ಜಸ್ಪ್ರಿತ್ ಬುಮ್ರಾ(ಎಡ), ಗ್ಲೆನ್ ಫಿಲಿಪ್ಸ್ (ಬಲ)
- ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ
- ಭಾನುವಾರ (ಮಾ.08) ಅಹಮದಾಬಾದ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ
- ಭಾರತ ವಿರುದ್ಧದ ಫೈನಲ್ಗೂ ಮುನ್ನವೇ ಗ್ಲೆನ್ ಫಿಲಿಪ್ಸ್ ಅಚ್ಚರಿ ಹೇಳಿಕೆ
- ಟೀಮ್ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾಗೆ ವಾರ್ನಿಂಗ್
IND vs NZ Final: ಇದೇ ಭಾನುವಾರ (ಮಾ.06) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ಪಂದ್ಯಕ್ಕಾಗಿ ಬಹಳ ಕಾತರದಿಂದ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳು ಪಿಚ್ ರಿಪೋರ್ಟ್, ಎರಡೂ ತಂಡದ ನಾಯಕರ ಹೇಳಿಕೆಗಳು, ತಂಡದಲ್ಲಿನ ಬದಲಾವಣೆಗಳ ಬಗ್ಗೆ ತಿಳಿಯಲು ಸಾಕಷ್ಟು ಕುತೂಹಲವಿರುತ್ತದೆ. ಅಂತೆಯೇ, ಕಿವೀಸ್ ಆಟಗಾರ ಗ್ಲೇನ್ ಫಿಲಿಪ್ಸ್ ಆಡಿರುವ ಮಾತುಗಳು ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.
ಅಭ್ಯಾಸದ ವೇಳೆ ಮಾತನಾಡಿ, ಭಾರತದ ಜನಸಂಖ್ಯೆ ಈಗ 1.4 ಬಿಲಿಯನ್ ಮೀರಿದೆ. ಇದು ಆತಿಥೇಯ ತಂಡಕ್ಕೆ ಒಳ್ಳೆಯ ಪ್ರತಿಭೆಗಳ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ ಎಂಬುದನ್ನು ಫಿಲಿಪ್ಸ್ ಗಮನಿಸಿದರು. ಟಿ20 ವಿಶ್ವಕಪ್‌ನಲ್ಲಿ ಮೂರು ಉತ್ತಮ ತಂಡಗಳನ್ನು ಅವರು ಸುಲಭವಾಗಿ ಆಡಿಸಬಹುದು. ಅದೇ ನ್ಯೂಜಿಲೆಂಡ್ ಒಂದು ಚಿಕ್ಕ ದೇಶವಾದ ಕಾರಣ, ನಮಗೆ ಆ ಮಟ್ಟಿಗಿನ ಅವಕಾಶಗಳಿಲ್ಲ ಎಂದರು.
"ನಮ್ಮ ದೇಶದಲ್ಲಿ ಭಾರತದಂತೆ ಆಯ್ಕೆ ಮಾಡಲು ಹೆಚ್ಚಿನ ಆಟಗಾರರು ಇಲ್ಲ ಎಂಬುದು ಸ್ಪಷ್ಟ ಎಂದರು. ಇದೇ ವೇಳೆ, ಟೀಮ್ ಇಂಡಿಯಾದ ಬೌಲಿಂಗ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಕುರಿತು ಮಾತನಾಡಿದ ಫಿಲಿಪ್ಸ್, ದ್ವಿಪಕ್ಷೀಯ ಸರಣಿಯಲ್ಲಿ ಅವರನ್ನು ಒಂದಷ್ಟು ಪಂದ್ಯಗಳಲ್ಲಿ ಎದುರಿಸಿದ್ದೇವೆ. ಒಬ್ಬ ಕ್ಲಾಸ್ ಬೌಲರ್ ಆತ. ಸಾಕಷ್ಟು ಏರಿಳಿತಗಳನ್ನು ಹೊಂದಿರುವ ಅತ್ಯುತ್ತಮ ವೇಗಿ. ಡೆತ್ನಲ್ಲಿ ಬೌಲಿಂಗ್ ಆಳಗಳು ಮೆಚ್ಚುವಂತದ್ದು. ಬುಮ್ರಾ ಬೌಲಿಂಗ್ಗೆ ಇಂಗ್ಲೆಂಡ್ ಬ್ಯಾಟರ್ಗಳು ಕೂಡ ಉತ್ತಮ ಪ್ರದರ್ಶನವನ್ನೇ ನೀಡಿದರು ಎಂದರು.
ಆದರೆ, ಬುಮ್ರಾನೂ ಮನುಷ್ಯನೇ ಅಲ್ವಾ? ಆತನಿಗೆ ಬ್ಯಾಡ್ ಡೇ ಅಂತ ಇರಲಿದೆ. ಅದರಲ್ಲೂ, ನಾವಿದ್ದೇವೆ ಅಂದಮೇಲೆ ಖಂಡಿತ ಇರುತ್ತದೆ. ಜಸ್ಪ್ರಿತ್ಗೆ ಕೆಟ್ಟ ದಿನವನ್ನಾಗಿ ಮಾಡುವ ಮೂಲಕ ನಮ್ಮ ತಂಡ ಗುಡ್ ಡೇ ನೋಡುತ್ತೇವೆ. ಅಕಸ್ಮಾತ್, ಅವರೇನಾದರೂ ಉತ್ತಮ ಬೌಲಿಂಗ್ ದಾಳಿ ಮಾಡಿದ್ದೇ ಆದರೆ, ಕೆಲವು ಟ್ಯಾಕ್ಟಿಕ್ಸ್ಗಳನ್ನು ಪ್ರಯೋಗಿಸಬೇಕಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).