ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ, ಜರ್ಮನ್ ಮಾಡೆಲ್ ಲಿಜ್‌ಲಾಜ್
- ಐಪಿಎಲ್ನಲ್ಲಿ ಆರ್ಸಿಬಿ ಪರ ಮಿಂಚುತ್ತಿರುವ ವಿರಾಟ್ ಕೊಹ್ಲಿ
- ಈ ವರ್ಷ ಜರ್ಮನ್ ಬೆಡಗಿಯ ಫೋಟೋಗೆ ಲೈಕ್ ಕೊಟ್ಟಿದ್ದ ವಿರಾಟ್
- ವಿರಾಟ್ ಲೈಕ್ನಿಂದ ನೆಟ್ಟಿಗರ ಗಮನ ಸೆಳೆದ ಜರ್ಮನ್ ಬೆಡಗಿ
- ಲಿಜ್‌ಲಾಜ್ ಎಂಬ ಯುವತಿಯಿಂದ ಶಾಕಿಂಗ್ ವಿಷಯ ಬೆಳಕಿಗೆ
Virat Kohli: ನಟಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಫೋಟೊವನ್ನು ಲೈಕ್ ಮಾಡಿದ್ದ ವಿರಾಟ್, ಸ್ಪಷ್ಟನೆ ವೇಳೆ ಇದೊಂದು ಅಲ್ಗಾರಿದಮ್ ಮಿಸ್ಟೇಕ್ ಬಿಟ್ಟರೆ ನನ್ನಿಂದ ಲೈಕ್ ಆದದ್ದಲ್ಲ ಎಂದಿದ್ದರು. ಆದರೆ, ಈ ವರ್ಷದ ಐಪಿಎಲ್ ಆರಂಭದಲ್ಲಿ ಜರ್ಮನಿ ಮೂಲದ ವ್ಲಾಗರ್ ಲಿಜ್‌ಲಾಜ್ ಎಂಬ ಯುವತಿಯ ಫೋಟೋಗೆ ಜನವರಿಯಲ್ಲಿ ವಿರಾಟ್ ಅವರ ಇನ್ಸ್ಟಾ ಖಾತೆಯಿಂದ ಲೈಕ್ ಆಗಿರುವುದು ಗೊತ್ತಾಗಿದ್ದೇ ತಡ, ಇದನ್ನು ನೋಡಿದ ವಿರಾಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿತು.
ಅವನೀತ್ ಕೌರ್ ಫೋಟೋಗೆ ಬಿದ್ದ ಲೈಕ್ಗೆ ಕಳೆದ ಬಾರಿ ಏನೋ ಅಲ್ಗಾರಿದಮ್ ಅಂತ ಹೇಳಿದ್ರು. ಆದರೆ, ಎರಡನೇ ಬಾರಿ ಅದೇ ರೀತಿ ಆಗಿರುವುದಕ್ಕೆ ಏನು ಹೇಳ್ತಾರೆ ಕೊಹ್ಲಿ ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ಭಾರೀ ಚರ್ಚೆಯಾಯಿತು. ಇತ್ತೀಚಿನ ಸಾಮಾಜಿಕ ಮಾಧ್ಯಮ ವಿವಾದದ ನಂತರ, ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿರುದ್ಧ ನೆಗೆಟಿವ್ ಆಗಿ ಮಾತನಾಡಲು ಪತ್ರಕರ್ತರು ಹಣದ ಆಫರ್ ನೀಡಿದ್ದರು ಎಂದು ಜರ್ಮನ್ ಮಾಡೆಲ್ ಲಿಜ್‌ಲಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
'ಫಿಲ್ಮಿಮಂತ್ರ' ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜರ್ಮನ್ ಬೆಡಗಿ, ಕೊಹ್ಲಿ ಬಗ್ಗೆ ಸುಳ್ಳು, ಕೆಟ್ಟದಾಗಿ ಹೇಳಿಕೆಗಳನ್ನು ನೀಡುವಂತೆ ಕೆಲವರು ನನ್ನನ್ನು ಮನವೊಲಿಸಲು ಪ್ರಯತ್ನಿಸಿದರು. ಜೊತೆಗೆ ಹಣದ ಆಫರ್ ಕೂಡ ನೀಡಿದರು. ಕೆಲವು ಪತ್ರಕರ್ತರು ಕೊಹ್ಲಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವಂತೆ ಹೇಳಿದರು ಎಂಬ ಶಾಕಿಂಗ್ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ವಿರಾಟ್ ಕೊಹ್ಲಿ ನನ್ನ ಅಚ್ಚುಮೆಚ್ಚಿನ ಕ್ರಿಕೆಟಿಗ. ಹಣ ಅಥವಾ ಜನಪ್ರಿಯತೆಗಾಗಿ ಏನೂ ತಪ್ಪು ಮಾಡದ ಕೊಹ್ಲಿ ಅವರ ಬಗ್ಗೆ ಸುಖಾಸುಮ್ಮನೆ ಸುಳ್ಳು ಹೇಳುವುದು, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಅವರ ಘನತೆಗೆ ಧಕ್ಕೆ ತರುವುದು ಅಥವಾ ಇಮೇಜ್ ಡ್ಯಾಮೇಜ್ ಮಾಡುವುದರಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಕೆಲವರಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದರೆ. ಸದ್ಯ ಜರ್ಮನ್ ಮಾಡೆಲ್ನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).