ಭಾರತ ತಂಡದ ನಾಯಕ ಶುಭಮಾನ್ ಗಿಲ್ ಐಸಿಸಿ ಏಕದಿನ ಬ್ಯಾಟರ್‌ಗಳ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಟಿ20ಯಲ್ಲಿ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ 230 ಸ್ಥಾನಗಳ ಏರಿಕೆಯೊಂದಿಗೆ 48ನೇ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದ 15 ವರ್ಷದ ವೈಭವ್‌ಗೆ ರ‌್ಯಾಂಕಿಂಗ್‌ನಲ್ಲಿ ಬಡ್ತಿ ಲಭಿಸಿದೆ.
ದುಬೈ: ಭಾರತ ತಂಡದ ನಾಯಕ ಶುಭಮಾನ್ ಗಿಲ್ ಐಸಿಸಿ ಏಕದಿನ ಬ್ಯಾಟರ್‌ಗಳ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಟಿ20ಯಲ್ಲಿ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ 230 ಸ್ಥಾನಗಳ ಏರಿಕೆಯೊಂದಿಗೆ 48ನೇ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದ 15 ವರ್ಷದ ವೈಭವ್‌ಗೆ ರ‌್ಯಾಂಕಿಂಗ್‌ನಲ್ಲಿ ಬಡ್ತಿ ಲಭಿಸಿದೆ.
ಕಳೆದ ಜನವರಿಯಿಂದ ನಂಬರ್ ಒನ್ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್‌ರನ್ನು (794 ರೇಟಿಂಗ್) ಹಿಂದಿಕ್ಕಿ, ಶುಭಮಾನ್ ಗಿಲ್ (801) ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇತ್ತೀಚೆಗೆ ನಡೆದ ನ್ಯೂಜಿಲೆಂಡ್-ವಿಂಡೀಸ್ ಏಕದಿನ ಸರಣಿಯ ನಂತರ ರ‌್ಯಾಂಕಿಂಗ್‌ನಲ್ಲಿ ಬದಲಾವಣೆಯಾಗಿದ್ದು, ಡೆರಿಲ್ ಮಿಚೆಲ್ ಸರಣಿಗೆ ಗೈರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 188 ರನ್‌ಗಳಿಸಿದ ಗಿಲ್ ರಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದರು. ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ (767), ರೋಹಿತ್ ಶರ್ಮ (758) ಕ್ರಮವಾಗಿ 3,4ನೇ ಸ್ಥಾನದಲ್ಲಿದ್ದಾರೆ.
ಟಿ20 ವೈಭವ್‌ಗೆ 230 ಸ್ಥಾನ ಬಡ್ತಿ
ಜಿಂಬಾಬ್ವೆ ವಿರುದ್ಧದ ಎರಡು ಅರ್ಧಶತಕ ಸಿಡಿಸಿ ಮೂರು ಪಂದ್ಯಗಳ ಸರಣಿಯಲ್ಲಿ 151 ರನ್ ಕಲೆಹಾಕಿದ್ದ ವೈಭವ್ ಸೂರ್ಯವಂಶಿ 536 ರೇಟಿಂಗ್‌ನೊಂದಿಗೆ 230 ಸ್ಥಾನಗಳ ಭಾರಿ ಜಿಗಿತ ಕಂಡಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ (910) ಅಗ್ರಸ್ಥಾನ ಕಾಯ್ದುಕೊಂಡಿದ್ದು, 900 ಪ್ಲಸ್ ರೇಟಿಂಗ್ ಸಂಪಾದಿಸಿದ 4ನೇ ಭಾರತೀಯ ಬ್ಯಾಟರ್ ಎನಿಸಿದ್ದಾರೆ.