ಸುಲಭವಾಗಿ ಗೆಲುವಿನತ್ತ ಸಾಗುತ್ತಿದ್ದಾಗ ಅಡ್ಡಿಯಾಗಿದ್ದು ಸ್ಪಿನ್ ಮಾಂತ್ರಿಕ ರಶೀದ್ ಖಾನ್. ನಿರ್ಣಾಯಕ ಹಂತದಲ್ಲಿ 3 ವಿಕೆಟ್ ಕಬಳಿಸಿದ ರಶೀದ್, ಪಂದ್ಯದ ಗತಿಯನ್ನೇ ಬದಲಿಸಿದರು.
ಮಿಲ್ಲರ್ ಕಿಚ್ಚು ಹಚ್ಚಿದರೂ ತಪ್ಪದ ಸೋಲು
ಕೊನೆಯ ಓವರ್‌ಗಳಲ್ಲಿ 'ಕಿಲ್ಲರ್' ಮಿಲ್ಲರ್ ಅಬ್ಬರ ಶುರುವಾಯಿತು. ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದ ಮಿಲ್ಲರ್ ಪಂದ್ಯವನ್ನು ಗೆಲುವಿನ ಸಮೀಪ ತಂದರು. ಆದರೆ ಗುಜರಾತ್ ಬೌಲರ್‌ಗಳ ಶಿಸ್ತುಬದ್ಧ ದಾಳಿಯಿಂದಾಗಿ ದೆಹಲಿಗೆ ಅಂತಿಮವಾಗಿ 1 ರನ್ ಕೊರತೆ ಎದುರಾಯಿತು. ಈ ಭರ್ಜರಿ ಜಯದೊಂದಿಗೆ ಶುಭ್‌ಮನ್ ಗಿಲ್ ಪಡೆ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಗುಜರಾತ್ ಭರ್ಜರಿ ಬ್ಯಾಟಿಂಗ್
ನಾಯಕ ಶುಭ್‌ಮನ್ ಗಿಲ್ (70 ರನ್, 45 ಎಸೆತ) ಜವಾಬ್ದಾರಿಯುತ ಆಟವಾಡಿದರೆ, ಜೋಸ್ ಬಟ್ಲರ್ (52 ರನ್, 27 ಎಸೆತ) ಮತ್ತು ವಾಷಿಂಗ್ಟನ್ ಸುಂದರ್ (55 ರನ್, 32 ಎಸೆತ) ಸ್ಫೋಟಕ ಅರ್ಧಶತಕ ಸಿಡಿಸಿದರು. ಇದರ ನೆರವಿನಿಂದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ದೆಹಲಿ ಪರ ಮುಕೇಶ್ ಕುಮಾರ್ 2 ವಿಕೆಟ್ ಪಡೆದರು,(ಏಜೆನ್ಸೀಸ್).