ಐರ್ಲೆಂಡ್ ಎದುರು ಭಾರತಕ್ಕೆ ಹೀನಾಯ ಸೋಲು
- ಎರಡು ಪಂದ್ಯಗಳ ಟಿ20 ಸರಣಿಯನ್ನು ಹೀನಾಯವಾಗಿ ಸೋತ ಭಾರತ
- ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಭಾರಿ ಮುಖಭಂಗ
- ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಸಾಲು ಸಾಲು ಟೀಕೆ
Gautam Gambhir: ಇಂಗ್ಲೆಂಡ್ನ ಬೆಲ್ಫಾಸ್ಟ್ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋತಿತು. ಎರಡರಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಶ್ರೇಯಸ್ ಅಯ್ಯರ್ ಪಡೆ ಕ್ರಿಕೆಟ್ ಶಿಶು ಮುಂದೆ ತಲೆಬಾಗಿದ್ದು ಭಾರತೀಯ ಕ್ರಿಕೆಟ್ ಪ್ರಿಯರನ್ನು ಅಕ್ಷರಶಃ ಕೆರಳಿಸಿದೆ. ಇಷ್ಟಕ್ಕೆಲ್ಲ ಕಾರಣ ಹೆಡ್ ಕೋಚ್ ಗೌತಮ್ ಗಂಭೀರ್ ಎಂಬ ಟೀಕೆಗಳ ಮಧ್ಯೆ ಐಸ್ಲ್ಯಾಂಡ್ ಕ್ರಿಕೆಟ್ ವ್ಯಂಗ್ಯವಾಡಿರುವ ರೀತಿ ಸದ್ಯ ಗೌತಿಗೆ ಮುಖಕ್ಕೆ ಹೊಡೆದಂತಿದೆ.
ಟಿ20 ವಿಶ್ವ ಚಾಂಪಿಯನ್ ತಂಡವಾಗಿರುವ ಭಾರತ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದೇ ಐರ್ಲೆಂಡ್ ವಿರುದ್ಧ ಸರಣಿಯನ್ನು 2-0 ಅಂತರದಲ್ಲಿ ಸೋಲಲು ಮುಖ್ಯ ಕಾರಣವಾಯಿತು. ಇದರೊಟ್ಟಿಗೆ ಆರಂಭಿಕ ಬ್ಯಾಟರ್ನ ಸ್ಥಾನದಲ್ಲಿ ಈ ಮೊದಲೇ ವೈಭವ್ ಸೂರ್ಯವಂಶಿಗೆ ಸ್ಥಾನ ಕೊಡಿ ಎಂದು ಎಲ್ಲರೂ ಕೇಳಿಕೊಂಡರು, ಯುವ ಬ್ಯಾಟಿಂಗ್ ಸೆನ್ಸೇಷನ್ಗೆ ಚಾನ್ಸ್ ಕೊಡದೆ, ದರ್ಪ ಮೆರೆದ ಗಂಭೀರ್ಗೆ ಇದೀಗ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಗ್ಯಾಪ್ನಲ್ಲೇ ಐಸ್ಲ್ಯಾಂಡ್ ಕ್ರಿಕೆಟ್ ಗಂಭೀರ್ನಂತಹ ಕೋಚ್ ನಮಗೆ ಬೇಕಿಲ್ಲ ಎಂದು ಲೇವಡಿ ಮಾಡಿದೆ.
ಐಸ್ಲ್ಯಾಂಡ್ ಕ್ರಿಕೆಟ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, "ಗೌತಮ್ ಗಂಭೀರ್ ಅವರಂತಹ ಕೋಚ್ ಅನ್ನ ತಮ್ಮ ತಂಡಕ್ಕೆ ಕರೆದುಕೊಳ್ಳುವ ಆಸಕ್ತಿ ನಮಗಿಲ್ಲ. ಟೀಮ್ ಇಂಡಿಯಾದಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ. ಇಷ್ಟು ಒಳ್ಳೆಯ ತಂಡದೊಂದಿಗೆ ಐರ್ಲೆಂಡ್ ಎದುರು ಇಷ್ಟು ಒಳ್ಳೆಯ ಫಲಿತಾಂಶಗಳನ್ನು ಸಾಧಿಸುವುದು ನಿಜಕ್ಕೂ ಅಸಾಧಾರಣ ಪ್ರತಿಭೆ" ಎಂದು ತೀರ ವ್ಯಂಗ್ಯವಾಡಿದೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಗಂಭೀರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಮೊದಲೇ ವೈಭವ್ ಸೂರ್ಯವಂಶಿಗೆ ಅವಕಾಶ ಕೊಡುವಂತೆ ಸಲಹೆ ನೀಡಿದ್ದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಗೌತಮ್ ಗಂಭೀರ್ ತಂಡದಲ್ಲಿ ಆಲ್‌ರೌಂಡರ್‌ಗಳ ಮೇಲೆಯೇ ಹೆಚ್ಚು ಡಿಪೆಂಡ್ ಆಗಿದ್ದಾರೆ. ಭಾರತಕ್ಕೆ ಉತ್ತಮ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳ ಅಗತ್ಯವಿದೆ. ಇದನ್ನು ಕಡೆಗಣಿಸದ ಗೌತಮ್, ತಮ್ಮ ಅವಧಿಯಲ್ಲೇ ತಂಡದಲ್ಲಿ ಹೆಚ್ಚಿನ ಆಲ್‌ರೌಂಡರ್‌ಗಳನ್ನು ಆಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ಸರಣಿಯತ್ತ ತಂಡದ ಚಿತ್ತ
ಐರ್ಲೆಂಡ್ ಮುಂದೆ ಹೀನಾಯ ಸೋಲುಂಡ ಭಾರತ, ಮುಂದಿನ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯತ್ತ ಸಂಪೂರ್ಣವಾಗಿ ಗಮನಹರಿಸಿದೆ. ಇದೇ ಜುಲೈ 1ರಿಂದ ಆರಂಭವಾಗುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಪಣತೊಟ್ಟಿದೆ. ಸದ್ಯ ಟೀಕೆಗಳ ಸುರಿಮಳೆಯನ್ನೇ ಎದುರಿಸುತ್ತಿರುವ ಗಂಭೀರ್, ತಂಡದಲ್ಲಿ ಏನೆಲ್ಲ ಬದಲಾವಣೆ ಮಾಡಲಿದ್ದಾರಾ? ಎಲ್ಲರ ಆಶಯದಂತೆ ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡಲಿದ್ದಾರಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).